ಮೇಷ: ಆಧ್ಯಾತ್ಮಿಕ ನೇತಾರರಿಗೆ ವಿದೇಶ ಪ್ರಯಾಣ. ವಿದ್ಯುತ್ ಉಪಕರಣ ಕಾರ್ಖಾನೆ ಮಾಲೀಕರಿಗೆ ಲಾಭ. ಸಗಟು ವ್ಯಾಪಾರ ಉತ್ತಮ. ಶುಭಸಂಖ್ಯೆ: 6
ವೃಷಭ: ನೇಕಾರ ವೃತ್ತಿಯವರಿಗೆ ಲಾಭ. ರಾಜಕೀಯ ರಂಗದವರು ಎಚ್ಚರಿಕೆಯಿಂದ ಇರಿ. ನಾಟ್ಯ ಕಲಾವಿದರಿಗೆ ವಿಶೇಷ ಗೌರವ ಪ್ರಾಪ್ತಿ. ಶುಭಸಂಖ್ಯೆ:1
ಮಿಥುನ: ಜಲ ಉತ್ಪನ್ನ ಮಾರಾಟದಲ್ಲಿ ಸಾಧನೆ. ಕುಶಲಕರ್ವಿು ಗಳಿಗೆ ಬೇಡಿಕೆ ಹೆಚ್ಚಲಿದೆ. ಗೃಹೋಪಯೋಗಿ ವಸ್ತು ವ್ಯಾಪಾರದಲ್ಲಿ ಪ್ರಗತಿ. ಶುಭಸಂಖ್ಯೆ: 9
ಕಟಕ: ಮಗಳ ವಿವಾಹ ಯತ್ನ ಸಫಲ. ಕಬ್ಬಿಣ, ಸಿಮೆಂಟ್ ಮಾರಾಟದಲ್ಲಿ ನಿರೀಕ್ಷಿತ ಲಾಭ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 4
ಸಿಂಹ: ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಹೆಚ್ಚಾಗಲಿದೆ. ಪದವಿ ಪ್ರಾಪ್ತಿಯಲ್ಲಿ ಇದ್ದ ಅಡ್ಡಿ ನಿವಾರಣೆ. ಔಷಧ ವ್ಯಾಪಾರದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 5
ಕನ್ಯಾ: ಷೇರು ವ್ಯವಹಾರಕ್ಕೆ ಆತುರ ಬೇಡ. ಕ್ರೀಡಾಪಟುಗಳಿಗೆ ಶುಭದಾಯಕ ದಿನ.ವೈದ್ಯಕೀಯ ವೃತ್ತಿಯವರಿಗೆ ಬೇಡಿಕೆ ಹೆಚ್ಚಾಗಲಿದೆ. ಶುಭಸಂಖ್ಯೆ:9
ತುಲಾ: ಕಲಾವಿದರು ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಳ್ಳಿ. ಇಂಜಿನಿಯರ್ ಪದವೀಧರರು ಉಪನ್ಯಾಸಕ ವೃತ್ತಿಗೆ ಆಯ್ಕೆ ಸಾಧ್ಯತೆ. ಶುಭಸಂಖ್ಯೆ: 7
ವೃಶ್ಚಿಕ: ಜಿಮ್ ತರಬೇತುದಾರರಿಗೆ, ಮಳಿಗೆಯವರಿಗೆ ಲಾಭ. ವಾಹನ ಖರೀದಿ ನಿರ್ಧಾರ. ರೇಷ್ಮೆ, ಜೋಳ ಕೃಷಿಕರಿಗೆ ತಕ್ಕ ಬೆಲೆ ಸಿಗಲಿದೆ. ಶುಭಸಂಖ್ಯೆ:1
ಧನಸ್ಸು: ಗ್ರಂಥಿಗೆ ಅಂಗಡಿ ಸ್ಥಾಪನೆ ನಿರ್ಧಾರ. ತೆಂಗಿನಕಾಯಿ ಮಾರಾಟದಲ್ಲಿ ಅಧಿಕ ಲಾಭ. ವಿಮಾನ ಕ್ಷೇತ್ರದ ಉದ್ಯೋಗಿಗಳಿಗೆ ವರ್ಗ. ಶುಭಸಂಖ್ಯೆ:5
ಮಕರ: ಸರ್ಕಾರಿ ಕಾಮಗಾರಿಯ ಗುತ್ತಿಗೆ ಸಿಗಲಿದೆ. ಗೃಹ ನಿರ್ವಣಕ್ಕೆ ಬ್ಯಾಂಕಿನಿಂದ ಸಹಾಯ. ರೇಷ್ಮೆ ಕೃಷಿಯಲ್ಲಿ ಲಾಭ ಬರುವುದು. ಶುಭಸಂಖ್ಯೆ: 3
ಕುಂಭ: ದೈಹಿಕ ಶಿಕ್ಷಕರಿಗೆ ವರ್ಗಾವಣೆ. ಮಗನ ವಿವಾಹ ಪ್ರಯತ್ನ ಸಫಲವಾಗಲಿದೆ. ನ್ಯಾಯಾಲಯದಲ್ಲಿರುವ ಆಸ್ತಿ ಕಟ್ಲೆ ಅಂತ್ಯವಾಗಲಿದೆ. ಶುಭಸಂಖ್ಯೆ:1
ಮೀನ: ಉದ್ಯಮಿ ಸ್ತ್ರೀಯರಿಗೆ ಶುಭದಿನ. ಉದ್ಯೋಗ ಸ್ಥಳದಲ್ಲಿ ಹೆಚ್ಚಿನ ಆದಾಯ ಬರುವುದು. ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವು. ಶುಭಸಂಖ್ಯೆ: 7