ಮಕ್ಕಳ ಸಾಂಸತಿಕ ಮೇಳ Fest 
ರಾಜ್ಯ

ಪ್ರತಿಭೆ ಅನಾವರಣಕ್ಕೆ ಮೇಳ ಸಹಕಾರಿ Fest

ಮಡಿವಾಳ: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ತರಲು ಸಾಂಸತಿಕ ಮೇಳ ಸಹಕಾರಿಯಾಗಿದೆ ಎಂದು ನಗರ್ತ ಮಹಿಳಾ ಸಮಾಜದ ಅಧ್ಯೆ ಶೋಭಾ ಪುಟ್ಟರಾಜು ತಿಳಿಸಿದರು.
ಬೆಂಗಳೂರಿನ ಇಎಟಿ ರಸ್ತೆಯ ಶ್ರೀ ನಗರೇಶ್ವರಸ್ವಾಮಿ ಕಲ್ಯಾಣ ಮಂಟಪದಲ್ಲಿ ನಗರ್ತ ಮಹಿಳಾ ಸಂಘ ನಮಸ ಮಕ್ಕಳ ವೇದಿಕೆ ಹಾಗೂ ಅಯೋಧ್ಯಾನಗರದ ಶಿವಾಚಾರ ವೈಶ್ಯ ನಗರ್ತ ವಿದ್ಯಾವರ್ಧಕ ಸಂಘದಿಂದ ಹಮ್ಮಿಕೊಂಡಿದ್ದ ಮಕ್ಕಳ ಸಾಂಸತಿಕ ಮೇಳದಲ್ಲಿ ಮಾತನಾಡಿ, ಪ್ರತಿಭಾ ಪುರಸ್ಕಾರಗಳು ಮಕ್ಕಳಿಗೆ ವೈಯಕ್ತಿಕವಾಗಿ ಇನ್ನೂ ಹೆಚ್ಚಿನ ಮಟ್ಟಕ್ಕೆ ಮುಂದುವರಿಯಲು ಉತ್ತಮ ವೇದಿಕೆ ಒದಗಿಸುತ್ತಿವೆ ಎಂದರು.
ಎಎಸ್​ವಿಎನ್​ ಸಂಸ್ಥೆಯ ಎಸ್​.ಪ್ರಕಾಶ್​ ಮಾತನಾಡಿ, ಮಹಿಳಾ ಸಂಘಗಳು ಈ ರೀತಿಯ ಕಾರ್ಯಕ್ರಮಗಳಿಗೆ ಉತ್ತಮ ಸಹಕಾರ ನೀಡುತ್ತಿದ್ದಾರೆ. ಅಲ್ಲದೆ ಮಕ್ಕಳನ್ನ ಗುರುತಿಸಿ ಅವರ ಪ್ರತಿಭೆ ಹೊರತಂದು ಇನ್ನು ಹೆಚ್ಚಿನ ಮಟ್ಟಕ್ಕೆ ಅವರು ಹೋಗಲು ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಮೂವರು ವಿದ್ಯಾರ್ಥಿನಿಯರಿಗೆ ಪಿಳ್ಳಮ್ಮ ಕೆಂಪಣ್ಣ ಹಾಗೂ ತಾಯಮ್ಮ ರಾಜಣ್ಣ ಟ್ರಸ್ಟ್​ ವಿದ್ಯಾ ಶಿಥಿ ಯೋಜನೆ, ಮಾತೃ ಸಂಸ್ಥೆಯ ಸಹಕಾರದೊಂದಿಗೆ ಪುರಸ್ಕಾರ ನೀಡಲಾಯಿತು.
ಖಜಾಂಚಿ ಆರ್​.ಮಧುಶ್ರೀ, ನಿರ್ದೇಶಕರಾದ ಶೈಲಜಾ ಉದಯಶಂಕರ್​, ಸವಿತಾ ಮಂಜುನಾಥ್​, ಭಾರತಿ ಪ್ರಭುದೇವ್​, ಕೋಮಲಾ ರಮೇಶ್​, ಶೋಭರಾಣಿ, ಇಂದಿರಾ ಬಸವರಾಜ್​, ಶಿವಮ್ಮ ಶಿವಕುಮಾರ್​, ಭಾರತಿ ರಮೇಶ್​, ಮಾಲಾ ರಾಜಕುಮಾರ್​ ಇದ್ದರು.