ಹಳೆ ವೈಷಮ್ಯಕ್ಕೆ ಯುವಕನ ಹತ್ಯೆ 
ರಾಜ್ಯ

ಹಳೆ ವೈಷಮ್ಯಕ್ಕೆ ಯುವಕ ಹತ್ಯೆ !

ಪ್ರಮುಖ ಮುಖ್ಯಾಂಶಗಳು

  • ಹಳೆ ವೈಷಮ್ಯಕ್ಕೆ ಯುವಕನ ಹತ್ಯೆ
  • ಹುಕ್ಕೇರಿ ತಾಲೂಕಿನ ಹಿಡಕಲ್ಲ ಡ್ಯಾಂ ಬಳಿ ಘಟನೆ
  • ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಹಳೆ ವೈಷಮ್ಯಕ್ಕೆ ಯುವಕನ ಕೊಲೆ
ಬೆಳಗಾವಿ :

ಹಳೆ ವೈಷಮ್ಯಮದ ಹಿನ್ನಲೆ ಗೋಕಾಕ ತಾಲೂಕಿನ ಮಾಣಿಕವಾಡಿ ಗ್ರಾಮದ ಪಾಸ್ಕಲ್ ಹೃದಯರಾಜ್ ಮುತ್ತುಸ್ವಾಮಿ(೩೧) ಎಂಬಾತನನ್ನು
ಹುಕ್ಕೇರಿ ತಾಲ್ಲೂಕಿನ ಹಿಡಕಲ್ಲ ಜಲಾಶಯದ ಸಮೀಪ ಗುಡ್ಡ ಪ್ರದೇಶದಲ್ಲಿ ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.
ಕೊಲೆಯಾದ ಯುವಕ ಪಾಸ್ಕಲ್ ಹೃದಯರಾಜ್ ಮುತ್ತುಸ್ವಾಮಿ ಗೆಳೆಯರೊಂದಿಗೆ ಹಿಡಕಲ್ಲ ಜಲಾಶಯದ ಬಳಿ ಕುಳಿತಿರುವಾಗ,ಆಟೋದಲ್ಲಿ ಬಂದ ಆರೋಪಿಗಳು ಮಾರಕಾಸ್ತçದಿಂದ ದಾಳಿ ಮಾಡಿಕೊಲೆ ಮಾಡಿದೆ. ಮೃತ ಈ ಹಿಂದೆ ಗೋಕಾಕನ ಕೊಲೆ, ಅಪಹರಣ ಸೇರಿ ಹಲವು ಅಕ್ರಮ ಚಟುವಟಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಕಳೆದ ಹಲವು ದಿನಗಳಿಂದ ಕೊಲೆಯಾದ ಯುವಕ ಜೈಲಿನಲ್ಲಿದ್ದ ಮೃತ ಯುವಕ ಈಚೆಗೆ ಜೈಲಿನಿಂದ ಬಿಡುಗಡೆಯಾದನು.ಕೊಲೆಗೆ ಹಳೇ ದ್ವೇಷವೇ ಕಾರಣ ಎಂದು ಪೊಲೀಸರು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪ್ರಕರಣ ದಾಖಲಿಸಿಕೊಂಡ ಯಮಕನಮರಡಿ ಪೊಲೀಸರು ತಿಳಿಸಿದ್ದಾರೆ.