ದೊಡ್ಡಬಳ್ಳಾಪುರ ತಾಲೂಕು ಕೊಡಿಗೇಹಳ್ಳಿಯಲ್ಲಿ ಮಂಜುನಾಥ ಅವರ ಮನೆಯಲ್ಲಿ ಸಿಲಿಂಡರ್ ಕಳವು ಮಾಡಿ ಹೊತ್ತೊಯ್ಯುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ದೊಡ್ಡಬಳ್ಳಾಪುರ : ಇರಾನ್, ಇರಾಕ್- ಮತ್ತು ಅಮೆರಿಕ ಯುದ್ಧದಿಂದಾಗಿ ದೇಶದಲ್ಲಿ ಗ್ಯಾಸ್ ಸಿಲಿಂಡರ್ ಸಮಸ್ಯೆ ಎದುರಾಗಿದ್ದು, ಮನೆಗಳಲ್ಲಿನ ಸಿಲಿಂಡರ್ ಕಳವಾಗುತ್ತಿದೆ. ಇದೀಗ ದೊಡ್ಡಬಳ್ಳಾಪುರದಲ್ಲಿಯೂ ಸಿಲಿಂಡರ್ ಕಳವು ಪ್ರಾರಂಭವಾಗಿದ್ದು, ಜನರು ಚಿನ್ನಾಭರಣಗಳಿಗೆ ಕೊಟ್ಟಷ್ಟೇ ಎಚ್ಚರವನ್ನು ಗ್ಯಾಸ್ ಸಿಲಿಂಡರ್ ಮೇಲೂ ಕೊಡಬೇಕಾದ ಅನಿವಾರ್ಯತೆ ಎದುರಾಗಿದೆ.
ತಾಲೂಕಿನ ಕೊಡಿಗೇಹಳ್ಳಿಯ ಗಣಪತಿ ದೇವಸ್ಥಾನದ ಹಿಂಭಾಗದ ಮಂಜುನಾಥ್ ಎಂಬುವವರ ಮನೆಯಲ್ಲಿ ಸಿಲಿಂಡರ್ ಕಳವು ಮಾಡಲಾಗಿದೆ. ಮನೆಯವರು ಕೆಲಸದ ಮೇರೆಗೆ ಹೊರಗೆ ಹೋಗಿದ್ದಾಗ ಮನೆ ಬಾಡಿಗೆಗೆ ಕೇಳುವ ನೆಪದಲ್ಲಿ ಬಂದಿದ್ದ ವ್ಯಕ್ತಿ ಪಾರ್ಕಿಂಗ್ನಲ್ಲಿಡಲಾಗಿದ್ದ ಸಿಲಿಂಡರ್ ಕಳವು ಮಾಡಿದ್ದಾನೆ.
ಸೋಮವಾರ ಮಂಜುನಾಥ್ ಮನೆ ಬಳಿ ಬಂದಿದ್ದ ವ್ಯಕ್ತಿ, ಅಕ್ಕಪಕ್ಕದ ಮನೆಯವರನ್ನು ಮನೆ ಬಾಡಿಗೆಗೆ ಇದೆಯಾ ಎಂದು ಕೇಳಿದ್ದಾನೆ. ೋನ್ನಲ್ಲಿ ಮಾತನಾಡುತ್ತಾ ಮಂಜುನಾಥ್ ಅವರ ಮನೆಯೊಳಗೆ ಬಂದವನು ಪಾರ್ಕಿಂಗ್ನಲ್ಲಿ ಇಡಲಾಗಿದ್ದ ಸಿಲಿಂಡರ್ ಹೊತ್ತೊಯ್ದಿರುವ ದೃಶ್ಯಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.