ಇಂಡಿ ನಗರದ ಶಿರಶ್ಯಾಡ ಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ 3ನೇ ಹುಣ್ಣಿಮೆ ಬೆಳಕು ಕಾರ್ಯಕ್ರಮ ನಾಗರತ್ನಮ್ಮ ಮನಗೂಳಿ ಉದ್ಘಾಟಿಸಿದರು. ಬಸವರಾಜ ಬಂಕೂರ, ಜಿ.ವೈ. ಗೊರನಾಳ, ರಾಮಪ್ಪ ಎಲ್.ಕೆ. ಮತ್ತಿತರರದ್ದರು.
- ನಾಗರತ್ನಮ್ಮ ಮನಗೂಳಿ ಅಭಿಮತ
- ಹುಣ್ಣಿಮೆ ಬೆಳಕು ಕಾರ್ಯಕ್ರಮ
ಇಂಡಿ: ವಿಶ್ವದಲ್ಲಿಯೇ ಶ್ರೇಷ್ಠವಾದ ಭಾರತೀಯ ಸಂಸ್ಕೃತಿ ಉಳಿಯಬೇಕಾದರೆ ಮಠ ಮಾನ್ಯಗಳು ಬೆಳೆಯಬೇಕು ಎಂದು ನಾಗರತ್ನಮ್ಮ ಮನಗೂಳಿ ಅಭಿಪ್ರಾಯಪಟ್ಟರು.
ನಗರದ ಸದಾಶಿವ ನಗರದಲ್ಲಿರುವ ಶಿರಶ್ಯಾಡ ಸಂಸ್ಥಾನ ಮಠದಲ್ಲಿ ಶನಿವಾರ ಆಯೋಜಿಸಿದ್ದ 3ನೇ ಹುಣ್ಣಿಮೆ ಬೆಳಕು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಿಂದಲೂ ಭಾರತೀಯ ಮಠಗಳು ದಾಸೋಹ, ವಸತಿ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ಇಂದು ವಿಶ್ವದ ಎಲ್ಲಾ ದೇಶಗಳ ಸರ್ಕಾರಿ ಆಡಳಿತದಲ್ಲಿ ಭಾರತೀಯರು ಉನ್ನತ ಹುದ್ದೆಯಲ್ಲಿದ್ದು ಮಹತ್ವದ ಕೆಲಸ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ತುಮಕೂರಿನ ಸಿದ್ಧಗಂಗಾ ಮಠ, ಧಾರವಾಡದ ಮುರುಘಾ ಮಠ, ಸುತ್ತೂರು ದೇಶಿಕೇಂದ್ರ ಶಿವಯೋಗಿಗಳ ಮಠ ಇಂತಹ ನೂರಾರು ಮಠಗಳು ಕರ್ನಾಟಕದಲ್ಲಿಯೇ ಕಾಣುತ್ತೇವೆ. ಇವಲ್ಲದೇ ದೇಶದ ಇನ್ನಿತರ ಕಡೆಗಳಲ್ಲಿಯೂ ಇಂತಹ ಮಠಗಳ ಸೇವೆಯಿಂದ ಲಕ್ಷಾಂತರ ಬಡ ವಿದ್ಯಾರ್ಥಿಗಳು ತಮ್ಮ ಜೀವನ ಕಟ್ಟಿಕೊಂಡಿದ್ದಾರೆ. ಕಾರಣ ಸಾರ್ವಜನಿಕರು ಮಠ ಮಾನ್ಯಗಳಿಗೆ ತಮ್ಮ ಕೈಲಾದಷ್ಟು ಸಹಾಯ ನೀಡಿ ಅವುಗಳ ಬೆಳವಣಿಗೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಬಿಜೆಪಿ ಮುಖಂಡ ಮಂಜುನಾಥ ವಂದಾನ ಮಾತನಾಡಿ, ಶಿರಶ್ಯಾಡ ಸಂಸ್ಥಾನ ಮಠ ಸರ್ವ ಧರ್ಮಗಳ ಬಡ ವಿದ್ಯಾರ್ಥಿಗಳಿಗಾಗಿ ಉಚಿತ ವಸತಿ ನಿಲಯ ಕಟ್ಟುತ್ತಿದೆ. ತನು, ಮನ, ಧನದಿಂದ ಸಹಾಯ ಸಹಕಾರ ನೀಡುವದಾಗಿ ಭರವಸೆ ನೀಡಿದರು.
ಆಲಮೇಲ ಪಟ್ಟಣದ ಲಲಿತ ಸಹಸ್ರನಾಮ ಮಾತೃ ಬಳಗದ ಸದಸ್ಯೆ ಕಮಲಾ ಈರಣ್ಣ ಕಡಣಿ ಅವರ ತಂಡ ಸಹಸ್ರನಾಮ ಜಪ ಮಾಡಿದರು. ಮಾಜಿ ಸೈನಿಕ ದಂಪತಿಗಳಿಗೆ ಹಾಗೂ 60 ವರ್ಷ ದಾಂಪತ್ಯ ಜೀವನ ನಡೆಸಿದ ಹಿರಿಯ ನಾಗರಿಕ ದಂಪತಿಗೆ ಸನ್ಮಾನಿಸಲಾಯಿತು. ಸಾನ್ನಿಧ್ಯ ವಹಿಸಿದ್ದ ಮುರುಘೇಂದ್ರ ಶ್ರೀ ವಹಿಸಿದ್ದರು.
ಉದ್ದಿಮೆದಾರ ಶ್ರೀಪತಿಗೌಡ ಬಿರಾದಾರ ಮಾಜಿ ಸೈನಿಕ ಸಂಘದ ಇಂಡಿ ಅಧ್ಯಕ್ಷ ಬಸವರಾಜ ಬಂಕೂರ, ಜಿ.ವೈ. ಗೊರನಾಳ, ವಿಜಯಪುರ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ರಾಮಪ್ಪ ಎಲ್.ಕೆ. ಉಪಾಧ್ಯಕ್ಷ ಎಸ್.ಎಂ. ಬಿರಾದಾರ, ಅನಂತ ಜೈನ್, ಅನಿಲಪ್ರಸಾದ ಏಳಗಿ, ಶಿಕ್ಷಕ ಮಲ್ಲಿಕಾರ್ಜುನ ಬುರುಕುಲೆ, ಸಂಗಣ್ಣ ಹೂಗಾರ ಇದ್ದರು.
ಮಲ್ಲಿಕಾರ್ಜುನ ಬುರುಕುಲೆ ಪ್ರಾಸ್ತಾವಿಕವಾಗಿ ಮಾತನಾಡಿದರು.