ನಕಲಿ ವೈದ್ಯರಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಸೇಡಂನಲ್ಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತ್ವಿಕ್ ಪಾಂಡೆ ಅವರಿಗೆ ಜಯ ಕರ್ನಾಟಕ ಸಂಟನೆಯಿಂದ ಮನವಿಪತ್ರ ಸಲ್ಲಿಸಲಾಯಿತು. ರವೀಂದ್ರ ನಾಯಕ್, ರಾಜು ದೊರೆ, ಲೋಕೇಶ ಹಂದರಕಿ, ದಿನೇಶ ನಾಯ್ಕೋಡಿ, ಶರಣು ಬುಡಸಾಣಿ ಇತರರಿದ್ದರು.
- ಜಯ ಕರ್ನಾಟಕ ಸಂಘಟನೆಯಿಂದ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮನವಿ
ಸೇಡಂ: ಯಾವುದೇ ಅಧ್ಯಯನವಿಲ್ಲದ ಕೆಲವರು ವೈದ್ಯ ವೃತ್ತಿಯಲ್ಲಿ ಮುಂದುವರೆದು ಜನರಿಗೆ ಚಿಕಿತ್ಸೆ ನೀಡುತ್ತಿದ್ದು, ಅಂತಹ ನಕಲಿ ವೈದ್ಯರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ರವೀಂದ್ರ ನಾಯಕ್ ಒತ್ತಾಯಿಸಿದರು.
ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತ್ವಿಕ್ ಪಾಂಡೆ ಅವರಿಗೆ ಮನವಿಪತ್ರ ಸಲ್ಲಿಸಿದ ಅವರು, ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಕ್ಲಿನಿಕ್, ಆಸ್ಪತ್ರೆ ಹಾಗೂ ಚಿಕಿತ್ಸಾ ಕೇಂದ್ರಗಳ ಸಮಗ್ರ ಪರಿಶೀಲನೆ ಮಾಡಬೇಕು. ನೋಂದಣಿ ಇಲ್ಲದ ಆಸ್ಪತ್ರೆ, ನಕಲಿ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಇದೆ. ಈ ಸಮಸ್ಯೆಯನ್ನು ತುರ್ತಾಗಿ ಪರಿಗಣಿಸಬೇಕು. ತ ವೈದ್ಯರು, ಶುಶ್ರೂಷಕರು, ತಾಂತ್ರಿಕ ಸಿಬ್ಬಂದಿ ಸೇರಿ ಹಲವು ಹುದ್ದೆಗಳ ಭರ್ತಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಪ್ರಮುಖರಾದ ರಾಜು ದೊರೆ, ಲೋಕೇಶ ಹಂದರಕಿ, ದಿನೇಶ ನಾಯ್ಕೋಡಿ, ಶರಣು ಬುಡಸಾಣಿ, ಬಸವರಾಜ ತಳವಾರ, ಭೀಮಾಶಂಕರ ದಂಡೋತಿ, ಸಂತೋಷ ದೊಡ್ಡಮನಿ, ರವಿ ಜಾಧವ್, ಸಂಜಯ ಹುಣಸೂರ, ಭಾಗೇಶ, ಬೀರಲಿಂಗ, ಪ್ರಶಾಂತ, ಮೌನೇಶ, ಅಭಿ, ಗೋಪಾಲ, ಸುನೀಲ, ಬಸುಗೌಡ, ನಾಗು ದೋರೆ, ರಾಮು ಮೆಕಾನಿಕ್, ಶ್ರೀಕಾಂತ, ರವಿ ಊಡಗಿ, ಭೀಮು ದಂಡೋತಿ ಇತರರಿದ್ದರು.