ದೇವದುರ್ಗದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಸಸಿ ನೆಡುವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಗಣ್ಯರು ಸಸಿ ನೆಟ್ಟರು. ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಬಾಲಪ್ಪ ಭಾವಿಮನಿ, ಅರಣ್ಯಾಧಿಕಾರಿ ಬಸವರಾಜ ಭರಮಗೌಡ, ಬಸನಗೌಡ ದೇಸಾಯಿ, ಭೂಧಾನಿ ಚಂದ್ರಕಾಂತ, ಪ್ರಾಚಾರ್ಯ ಗರುಡವಾಹನ, ಪ್ರಾಧ್ಯಾಪಕ ಡಾ.ಸುಭಾಶ್ಚಂದ್ರ ಪಾಟೀಲ್, ಮಾಜಿ ಸೈನಿಕ ಪಂಪಣ್ಣ ಅಕ್ಕರಕಿ ಇದ್ದರು.
- ಮಾಜಿ ಸೈನಿಕ ಪಂಪಣ್ಣ ಅಕ್ಕರಕಿ ಸಲಹೆ
- ಸಸಿ ನೆಡುವ ಕಾರ್ಯಕ್ರಮ
ದೇವದುರ್ಗ: ವಿದ್ಯಾರ್ಥಿಗಳು ಪರಿಸರ ಕಾಳಜಿ, ದೇಶಾಭಿಮಾನ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ದೇವದುರ್ಗ ಸೈನಿಕ ಅಕಾಡೆಮಿ ಸಂಚಾಲಕ, ಮಾಜಿ ಸೈನಿಕ ಪಂಪಣ್ಣ ಅಕ್ಕರಕಿ ಹೇಳಿದರು.
ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ದೇವದುರ್ಗ ಸೈನಿಕ ಆಕಾಡೆಮಿ ಆಯೋಜಿಸಿದ್ದ ಸಸಿ ನೆಡುವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಸದೃಢ ದೇಹಕ್ಕೆ ಕ್ರೀಡೆಯಂತೆ, ಮಾನಸಿಕ ಆರೋಗ್ಯಕ್ಕೆ ಪರಿಸರ ಅಗತ್ಯ.
ಒಳ್ಳೆಯ ಮನಸ್ಸು ಬೆಳೆಯಲು ಹಸಿರು ವಾತಾವರಣವೇ ಬುನಾದಿ ಎನ್ನುವುದು ಅರಿಯಬೇಕಿದೆ. ಚಂದ್ರಕಾಂತ ಟೇಲರ್ ಅವರು ತಮ್ಮ ಮಗ ದರ್ಶನ್ ಸ್ಮರಣಾರ್ಥ ಪ್ರೌಢ ಶಾಲೆ ದತ್ತುಪಡೆದು ಆವರಣದಲ್ಲಿ 50 ಸಸಿಗಳನ್ನು ನೆಟ್ಟು ತಂತಿ ಬೇಲಿ ಹಾಕಿರುವುದು ಮಾದರಿ ಕೆಲಸ. ವಿದ್ಯಾರ್ಥಿಗಳು ಒಂದೊಂದು ಸಸಿಯ ಪೋಷಣೆಯ ಜವಾಬ್ದಾರಿ ವಹಿಸಿಕೊಳ್ಳಬೇಕು. ಹಸಿರು ಕ್ರಾಂತಿ ಜತೆಗೆ ಮಕ್ಕಳಲ್ಲಿ ರಾಷ್ಟ್ರಭಕ್ತಿಯ ಕ್ರಾಂತಿಯೂ ಮೊಳಗಬೇಕಿದೆ ಎಂದರು.
ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಬಾಲಪ್ಪ ಭಾವಿಮನಿ, ಅರಣ್ಯಾಧಿಕಾರಿ ಬಸವರಾಜ ಭರಮಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಬಸನಗೌಡ ದೇಸಾಯಿ ಮಾತನಾಡಿದರು. ಭೂದಾನಿ ಚಂದ್ರಕಾಂತ, ಸೇನೆಗೆ ನೇಮಕಗೊಂಡ ನಾಲ್ವರು ಯುವಕರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಗರುಡವಾಹನ, ಪ್ರಾಧ್ಯಾಪಕ ಡಾ.ಸುಭಾಶ್ಚಂದ್ರ ಪಾಟೀಲ್, ಮುಖ್ಯಶಿಕ್ಷಕ ಮೃತ್ಯುಂಜಯ ಕೋಟೆ, ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ನಾಯಕ ಗೋಸಲ್, ಬಸವರಾಜ ಬ್ಯಾಗವಾಟ, ಸುಭಾಷ್, ನಾಗರತ್ನಾ, ಭಾನುಪ್ರಕಾಶ ಖೇಣೇದ್, ಹನುಮಂತ್ರಾಯ ಶಾಖೆ, ಶಂಕರಲಿಂಗಯ್ಯ ತಾತ, ದೈಹಿಕ ಶಿಕ್ಷಣ ಶಿಕ್ಷಕಿ ಮಮತಾ ಆದಿ ಇತರರಿದ್ದರು.