ಆಳಂದದಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಲರವ ಕಾರ್ಯಕ್ರಮವನ್ನು ಹಾಮೋರ್ನಿಯಂ ನುಡಿಸುವ ಮೂಲಕ ಪಿಐ ಶರಣಬಸಪ್ಪ ಕೋಡ್ಲಾ ಉದ್ಘಾಟಿಸಿದರು. ಶ್ರೀ ನಿರಾಕಾರ ಮಹಾಸ್ವಾಮೀಜಿ, ಬಾಬುರಾವ ಮಡ್ಡೆ, ಸಂಜಯ ಪಾಟೀಲ್, ಶಿವಲಿಂಗ ತೇಲ್ಕರ್ ಧಂಗಾಪುರ, ಪ್ರಕಾಶ ಜಂಗಲೇ, ಜ್ಯೋತಿ ಮಡ್ಡೆ ಇತರರಿದ್ದರು.
- ಪ್ರಾಂಶುಪಾಲ ಸಂಜಯ ಪಾಟೀಲ್ ಅನಿಸಿಕೆ
- ಆಳಂದದಲ್ಲಿ ಸಾಂಸ್ಕೃತಿಕ ಕಲರವ ಕಾರ್ಯಕ್ರಮ
ಆಳಂದ: ಜನಪದ ಸಾಹಿತ್ಯಕ್ಕೆ ಸಂಸ್ಕೃತಿ ತಾಯಿ ಬೇರು. ಜನಪದ ಕಲೆ ಸದಾಕಾಲ ಶಾಶ್ವತವಾದದ್ದು ಎಂದು ಪ್ರಬುದ್ಧ ಕಾಲೇಜು ಪ್ರಾಂಶುಪಾಲ ಸಂಜಯ ಪಾಟೀಲ್ ಹೇಳಿದರು.
ಪಟ್ಟಣದ ಶ್ರೀ ಏಕಾಂತರಾಮಯ್ಯ ಮಂದಿರದಲ್ಲಿ ವೀರಭದ್ರೇಶ್ವರ ಸಂಸತಿಕ ಮತ್ತು ಕ್ರೀಡಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಡಿ 2025-26ರ ಧನಸಹಾಯ ಸಾಮಾನ್ಯ ಯೋಜನೆ ಅಡಿ ಭಾನುವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಕಲರವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಮೊಬೈಲ್ ಯುಗದಲ್ಲಿ ಗ್ರಾಮೀಣ ಜನಪದ ಸೊಗಡು ಮರೆಯಾಗುತ್ತಿದ್ದು, ಇಂಥ ಕಾರ್ಯಕ್ರಮಗಳ ಮೂಲಕ ಕಲೆ ಜೀವಂತವಿಡಲು ಸಾಧ್ಯ ಎಂದರು.
ಹಳ್ಳಿಸಲಗರ ಶ್ರೀ ನಿರಾಕಾರ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಹಾಮೋರ್ನಿಯಂ ನುಡಿಸುವ ಮೂಲಕ ಪಿಐ ಶರಣಬಸಪ್ಪ ಕೋಡ್ಲಾ ಕಾರ್ಯಕ್ರಮ ಉದ್ಘಾಟಿಸಿದರು. ಬಾಬುರಾವ ಮಡ್ಡೆ, ಪತ್ರಕರ್ತ ಶಿವಲಿಂಗ ತೇಲ್ಕರ್ ಮಾತನಾಡಿದರು.
ಸಂಸ್ಥೆ ಅಧ್ಯಕ್ಷೆ ಜ್ಯೋತಿ ಎಸ್.ಮಡ್ಡೆ ಅಧ್ಯತೆ ವಹಿಸಿದ್ದರು. ಶಿವರುದ್ರಯ್ಯ ಸ್ವಾಮಿ, ಪ್ರಕಾಶ ಜಂಗಲೇ, ಪ್ರಭು ಪಾಟೀಲ ಇತರರಿದ್ದರು. ಶಿವಾನಂದ ಎಸ್. ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಬಸಯ್ಯ ಗುತ್ತೇದಾರ್, ಶ್ರೀಶೈಲ ಕೂಂಡೆದ, ಸೈದಪ್ಪ ಸಪ್ಪನ್ಗೋಳ, ಮಲ್ಲಿಕಾರ್ಜುನ ದೊಡ್ಡಿ, ಬಸವರಾಜ ಎಸ್., ವೆಂಕಟೇಶ ಬಿ. ಸಾಂಸತಿಕ ಕಾರ್ಯಕ್ರಮ ನಡೆಸಿಕೊಟ್ಟರು.