ಮುಗುಳನಾಗಾವಿ ಕೆರೆಯಲ್ಲಿ ಮೀನುಗಾರರ ಬಲೆಗೆ ಸಿಕ್ಕಿ ಬಿದ್ದ ಮೊಸಳೆ. 
ರಾಜ್ಯ

ಮೀನುಗಾರರ ಬಲೆಗೆ ಬಿದ್ದ ಮೊಸಳೆ!

ಶಹಾಬಾದ್​: ಮುಗುಳನಾಗಾವಿ ಹಾಗೂ ಬಾಲುನಾಯಕ ತಾಂಡಾದ ಮಧ್ಯದಲ್ಲಿರುವ ಕೆರೆಯಲ್ಲಿ ಮೀನುಗಾರರಾದ ಬಲೆಗೆ ಮೊಸಳೆಯೊಂದು ಸಿಕ್ಕಿಬಿದ್ದ ಪ್ರಸಂಗ ಬುಧವಾರ ನಡೆದಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಸೋಲಾಪುರ ಮೂಲದ ಮೀನುಗಾರರಾದ ಕಿಶನ್​ ರಾಮು, ಲಾಲು ಭೋವಿ ತಂಡದವರು ಮೀನು ಹಿಡಿಯಲು ಕರೆಯಲ್ಲಿ ಬಲೆ ಹಾಕಿದ್ದರು. ಇದರಲ್ಲಿ ಮೊಸಳೆ ಬಿದ್ದಿದ್ದು, ಮೀನುಗಾರರು ಚಾಣಾಕ್ಷತನದಿಂದ ಮೊಸಳೆ ಸೆರೆ ಹಿಡಿದಿದ್ದಾರೆ. ಸುಮಾರು 8 ಅಡಿ ಉದ್ದದ ಮೊಸಳೆಯಾಗಿದ್ದು, 2 ಗಂಟೆ ಕಾರ್ಯಾಚರಣೆ ನಡೆಸಿ ಕೆರೆಯಿಂದ ಹೊರಕ್ಕೆ ತಂದಿದ್ದಾರೆ. ವಲಯ ಅರಣ್ಯ ಉಪವಿಭಾಗಾಧಿಕಾರಿ ಅನೀಲ ಕುಮಾರ, ವಲಯ ಅರಣ್ಯ ಅಧಿಕಾರಿ ವಿಜಯಕುಮಾರ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ, ಮೊಸಳೆಯನ್ನು ಸುರಕ್ಷಿತವಾಗಿ ಮಾಡಬೂಳ ಪ್ರಾಣಿ ಸಂಗ್ರಾಹಲಯಕ್ಕೆ ಸಾಗಿಸಿದ್ದಾರೆ.