ಹುಲಸೂರಿನಲ್ಲಿ ಭಾನುವಾರ ಸುರಿದ ಅಕಾಲಿಕ ಮಳೆಗೆ ಕಟಾವು ಮಾಡಿರುವ ಜೋಳ ಹಾಳಾಗಿರುವುದು.
ಹುಲಸೂರು: ಪಟ್ಟಣ ಸೇರಿ ತಾಲೂಕಿನ ಮುಚಳಂಬ, ತೊಗಲೂರ, ಹಾಲಹಳ್ಳಿ, ಗಡಿರಾಯಿಪಳಿ, ಬೇಲೂರು ಗ್ರಾಮಗಳಲ್ಲಿ ಭಾನುವಾರ ಸಂಜೆ ಗುಡುಗು, ಮಿಂಚು, ರಭಸದ ಗಾಳಿ ಸಹಿತ ಜೋರಾದ ಅಕಾಲಿಕ ಮಳೆ ಸುರಿದಿದ್ದರಿಂದ ರೈತರು ಬೆಳೆದ ಜೋಳ, ಗೋಧಿ, ಈರುಳ್ಳಿ, ತರಕಾರಿ ನಾಶವಾಗಿವೆ. ರಭಸದ ಗಾಳಿಗೆ ಕೆಲವು ಕಡೆ ಮರಗಳು ಮುರಿದು ಬಿದ್ದರೆ, ಮಾವು ಉದರಿ ಹೋಗಿವೆ. ಈ ಮಳೆ ರೈತರಿಗೆ ಕಂಟಕವಾದರೆ, ಶೆಕೆ ದೂರ ಮಾಡಿ ತಂಪು ತಂದಿದೆ.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಕೆಕೆಆರ್ಡಿಬಿ ಯೋಜನೆಯಡಿ ಅನುದಾನದಲ್ಲಿ 14.55 ಲ ರೂ. ವೆಚ್ಚದಲ್ಲಿ ಸ್ಥಾಪಿಸಲಾಗಿದ್ದ ಸೋಲಾರ್ ಹೈ ಲ್ಯಾಂಪ್ ಗಾಳಿಗೆ ಮುರಿದು ಬಿದ್ದಿದೆ. ಯಾವುದೇ ಅವಡ ಸಂಭವಿಸಿಲ್ಲ ಎಂದು ಪ್ರತ್ಯೇಕ ದರ್ಶಿಗಳು ತಿಳಿಸಿದ್ದಾರೆ.
ಭಾನುವಾರ ಸಂಜೆ ಸುರಿದ ಕಾಲಿಕ ಮಳೆ ಗಾಳಿಗೆ ಮುಚಳಂಬ ಗ್ರಾಮದ ಸುಮಾರು ಮನೆ ಮೇಲಿನ ಪತರಾಗಳು ಹಾರಿ ಹೋಗಿವೆ. ಅಲ್ಲಲ್ಲಿ ವಿದ್ಯುತ್ ತಂತಿ ಕಟ್ ಆಗಿದ್ದರಿಂದ ಮುಚಳಂಬ, ಧನೂರ(ಕೆ) ತೊಗಲೂರ, ಹಾಲಹಳ್ಳಿ ಗ್ರಾಮಗಳಲ್ಲಿ ಭಾನುವಾರ ಸಂಜೆಯಿಂದ ಸೋಮವಾರ ಬೆಳಗಿನ ಜಾವದವರೆಗೆ ವಿದ್ಯುತ್ ಇಲ್ಲದೆ ಗ್ರಾಮಸ್ಥರು ತೊಂದರೆ ಅನುಭವಿಸಿದರು.