ಕೃಷ್ಣ ಜನ್ಮಾಷ್ಟಮಿಯ ಪಯುಕ್ತ ಔರಾದ್ನಲ್ಲಿ ಜರುಗಲಿರುವ ದಹಿ ಹಂಡಿ ಉತ್ಸವದ ಕರಪತ್ರವನ್ನು ಶನಿವಾರ ಶಾಸಕ ಪ್ರಭು ಚವ್ಹಾಣ್ ಬಿಡುಗಡೆಗೊಳಿಸಿದರು. ರಾಮಶೆಟ್ಟಿ ಪನ್ನಾಳೆ, ಶಿವಾಜಿರಾವ್ ಪಾಟೀಲ, ಧೋಂಡಿಬಾ ನರೋಟೆ, ದಯಾನಂದ ಘುಳೆ, ಶಿವರಾಜ್ ಅಲಮಾಜೆ, ಪ್ರಕಾಶ ಅಲಮಾಜೆ, ಬಸವರಾಜ ಹಳ್ಳೆ ಇತರರಿದ್ದರು.
- ಶಾಸಕ ಪ್ರಭು ಚವ್ಹಾಣ್ ಮಾಹಿತಿ
- ಔರಾದ್ನಲ್ಲಿ ಕರಪತ್ರ ಬಿಡುಗೆಡೆ
ಔರಾದ್: ಹಿಂದೂಗಳ ಸಾಂಪ್ರದಾಯಿಕ ಹಬ್ಬ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಅಮರೇಶ್ವರ ಉತ್ಸವ ಸಮಿತಿಯಿಂದ ಸೆ.4ರಂದು ಮಧ್ಯಾಹ್ನ 2ಕ್ಕೆ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಅದ್ದೂರಿ ದಹಿ ಹಂಡಿ ಉತ್ಸವ ಆಯೋಜಿಸಲಾಗಿದೆ ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.
ಔರಾದ್ ಹಾಗೂ ಕಮಲನಗರ ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಳ್ಳಬೇಕು. ಉತ್ಸವದಲ್ಲಿ ಎರಡು ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಪಿಯುಸಿ, ಪದವಿ, ಡಿಪ್ಲೊಮಾ, ಐಟಿಐ ಸೇರಿ 19 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಒಂದು ವಿಭಾಗ ಹಾಗೂ ಎಲ್ಲರಿಗೂ ಮುಕ್ತವಾದ ಮತ್ತೊಂದು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಸುಮಾರು 25ರಿಂದ 30 ತಂಡಗಳು ಭಾಗವಹಿಸುವ ನಿರೀಕ್ಷೆಯಿದ್ದು, ಎರಡೂ ವಿಭಾಗಗಳ ವಿಜೇತ ತಂಡಗಳಿಗೆ ಪ್ರಥಮ ಬಹುಮಾನ 51 ಸಾವಿರ, ದ್ವೀತಿಯ 31 ಸಾವಿರ ಹಾಗೂ ತೃತೀಯ 21 ಸಾವಿರ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಲು ಆ.23ರಿಂದ ನೋಂದಣಿ ಆರಂಭವಾಗಲಿದ್ದು, ಆ.31 ಕೊನೆಯ ದಿನವಾಗಿದೆ. ನೋಂದಣಿಗೆ ಆಯೋಜಕರನ್ನು ಸಂಪರ್ಕಿಸುವಂತೆ ಹೇಳಿದರು.
ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ತಂಡಗಳು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ಪರ್ಧಿಗಳು ಅಗತ್ಯ ತರಬೇತಿ ಪಡೆದು ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಭಾಗವಹಿಸಬೇಕು. ಅಲ್ಲದೆ, ಭಾಗವಹಿಸುವ ಪ್ರತಿಯೊಂದು ತಂಡದವರು ಮುಚ್ಚಳಿಕೆ ಪತ್ರ ನೀಡುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಶಿವಾಜಿರಾವ ಪಾಟೀಲ್, ಧೋಂಡಿಬಾ ನರೋಟೆ, ದಯಾನಂದ ಘೂಳೆ, ಶಿವರಾಜ್ ಅಲಮಾಜೆ, ಪ್ರಕಾಶ ಅಲಮಾಜೆ, ಬಸವರಾಜ ಹಳ್ಳೆ ಇತರರಿದ್ದರು.