ಖಾತೆಗಳಿಂದ ಹಣ ಪಡೆಯಲು ಗ್ರಾಹಕರ ಹರಸಾಹಸ money 
ರಾಜ್ಯ

ಖಾತೆಗಳಿಂದ ಹಣ ಪಡೆಯಲು ಗ್ರಾಹಕರ ಹರಸಾಹಸ money

ಪ್ರಮುಖ ಮುಖ್ಯಾಂಶಗಳು

  • ಬ್ಯಾಂಕ್​ ನೌಕರರ ಮುಷ್ಕರ ಬಿಸಿ
ಕೆಜಿಎಫ್​: ವಾರದಲ್ಲಿ 5 ದಿನಗಳ ಕೆಲಸಕ್ಕಾಗಿ ಒತ್ತಾಯಿಸಿ ದೇಶಾದ್ಯಂತ ಬ್ಯಾಂಕ್​ ನೌಕರರ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮುಷ್ಕರದ ಬಿಸಿ ಕೆಜಿಎಫ್​ ನಗರದ ಮೇಲೂ ಬಿದ್ದಿದ್ದರಿಂದ ಎಸ್​ಬಿಐ, ಕೆನರಾ ಬ್ಯಾಂಕ್​, ಯೂನಿಯನ್​ ಬ್ಯಾಂಕ್​ ಸೇರಿ ರಾಷ್ಟ್ರೀಕೃತ ಬ್ಯಾಂಕ್​ಗಳೆಲ್ಲವೂ ಮುಚ್ಚಲ್ಪಟ್ಟಿದ್ದರಿಂದ ಗ್ರಾಹಕರು ತಮ್ಮ ಖಾತೆಗಳಿಂದ ಹಣ ಪಡೆಯಲು ಹರಸಾಹಸ ಪಡುವಂತಾಯಿತು.money
ಈ ಬಾರಿ 24 ರಂದು ನಾಲ್ಕನೇ ಶನಿವಾರ, 25 ರಂದು ಭಾನುವಾರ, 26 ರಂದು ಗಣರಾಜ್ಯೋತ್ಸವ ಒಂದರ ಹಿಂದೆ ಒಂದು ಬಂದಿದ್ದರಿಂದ ಸಾಲು ಸಾಲು ರಜೆಗಳಿಂದ ಬ್ಯಾಂಕ್​ಗಳು ಕಳೆದ ಶನಿವಾರದಿಂದ ಸತತವಾಗಿ 3 ದಿನಗಳಿಂದ ಮುಚ್ಚಲ್ಪಟ್ಟಿದ್ದವು. 27ರ ಮಂಗಳವಾರ ಬ್ಯಾಂಕ್​ಗಳ ಮುಷ್ಕರದ ಮಾಹಿತಿ ಇಲ್ಲದೇ ಇದ್ದುದರಿಂದ ಗ್ರಾಹಕರು ಬೆಳಗ್ಗೆ ಬ್ಯಾಂಕ್​ಗಳಿಗೆ ಬಂದು ಬಾಗಿಲುಗಳು ಹಾಕಿದ್ದರಿಂದ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಬರಿಗೈಲಿ ವಾಪಸ್ಸಾಗುತ್ತಿದ್ದು ಸಾಮಾನ್ಯವಾಗಿ ಕಂಡುಬಂದಿತು.