ಹಲಸಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷ ಫಾರೂಕ್ ಪಾಷಾ ಮತ್ತು ಉಪಾಧ್ಯಕ್ಷ ಎಚ್.ಎಂ.ನಾಗರಾಜು ಅವರನ್ನು ಸನ್ಮಾನಿಸಲಾಯಿತು.
- ಡಿ.ಹಲಸಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ
- ತನ ಅಧ್ಯಕ್ಷರಾಗಿ ಧನಗೂರು ಗ್ರಾಮದ ಫಾರೂಕ್ ಪಾಷಾ ಮತ್ತು ಉಪಾಧ್ಯಕ್ಷರಾಗಿ ಡಿ.ಹಲಸಹಳ್ಳಿ ಗ್ರಾಮದ ಎಚ್.ಎಂ.ನಾಗರಾಜು
ಹಲಗೂರು: ಸಮೀಪದ ಡಿ.ಹಲಸಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಧನಗೂರು ಗ್ರಾಮದ ಫಾರೂಕ್ ಪಾಷಾ ಮತ್ತು ಉಪಾಧ್ಯಕ್ಷರಾಗಿ ಡಿ.ಹಲಸಹಳ್ಳಿ ಗ್ರಾಮದ ಎಚ್.ಎಂ.ನಾಗರಾಜು ಅವಿರೋಧವಾಗಿ ಆಯ್ಕೆಯಾದರು.
12 ಸದಸ್ಯ ಬಲದ ಸಂಘಕ್ಕೆ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಡಿ.ಎಫ್.ಫಾರೂಕ್ ಪಾಷಾ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಗರಾಜು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಚುನಾವಣಾಧಿಕಾರಿ ಜಿ.ಎಂ.ರಾಮಕೃಷ್ಣ ಅವಿರೋಧ ಆಯ್ಕೆ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಡಿ.ಎಫ್.ಫಾರೂಕ್ ಪಾಷಾ ಮಾತನಾಡಿ, ಸಹಕಾರ ಇಲಾಖೆಯಿಂದ ಸಂಘದ ಸದಸ್ಯರಿಗೆ ದೊರಕುವ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ, ಸಾಲ ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸುವ ಕೆಲಸ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡುವ ಮೂಲಕ ಸಹಕಾರ ಸಂಘದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ಉಪಾಧ್ಯಕ್ಷ ಎಚ್.ಎಂ.ನಾಗರಾಜು ಮಾತನಾಡಿ, ಸಂಘದಲ್ಲಿ ಮತ್ತಷ್ಟು ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಶ್ರಮಿಸಲಾಗುವುದು ಎಂದರು.
ಸಂಘದ ನಿರ್ದೇಶಕರಾದ ಬಾಣಸಮುದ್ರ ಶ್ರೀಧರ್, ಬಿ.ಎಂ.ರಾಮಚಂದ್ರ, ಸಿ.ದೊಡ್ಡಸ್ವಾಮಿ, ಪುಟ್ಟಸ್ವಾಮಿ, ಜಯರಾಮೇಗೌಡ, ಮಾದಪ್ಪ, ಸಿದ್ದಲಿಂಗೇಗೌಡ, ಮೇಲ್ವೀಚಾರಕ ಪುಟ್ಟರಾಜು, ಕೆ.ಗೀತಾ, ಕಾರ್ಯದರ್ಶಿ ಡಿ.ರವಿಚಂದ್ರ, ಗುಮಾಸ್ತ ರಾಚಯ್ಯ ಇತರರಿದ್ದರು.