ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರಾಜಧಾನಿ ಬೆಂಗಳೂರಿನಲ್ಲಿ ಸೈಬರ್‌ಕ್ರೈಂ ಪ್ರಕರಣಗಳಿಗೆ ಅಂಕುಶವೇ ಇಲ್ಲದಂತಾಗಿದೆ, ನಗರದ ಗಡಿ ಹಂಚಿಕೊಂಡಿರುವ ಗ್ರಾಮಾಂತರ ಜಿಲ್ಲೆಯೂ ಇದೇ ದಾರಿಯಲ್ಲಿದ್ದು ಕೇವಲ 6 ತಿಂಗಳ ಅವಧಿಯಲ್ಲಿ 215 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ.
ಪ್ರಸಕ್ತ ಸಾಲಿನ ಏಪ್ರಿಲ್ ತಿಂಗಳಲ್ಲಿ 33 ಸೈಬರ್ ವಂಚನೆ ಪ್ರಕರಣ ದಾಖಲಾಗಿದ್ದರೆ ಮೇನಲ್ಲಿ 46 ಪ್ರಕರಣ, ಜೂನ್ 37, ಜುಲೈ 28 ಆಗಸ್ಟ್‌ನಲ್ಲಿ 30 ಹಾಗೂ ಸೆಪ್ಟೆಂಬರ್‌ನಲ್ಲಿ 41 ಪ್ರಕರಣಗಳು ದಾಖಲಾಗಿವೆ. ಪ್ರತಿ ತಿಂಗಳು ಇಂಥ ಪ್ರಕರಣಗಳು ದಾಖಲಾಗುತ್ತಿವೆ ಇದರಲ್ಲಿ ಬಹಳಷ್ಟು ಮಂದಿ ಠಾಣೆ ಮೆಟ್ಟಿಲೇರುವುದಿಲ್ಲ. ಇವುಗಳೂ ಸೇರಿದರೆ ಇಂಥ ಪ್ರಕರಣಗಳ ಸಂಖ್ಯೆ ಮತ್ತಷ್ಟು ಕಂಡುಬರಲಿದೆ.
ವಾಟ್ಸಾಪ್ ಗ್ರೂಪ್‌ಗಳಲ್ಲಿ ಕರಾಮತ್ತು:
ದಿನೆ ದಿನೇ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ವಿದ್ಯಾವಂತ ಸಮುದಾಯದವರೇ ಹೆಚ್ಚು ವಂಚಕರ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಗ್ರೂಪ್‌ಗಳಲ್ಲಿ ಎಪಿಕೆ ೈಲ್‌ಗಳನ್ನು ಕಳುಹಿಸುತ್ತಿರುವ ವಂಚಕರ ಜಾಲಕ್ಕೆ ಗ್ರೂಪಿನಲ್ಲಿನ ಸದಸ್ಯರು ಸುಲುಭವಾಗಿ ಸಿಲುಕಿತ್ತಿರುವುದು ಕಂಡುಬರುತ್ತಿದೆ. ವಿವಿಧ ಸಂಘಟನೆಗಳು, ಶಾಲಾ ಕಾಲೇಜುಗಳ ವಾಟ್ಸ್ಾ ಗ್ರೂಪ್‌ಗಳು, ವಿವಿಧ ಇಲಾಖೆಯ ಅಧಿಕಾರಿಗಳ ಗ್ರೂಪ್‌ಗಳಲ್ಲಿ ಎಪಿಕೆ ೈಲ್‌ಗಳು ಹರಿದಾಡುತ್ತಿದ್ದರು ಈ ೈಲ್‌ಗಳನ್ನು ಓನ್ ಮಾಡಿದರೆ ಮೊಬೈಲ್ ಹ್ಯಾಂಗ್ ಆಗುತ್ತದೆ ಕೆಲವೇ ನಿಮಿಷಗಳಲ್ಲಿ ಬ್ಯಾಂಕ್ ಖಾತೆಯಲ್ಲಿನ ಹಣವೂ ಮಾಯವಾಗುತ್ತಿದೆ ಎಂಬ ಆರೋಪಗಳು ಹೆಚ್ಚೆಚ್ಚು ಕೇಳಿಬರುತ್ತಿವೆ.
ಡಿಸಿ ಹೆಸರಿನಲ್ಲಿ ಹಣಕ್ಕೆ ಬೇಡಿಕೆ:
ಈ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಡಾ.ಕೆ.ಶಿವಶಂಕರ್ ಹೆಸರಿನಲ್ಲಿ ಸೈಬರ್ ವಂಚಕರು ಇಲಾಖೆ ಅಧಿಕಾರಿಗಳ ನಂಬರಿಗೆ ಸಂದೇಶ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ನಾನು ತುರ್ತು ಸಭೆಯಲ್ಲಿದ್ದು ತಕ್ಷಣ 50 ಸಾವಿರ ರೂಪಾಯಿ ಬೇಕಾಗಿದೆ ತಕ್ಷಣ ಈ ನಂಬರಿಗೆ ಪೋನ್ ಪೇ ಮಾಡಿ ಎಂಬ ಸಂದೇಶ ರವಾನಿಸಲಾಗಿತ್ತು. ಹಲವು ಪೊಲೀಸ್ ಅಧಿಕಾರಿಗಳ ನಂಬರಿಗೂ ಈ ಸಂದೇಶ ರವಾನೆಯಾಗಿತ್ತು. ಅಧಿಕಾರಿಗಳು ಆಶ್ಚರ್ಯಗೊಂಡು ವಿಚಾರಿಸಿದಾಗ ಇದು ಸೈಬರ್ ವಂಚಕರ ಕರಾಮತ್ತು ಎಂಬುದು ತಿಳಿದುಬಂದಿತ್ತು. ಈ ಬಗ್ಗೆ ವಿಶ್ವನಾಥಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಮುಖವಾಗಿ ಸೈಬರ್ ವಂಚಕರು ಬ್ಯಾಂಕ್ ಖಾತೆಗಳಿಂದ ಹಣಕಾಸಿಗಾಗಿ ವಂಚನೆ ಮಾಡುತ್ತಾರೆ ಒಟಿಪಿ ಪಡೆದು ಕ್ಷಣಾರ್ಧದಲ್ಲಿ ಖಾತೆಯಲ್ಲಿನ ಹಣ ವರ್ಗಾವಣೆ ಮಾಡಿಕೊಳ್ಳುತ್ತಾರೆ. ಆನ್‌ಲೈನ್ ಲಿಂಕ್‌ಗಳ ಮೂಲಕ ಹಣ ವಂಚಿಸುತ್ತಾರೆ, ವಾಟ್ಸ್‌ಅ್ ಲಿಂಕ್‌ಗಳ ಮೂಲಕ ವಂಚನೆ, ಇನ್‌ಸ್ಟ್ರಾಗ್ರಾಂ, ೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ ಇಡುವುದು, ಜತೆಗೆ ಬ್ಲಾಕ್‌ಮೇಲ್ ಮಾಡುವುದು ಸಾಮಾನ್ಯವಾಗಿದೆ, ಜಾಲತಾಣಗಳಲ್ಲಿ ಲೈಂಗಿಕ ಕಿರುಕುಳದಂಥ ಪ್ರಕರಣಗಳು ಕಂಡುಬರುತ್ತಿವೆ, ಡಿಜಿಟಲ್ ಅರೆಸ್ಟ್ ಎಂಬುದು ಸಾಮಾನ್ಯ ಎನ್ನುವಂತಾಗಿದೆ.
ಹಣ ಕ್ರೆಡಿಟ್ ಆಗಿರುವಂತೆ ಸಂದೇಶವನ್ನು ರವಾನಿಸುವ ವಂಚಕರು ಹಣ ವರ್ಗಾವಣೆ ವೇಳೆ ತಪ್ಪಿ ನಿಮ್ಮ ಖಾತೆಗೆ ಹಣ ಜಮೆ ಆಗಿದೆ ದಯವಿಟ್ಟು ಆ ಹಣವನ್ನು ವಾಪಸ್ ಕಳುಹಿಸುವಂತೆ ಕರೆ ಮಾಡುತ್ತಾರೆ ಇದನ್ನು ಪರಿಶೀಲಿಸಿದ ವೇಳೆ ಅವರು ಕಳುಹಿಸಿರುವ ಸಂದೇಶದಲ್ಲಿ ಹಣ ಕ್ರೆಡಿಟ್ ಎಂದೇ ಇರುತ್ತೆ. ಅಯ್ಯೋ ಪಾಪ ಎಂದು ಹಣವನ್ನು ಅವರಿಗೆ ಪೋನ್ ೇ ಮಾಡುವವರ ಸಂಖ್ಯೆ ಸಾಮಾನ್ಯವಾಗಿದೆ. ಆದರೆ ವಂಚಕರು ಕಳುಹಿಸಿರುವ ಸಂದೇಶವೇ ನಕಲಿಯಾಗಿರುತ್ತದೆ ನಂತರದಲ್ಲಿ ಪರಿಶೀಲಿಸಿದಾಗ ವಂಚನೆ ಬಯಲಾಗುತ್ತದೆ ಹಣ ಕಳೆದುಕೊಂಡವರು ಪೆಚ್ಚುಮೊರೆ ಹಾಕಿಕೊಳ್ಳುವಂತಾಗಿದೆ.
ಮಿಲ್ಲರ್ಸ್ ರಸ್ತೆಯಲ್ಲಿ ಠಾಣೆ:
ಜಿಲ್ಲೆಯಲ್ಲಿ ಸೈಬರ್ ಕ್ರೈಂ ಪ್ರಕರಣ ದಾಖಲಿಸಲು ಪ್ರತ್ಯೇಕ ಠಾಣೆಯಿಲ್ಲವಾಗಿದ್ದು ಬೆಂಗಳೂರಿನ ಮಿಲ್ಲರ್ಸ್ ರಸ್ತೆಯಲ್ಲಿ ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯ ಪ್ರಕರಣಗಳನ್ನು ದಾಖಲಿಸಲು ಪ್ರತ್ಯೇಕವಾಗಿ ಸೈಬರ್ ಕ್ರೈಂ ಠಾಣೆ ತೆರೆಯಲಾಗಿದೆ. ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲ ಹಾಗೂ ಅನೇಕಲ್ ವ್ಯಾಪ್ತಿಯಲ್ಲಿನ ದೂರುಗಳನ್ನು ಇಲ್ಲಿ ಸ್ವೀಕರಿಸಲಾಗುತ್ತದೆ.
ಸೈಬರ್ ವಂಚನೆಗೊಳಗಾದವರು ಕೇಂದ್ರ ಸರ್ಕಾರದ ಸಹಾಯವಾಣಿ 1930 ಗೆ ಕರೆ ಮಾಡಿ ದೂರು ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.