ಮಾನವೀಯತೆ ಮೆರೆದ ಆಟೋ ಚಾಲಕ ತಿಪ್ಪೇರುದ್ರಯ್ಯ ಹಾಗೂ ಅಂಗವಿಕಲರಿಗಾಗಿ ಕಾರ್ಯನಿರ್ವಹಿಸುತ್ತಿರುವ ನರಸಿಂಹ ಶೆಣೈ ಅವರನ್ನು ಸನ್ಮಾನಿಸಲಾಯಿತು. ಡಾ.ಆರ್.ಎನ್.ಹೆಗಡೆ ಬಂಡೀಮನೆ, ಟಿ.ಎ.ಪಿ. ಶೆಣೈ ಮತ್ತಿತರರಿದ್ದರು.  
ರಾಜ್ಯ

'ಸಾಕು ಎನ್ನುವ ಗುಣ ರೂಢಿಸಿಕೊಂಡರೆ ಆರೋಗ್ಯ ವೃದ್ಧಿ'

ಕೆಪಿಟಿಸಿಎಲ್‌ನಲ್ಲಿ ಡಾ.ಆರ್.ಎನ್.ಹೆಗಡೆ ಉಪನ್ಯಾಸ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ಯಾವುದರಲ್ಲೂ ತೃಪ್ತಿ ಇಲ್ಲ. ಎಷ್ಟೇ ಇದ್ದರೂ ಸಾಲದು ಎಂಬ ದಾಹ ಹೆಚ್ಚಾಗಿದೆ. ಯಾವ ಮನುಷ್ಯನಲ್ಲಿ ಸಾಕು ಎನ್ನುವ ಗುಣ ಬರುತ್ತದೆಯೋ ಆತನ ಆರೋಗ್ಯ ಚನ್ನಾಗಿರುತ್ತದೆ ಎಂದು ಸಾಹಿತಿ ಹಾಗೂ ನಬಾರ್ಡ್ ನಿವೃತ್ತ ಅಧಿಕಾರಿ ಡಾ.ಆರ್.ಎನ್.ಹೆಗಡೆ ಬಂಡೀಮನೆ ಹೇಳಿದರು.

ಕೆಪಿಟಿಸಿಎಲ್ ಲೆಕ್ಕಾಧಿಕಾರಿಗಳ ಸಂಘ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರೋಗ್ಯವಂತರಾಗಿರಬೇಕಾದರೆ ಸಾಕು ಎನ್ನುವ ಗುಣವನ್ನು ರೂಢಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.

ಹಿರಿಯರು ಆರೋಗ್ಯ ಕಾಪಾಡಿಕೊಳ್ಳುವ ವಿಧಾನ, ಮಾನವೀಯ ಸಂಬಂಧಗಳ ಮಹತ್ವ, ಅವುಗಳನ್ನು ಉಳಿಸಿ ಬೆಳೆಸುವ ಮಾರ್ಗಗಳು ಹಾಗೂ ಸಂಬಂಧಗಳಿಂದ ದೊರೆಯುವ ಪ್ರಯೋಜನಗಳ ಕುರಿತು ಪಿಪಿಟಿ ಪ್ರದರ್ಶನದ ಮೂಲಕ ಹಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡರಿ. ವಿಶೇಷವಾಗಿ ಹಿರಿಯರು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಂಶಗಳನ್ನು ಸರಳವಾಗಿ ವಿವರಿಸಿ, ಕೊನೆಯಲ್ಲಿ ಸಭಿಕರ ವಿವಿಧ ಸಂದೇಹಗಳಿಗೆ ಉತ್ತರಿಸಿದರು.

ಹಿರಿಯ ಪತ್ರಕರ್ತ ಹಾಗೂ ಸಾಂಸ್ಕೃತಿಕ ಚಿಂತಕ ಟಿ.ಎ.ಪಿ. ಶೆಣೈ ಅವರು, ‘ಸಂಬಂಧಗಳು ಏಕೆ ನಾಜೂಕಾಗುತ್ತಿವೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಮಾನವೀಯತೆ ಮೆರೆದ ಆಟೋ ಚಾಲಕ ತಿಪ್ಪೇರುದ್ರಯ್ಯ ಹಾಗೂ ಅಂಗವಿಕಲರಿಗಾಗಿ ಕಾರ್ಯನಿರ್ವಹಿಸುತ್ತಿರುವ ನಚಿಕೇತ ವಿದ್ಯಾಲಯದ ಕಾರ್ಯದರ್ಶಿ ನರಸಿಂಹ ಶೆಣೈ ಅವರನ್ನು ಸನ್ಮಾನಿಸಲಾಯಿತು. ಲೇಖಕ ಕೆ.ವಿ. ನಾಗರಾಜ, ಯಕ್ಷಗಾನ ವಿದ್ವಾಂಸ ಗಿಂಡಿಮನೆ ಮೃತ್ಯುಂಜಯ, ಸಂಘದ ಸದಸ್ಯರಾದ ಜೆ.ಎನ್. ಬಣಗಾರಿ, ಗಿರೀಶ, ಎಂ.ಜಿ. ಕೊಟ್ಟೂರು, ವಾಸುದೇವ ಕಾರಂತ, ಅಣಕಟ್ಟು ಮಧುಸೂದನ್ ರಾವ್, ವಿಶ್ವೇಶ್ವರ ಗಾಯತ್ರಿ ಮತ್ತಿತರರು ಉಪಸ್ಥಿತರಿದ್ದರು.