ಸಾಂದರ್ಭಿಕ ಚಿತ್ರ.. (ಎಐ) 
ರಾಜ್ಯ

ಹೆಂಡತಿ ಜೊತೆ ಜಗಳದ ಕೋಪಕ್ಕೆ ಕಂದಮ್ಮಗಳನ್ನೇ ಕಾಲುವೆಗೆ ಎಸೆದ ತಂದೆ!

ವಿಜಯವಾಣಿ ಸುದ್ದಿಜಾಲ ಶಹಾಪುರ
ಹೆಂಡತಿ ಜೊತೆ ಜಗಳ ಮಾಡಿಕೊಂಡ ಕೋಪದಲ್ಲಿ ತಂದೆ ತನ್ನ ಇಬ್ಬರು ಮಕ್ಕಳನ್ನು ಗೋಗಿ ಬಳಿ ಇರುವ ಕ್ಯಾನಲ್ ಗೆ ಎಸೆದಿರುವ ಆಘಾತಕಾರಿ ಘಟನೆ ತಾಲೂಕಿನ ಗಂಗನಾಳ್ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಶಾಂತಪ್ಪ ಎಂಬ ಪಾಪಿ ತಂದೆಯಿಂದ ಈ ಕೃತ್ಯ ನಡೆದಿದೆ. ಸಾನ್ವಿ (9) ಸೃಜನ್ (2) ವರ್ಷದ ಮಕ್ಕಳೇ ಕ್ಯಾನಲ್ ನ ಪಾಲಾಗಿದ್ದಾರೆ.
ಮಂಗಳವಾರ ಸಂಜೆ ವೇಳೆ ಗಂಡ ಹೆಂಡತಿ ನಡುವೆ ಕಲಹ ಉಂಟಾಗಿದ್ದು, ಏಕಾಏಕಿ ಮೂವರು ಮಕ್ಕಳನ್ನು ತನ್ನ ದ್ವಿಚಕ್ರ ವಾಹನದ ಮೇಲೆ ಕೂರಿಸಿಕೊಂಡು ಹೋಗಿ ಇಬ್ಬರು ಮಕ್ಕಳನ್ನು ಕ್ಯಾನಲ್ಗೆ ಎಸೆದಿದ್ದೇನೆ ಎಂದು ಪೋಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ.