Cyber ​​fraud 
ರಾಜ್ಯ

ಎರಡು ವರ್ಷದಲ್ಲಿ 56 ಸಾವಿರ ಕೋಟಿ ಸೈಬರ್ ವಂಚನೆ

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಸೈಬರ್ ಅಪರಾಧ ತಡೆಗೆ ಹೊಸ ಕಾರ್ಯತಂತ್ರ
  • ₹ 11,158 ಕೋಟಿ ಸೈಬರ್ ವಂಚನೆ ಹಣ ರಕ್ಷಣೆ

ಬೆಂಗಳೂರು:

ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ಪರಿಣಾಮಕಾರಿಯಾಗಿ ತಡೆಯಲು ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (ಐ4ಸಿ) ಸಮಗ್ರ ಕಾರ್ಯವಿಧಾನವನ್ನು ಜಾರಿಗೊಳಿಸಿದ್ದು, ಕಳೆದ ಎರಡು ವರ್ಷದಲ್ಲಿ ₹ 56,087 ಕೋಟಿ ಸೈಬರ್ ವಂಚಕರ ಪಾಲಾಗಿದೆ.

2023-24ರಿಂದ 2025-26ರ (ಜೂನ್)ವರೆಗಿನ ಅವಧಿಯಲ್ಲಿ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್‌ನಲ್ಲಿ 53.87 ಲಕ್ಷಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಈ ಸಂಬಂಧ 1.81 ಲಕ್ಷಕ್ಕೂ ಹೆಚ್ಚು ಎಫ್‌ಐಆರ್‌ಗಳು ದಾಖಲಾಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಗೋಲ್ಡ್‌ನ್ ಅವರ ಅವಧಿಯಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ದೂರುದಾರರಿಂದ ಪಡೆಯಲಾದ ಮಾಹಿತಿಯನ್ವಯ 9,079 ಕೋಟಿ ರೂ.ಮೊತ್ತವನ್ನು ಫ್ರೀಜ್ ಮಾಡಲಾಗಿದೆ. 206 ಕೋಟಿಗೂ ಅಧಿಕ ಹಣವನ್ನು ಸಂತ್ರಸ್ತರಿಗೆ ಮರುಪಾವತಿಸಲಾಗಿದೆ.

32 ಲಕ್ಷ ದೂರು:

ರಾಷ್ಟ್ರೀಯ ಸೈಬರ್ ಪೋರ್ಟಲ್ (ಎನ್‌ಸಿಆರ್‌ಪಿ)ಅಡಿ ದಾಖಲಾಗಿರುವ ವಂಚನೆ ತಡೆ ವ್ಯವಸ್ಥೆ ಹಾಗೂ ಅತ್ಯಾಧುನಿಕ ಡಿಜಿಟಲ್ ತನಿಖಾ ಮೂಲ ಸೌಕರ್ಯಗಳ ಮೂಲಕ ಸೈಬರ್ ಅಪರಾಧಗಳ ವಿರುದ್ಧ ವ್ಯಾಪಕ ತುರ್ತು ಕ್ರಮ ಕೈಗೊಂಡಿದೆ. ಸಿಟಿಜನ್ ಫೈನಾನ್ಷಿಯಲ್ ಸೈಬರ್ ಫ್ರಾಡ್ ರಿಪೋರ್ಟಿಂಗ್ ಮತ್ತು ಮ್ಯಾನೇಜ್ಮೆಂಟ್ ಸಿಸ್ಟಮ್ (ಸಿಎಎ್ಆರ್‌ಎಂಎಸ್) ಮೂಲಕ 2026ರ ಜೂನ್ 30ರವರೆಗೆ 32.80 ಲಕ್ಷಕ್ಕೂ ಹೆಚ್ಚು ದೂರುಗಳ ತನಿಖೆ ನಡೆಸಲಾಗಿದೆ. ಅವುಗಳ ಪೈಕಿ ಅಂದಾಜು 11,158 ಕೋಟಿ ರೂ.ಮೊತ್ತವನ್ನು ಸೈಬರ್ ವಂಚಕರಿಂದ ಜಪ್ತಿ ಮಾಡಲಾಗಿದೆ.

ಸೈಬರ್ ಪ್ರರಕಣಕ್ಕೆ ವಿಶೇಷ ಆಧ್ಯತೆ:

ಕೇಂದ್ರ ಸರ್ಕಾರ ಸೈಬರ್ ಪ್ರಕರಣಗಳಿಗೆ ವಿಶೇಷ ಆಧ್ಯತೆ ನೀಡಿದೆ. ವಂಚಕರ ವಿರುದ್ಧ ಕಾರ್ಯಾಚರಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಎನ್‌ಸಿಆರ್‌ಪಿಸಿಎ್ಆರ್‌ಎಂಎಸ್ ಹೊಸ ಪ್ರಮಾಣಿತ ಕಾರ್ಯಾಚರಣಾ ವಿಧಾನ ಜಾರಿಗೊಳಿಸಿದೆ. ಇದರಡಿ ಬ್ಯಾಂಕ್‌ಗಳೊಂದಿಗೆ ಸಮನ್ವಯ, ವಂಚನೆ ಹಣ ಮರುಪಡೆಯುವುದು, ಫ್ರೀಜ್ ವಿಧಾನ ತೆರವುಗೊಳಿಸುವುದು ಹಾಗೂ ಹಣವನ್ನು ನಿಜವಾದ ಮಾಲೀಕರಿಗೆ ಹಿಂದಿರುಗಿಸುವ ಪ್ರಕ್ರಿಯೆಯನ್ನು ಏಕರೂಪಗೊಳಿಸಿದೆ.

ಅಂತರ್ ರಾಜ್ಯ ಸಮನ್ವಯ ಮತ್ತು ಡಿಜಿಟಲ್ ಫೋರೆನ್ಸಿಕ್ ಸಾಮರ್ಥ್ಯಗಳನ್ನು ಬಲಪಡಿಸಲು ಕೇಂದ್ರ ಸರ್ಕಾರವು ಅತ್ಯಾಧುನಿಕ ಸೈಬರ್ ವಂಚನೆ ತಡೆ ಕೇಂದ್ರ (ಸಿಎ್ಎಂಸಿ) ಸ್ಥಾಪಿಸಿದೆ. ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆ, ದೂರಸಂಪರ್ಕ ಸೇವಾ ಪೂರೈಕೆದಾರರು, ಐಟಿ ಮಧ್ಯವರ್ತಿಗಳು ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು ಜಾರಿ ಸಂಸ್ಥೆಗಳ ಪ್ರತಿನಿಧಿಗಳು ಸೈಬರ್ ಅಪರಾಧ ತನಿಖೆಗೆ ನೆರವಾಗುವ ನಿಟ್ಟಿನಲ್ಲಿ ವಿವಿಧ ರಾಜ್ಯಗಳ ನಡುವಿನ ಅಪರಾಧ ಜಾಲಗಳ ವಿಶ್ಲೇಷಣೆ ನಡೆಸಲಾಗುತ್ತಿದೆ. ಇದರ ಫಲವಾಗಿ 29,837ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖಾ ನೆರವಿಗಾಗಿ 2.33 ಲಕ್ಷಕ್ಕೂ ಹೆಚ್ಚು ವಿನಂತಿಗಳು ಸ್ವೀಕರಿಸಲಾಗಿದೆ.

30 ಲಕ್ಷ ಶಂಕಿತ ಖಾತೆ ಗುರುತು

ಬ್ಯಾಂಕ್‌ಗಳಲ್ಲಿ ತೆರೆಯಲಾಗಿರುವ ನಕಲಿ ಮತ್ತು ಸಂಶಯಾಸ್ಪದ ಖಾತೆಗಳನ್ನು ಗುರುತಿಸಲು 2024ರ ಸೆಪ್ಟೆಂಬರ್ 10ರಂದು ಆರಂಭಿಸಲಾದ ವಿಶೇಷ ಕಾರ್ಯಾಚರಣೆಯಿಂದ 2026ರ ಜೂನ್ ಅಂತ್ಯದ ವೇಳೆಗೆ 30.48 ಲಕ್ಷ ಶಂಕಿತ ಖಾತೆ ಹಾಗೂ 32.08 ಲಕ್ಷ ನಕಲಿ ಖಾತೆಗಳನ್ನು ಪತ್ತೆ ಮಾಡಲಾಗಿದೆ. ಇಂತಹ ಖಾತೆಗಳ ಮೂಲಕ 25,698 ಕೋಟಿಗೂ ಅಧಿಕ ಮೌಲ್ಯದ ವಹಿವಾಟು ನಡೆದಿರುವುದನ್ನು ತಡೆಹಿಡಿಯಲಾಗಿದೆ.

ಸೈಬರ್ ಹಾಟ್‌ಸ್ಪಾಟ್:

ದೇಶದ ಪ್ರಮುಖ ಸೈಬರ್ ಅಪರಾಧ ಹಾಟ್‌ಸ್ಪಾಟ್‌ಗಳಾದ ಮೇವಾತ್, ಜಮ್ತಾರಾ, ಅಹಮದಾಬಾದ್, ಹೈದರಾಬಾದ್, ಚಂಡೀಗಢ್, ವಿಶಾಖಪಟ್ಟಣಂ ಮತ್ತು ಗುವಾಹಟಿ ಪ್ರದೇಶಗಳ ಮೇಲೆ ನಿಗಾ ಇಡಲು 7 ಜಂಟಿ ಸೈಬರ್ ತಂಡಗಳನ್ನು ಕೇಂದ್ರ ರಚನೆ ಮಾಡಿದೆ. ದೆಹಲಿ ಮತ್ತು ಅಸ್ಸಾಂನಲ್ಲಿ ರಾಷ್ಟ್ರೀಯ ಡಿಜಿಟಲ್ ತನಿಖಾ ಕೇಂದ್ರ ಸ್ಥಾಪಿಸಲಾಗಿದೆ. ದೆಹಲಿಯ ಕೇಂದ್ರವು ಇದುವರೆಗೆ 14,064ಕ್ಕೂ ಹೆಚ್ಚು ಪ್ರಕರಣಗಳಲ್ಲಿ ರಾಜ್ಯಗಳ ಕಾನೂನು ಜಾರಿ ಸಂಸ್ಥೆಗಳಿಗೆ ತಾಂತ್ರಿಕ ನೆರವು ನೀಡಿದೆ. ಅಲ್ಲದೇ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಸೈಬರ್ ಅಪರಾಧ ತಡೆಗಟ್ಟುವಿಕೆ ಯೋಜನೆ (ಸಿಸಿಪಿಡಬ್ಲೂೃಸಿ) ಕೇಂದ್ರ ಸರ್ಕಾರ ರಚಿಸಿದೆ.