ನಾಲವಾರದಲ್ಲಿ ಹಮ್ಮಿಕೊಂಡಿದ್ದ ಮುಂಗಾರು ಕವಿಗೋಷ್ಠಿಯಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಡಾ. ಶ್ರೀವಾಣಿ, ಅರುಣಕುಮಾರ ಸುಣಗಾರ, ಮಂಜುನಾಥ ನಾಯ್ಕಲ್, ಚಂದ್ರಶೇಖರ ಲೇವಡಿ ಇತರರಿದ್ದರು.
- ಪಶುವೈದ್ಯಾಧಿಕಾರಿ ಡಾ.ಶ್ರೀವಾಣಿ ಕರೆ
- ನಾಲವಾರದಲ್ಲಿ ಮುಂಗಾರು ಕವಿಗೋಷ್ಠಿ
ಚಿತ್ತಾಪುರ: ಸಾಧನೆ ಎಂಬುದು ಸಾಧಕರ ಸ್ವತ್ತು, ಸೋಮಾರಿಗಳದ್ದಲ್ಲ. ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನದಲ್ಲಿ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿದರೆ ಮಾತ್ರ ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯ ಎಂದು ನಾಲವಾರ ಪಶುವೈದ್ಯಾಧಿಕಾರಿ ಡಾ.ಶ್ರೀವಾಣಿ ಹೇಳಿದರು.
ನಾಲವಾರದ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವಲಯ ಟಕದಿಂದ ಶನಿವಾರ ಹಮ್ಮಿಕೊಂಡಿದ್ದ ಮುಂಗಾರು ಕವಿಗೋಷ್ಠಿ ಹಾಗೂ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಅಂಕಗಳಿಗೆ ಪ್ರಾತಿನಿಧ್ಯ ನೀಡುವ ಜತೆಗೆ ಸಾಮಾನ್ಯ ಾನ ಹೆಚ್ಚಿಸಿಕೊಳ್ಳಬೇಕು. ಕವನ ರಚನೆ ಹಾಗೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪರಿಷತ್ ವಲಯ ಅಧ್ಯ ಮಂಜುನಾಥ ನಾಯ್ಕಲ್ ಮಾತನಾಡಿ, ವಿದ್ಯಾರ್ಥಿಗಳು ಗುಣಮಟ್ಟದ ಶಿಣದೊಂದಿಗೆ ಉನ್ನತ ಹುದ್ದೆ ಅಲಂಕರಿಸಿ ತಂದೆ&ತಾಯಿಯರ ಋಣ ತೀರಿಸಬೇಕು ಎಂದು ಸಲಹೆ ನೀಡಿದರು.
ಗೌರವ ಕಾರ್ಯದರ್ಶಿ ಅರುಣಕುಮಾರ ಸುಣಗಾರ ಮಾತನಾಡಿದರು.
ಪ್ರಮುಖರಾದ ಚಂದ್ರಶೇಖರ ಲೇವಡಿ, ಸಿದ್ದುಗೌಡ ಕುರಾಳ, ಸಂತೋಷ ಮಳಭಾ, ಶ್ರೀಧರ ಪತ್ತಾರ, ರಾಜೇಂದ್ರ ಕೊಲ್ಲೂರು, ಶಿವಲೀಲಾ ತುನ್ನೂರು, ಮಲ್ಲಿಕಾರ್ಜುನ ತಳವಾರ, ನಾಗರಾಜ ಸಾಹು ಇಂಗಳಗಿ, ಶರಣು ಸಾಹು ಮದ್ದರಕಿ, ಅನಿಲಕುಮಾರ ವಿಶ್ವಕರ್ಮ, ರವಿ ಮಠದ, ಮಲ್ಲೆಶಿ ಸೊಟ್ಟೆನ್ನರ, ದೇವು ಪೂಜಾರಿ, ಸಲೀಂ ಮದ್ದರಕಿ ಇತರರಿದ್ದರು.
ಪಲ್ಲವಿ ಸಿದ್ದಪ್ಪ ಭರತನಾಟ್ಯ ಪ್ರದರ್ಶನ ಮಾಡಿದರು. ಸೋಮನಾಥ ಕೊಂಚೂರ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿಕಾರ್ಜುನ ಹಡಪದ ಸ್ವಾಗತಿಸಿದರು. ಶಾಂತಕುಮಾರ ಎಣ್ಣಿ ನಿರೂಪಣೆ ಮಾಡಿದರು.