ನದಿಯಲ್ಲಿ ಮುಳುಗಿ ತಾಯಿ ಮಗ ಸಾವು
- ನದಿಯಲ್ಲಿ ಮುಳುಗಿ ತಾಯಿ ಮಗ ಸಾವು
- ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಘಟನೆ
- ಮಗುವನ್ನು ರಕ್ಷಿಸಲು ಮುಂದಾದ ತಾಯಿಗೂ ಈಜು ಬಾರದೆ ಸಾವು
ನದಿಯಲ್ಲಿ ಮುಳುಗಿ ತಾಯಿ ಮಗ ಸಾವು
ಸಂಕೇಶ್ವರ: ಪಟ್ಟಣದ ಹಿರಣ್ಯಕೇಶಿ ನದಿಯಲ್ಲಿ ಮುಳುಗಿ ತಾಯಿ-ಮಗ ಸಾವಿಗಿಡಾದ ಘಟನೆ ಮಂಗಳವಾರ ಸಾಯಂಕಾಲ ನಡೆದಿದೆ.
ಸಂಕೇಶ್ವರ ಪಟ್ಟಣದ ನಿವಾಸಿಗಳಾದ ಲಕ್ಷ್ಮೀ ಕುಟೋಳಿ (27) ಹಾಗೂ ಸುಪ್ರೀತ್ ಸುಧಾಕರ ಕುಟೋಳಿ (9) ಮೃತರು. ಶಂಕರಲಿಂಗಕ್ಕೆ ಬಂದಿದ್ದ ವೇಳೆ ಮಗನು ನದಿಯಲ್ಲಿ ಈಜಲು ತೆರಳಿದ್ದು,ಈಜುಬಾರದು ಮುಳುಗುತ್ತಿದ್ದ ರಕ್ಷಿಸಲು ಮುಂದಾದ ತಾಯಿಗೂ ಈಜು ಬಾರದ ಕಾರಣ ಇಬ್ಬರೂ ನೀರಲ್ಲಿ ಮುಳುಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ತಾಯಿ ಲಕ್ಷ್ಮೀ ಅವರ ಶವ ಪತ್ತೆಯಾಗಿದ್ದು, ಮಗುವಿನ ಶವಕ್ಕಾಗಿ ಅಗ್ನಿಶಾಮಕ ದಳದಿಂದ ಹುಡುಕಾಟ ಮುಂದುವರಿದಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ.