ಚಿತ್ತಾಪುರದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ ದಿನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸತ್ಕರಿಸಲಾಯಿತು. ನಾಗಯ್ಯ ಹಿರೇಮಠ, ಬಸವರಾಜ ಬಳೂಂಡಗಿ, ಎಸ್.ಸಿ.ಪಾಟೀಲ್, ಭೀಮಣ್ಣ ಸಾಲಿ ಇತರರಿದ್ದರು.
ಚಿತ್ತಾಪುರ: ವಿದ್ಯಾರ್ಥಿಗಳು, ಯುವಕರು ಉತ್ತಮ ಶಿಕ್ಷಣ ಪಡೆದುಕೊಂಡು ಶಿಸ್ತು ಮತ್ತು ದೇಶ ಪ್ರೇಮ ಬೆಳೆಸಿಕೊಳ್ಳಬೇಕು ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು. ಪ್ರಜಾಸೌಧ ಆವರಣದಲ್ಲಿ ಶನಿವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ದೇಶದ ಏಕತೆ, ಶಾಂತಿ ಮತ್ತು ಸೌಹಾರ್ದತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ದೇಶಕ್ಕೆ ಹೋರಾಡಿದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರ ತತ್ವಾದರ್ಶ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಮಾತನಾಡಿದರು. ಗ್ರೇಡ್& 2 ತಹಸೀಲ್ದಾರ್ ರಾಜಕುಮಾರ ಮರತೂರಕರ್, ತಾಪಂ ಇಓ ಮಹ್ಮದ್ ಅಕ್ರಂ ಪಾಶಾ, ಸಿಪಿಐ ಎಸ್.ಸಿ ಪಾಟೀಲ್, ಪಿಎಸ್ಐ ಮಂಜುನಾಥರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಪ್ರಮುಖರಾದ ವಿಜಯಕುಮಾರ ಬಡಿಗೇರ, ಸಂಜೀವಕುಮಾರ್ ಮಾನಕರ, ಆರತಿ ತುಪ್ಪದ್, ಶಿವಶರಣಪ್ಪ ಮಂಠಾಳೆ, ಸೈಯದ್ ನಸೀರ್ ಹಾಶ್ಮಿ, ನಾಗರೆಡ್ಡಿ ಗೋಪಸೇನ್, ದೇವಿಂದ್ರ ಅಣಕಲ್, ಮಲ್ಲಿಕಾರ್ಜುನ ಬಮ್ಮನಳ್ಳಿ ಇತರರಿದ್ದರು. ವಿಠ್ಠಲ್ ಬಿರಾದಾರ ನೇತೃತ್ವದಲ್ಲಿ ಕವಾಯತು ನಡೆಯಿತು.
ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅಧ್ಯಕ್ಷ ಭೀಮಣ್ಣ ಸಾಲಿ ಧ್ವಜಾರೋಹಣ ಮಾಡಿದರು. ನಾಗರೆಡ್ಡಿ ಪಾಟೀಲ್, ಮಲ್ಲಿಕಾರ್ಜುನ ಕಾಳಗಿ, ಶಿವಕಾಂತ ಬೆಣ್ಣೂರಕರ್, ಚಂದ್ರಶೇಖರ ಕಾಶಿ, ದೇವು ಯಾಬಾಳ, ಮಲ್ಲಿಕಾರ್ಜುನ ಬಮ್ಮನಳ್ಳಿ, ಸುನೀಲ್ ದೊಡ್ಡಮನಿ, ನಿಂಗಣ್ಣ ಹೆಗಲೇರಿ, ಹಣಮಂತ ಸಂಕನೂರ, ಮಹ್ಮದ್ ರಸೂಲ್ ಮುಸ್ತಫಾ, ಓಂಕಾರೇಶ್ವರ ರೇಷ್ಮಿ, ಜಗದೀಶ ಚವ್ಹಾಣ್, ಧನರಾಜ ಯಾದವ್ ಇತರರಿದ್ದರು.