ಕಲಬುರಗಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಟ್ರಿಕೆಟ್ ಟೂರ್ನಮೆಂಟ್ನಲ್ಲಿ ಪ್ರೊ.ಎಂ.ಎಸ್.ಪಾಸೋಡಿ, ಪ್ರೊ.ಶಿವಶರಣ ಗೊಳ್ಳೆ, ಡಾ.ಸವಿತಾ ತಿವಾರಿ, ಡಾ.ನಾಗಪ್ಪ ಗೋಗಿ, ಡಾ.ಬಲಭೀಮ ಸಾಂಗ್ಲಿ ಇತರರಿದ್ದರು.
- ಸರ್ಕಾರಿ ಪದವಿ (ಸ್ವಾಯತ್ತ) ಕಾಲೇಜಿನಲ್ಲಿ ಆಯೋಜನೆ
ಕಲಬುರಗಿ: ನಗರದ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) 2025&26ನೇ ಶೈಣಿಕ ಸಾಲಿನ ಅಂಗವಾಗಿ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಸ್ಮರಣಾರ್ಥ ಸಾಂಸತಿಕ ಹಾಗೂ ಕ್ರೀಡಾ ಚಟುವಟಿಕೆಗಳಡಿ ಅಂತರ್ ವಿಶ್ವವಿದ್ಯಾಲಯ ಕಾಲೇಜು ಸಿಬ್ಬಂದಿ ಪ್ರಥಮ ಕ್ರಿಕೆಟ್ ಟೂರ್ನಮೆಂಟ್ಗೆ ಸೋಮವಾರ ಚಾಲನೆ ನೀಡಲಾಯಿತು.
ಕಾಲೇಜು ಶಿಣ ಇಲಾಖೆಯ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಪ್ರೊ.ಗೊಳ್ಳೆ ಶಿವಶರಣ ಚಾಲನೆ ನೀಡಿ, ಐದು ವಿಶ್ವವಿದ್ಯಾಲಯಗಳಿಂದ ಆಗಮಿಸಿದ ಕಾಲೇಜು ಸಿಬ್ಬಂದಿ ತಂಡಗಳಿಗೆ ಶುಭ ಹಾರೈಸಿ, ವಿವಿಧ ಕಾಲೇಜುಗಳೊಂದಿಗೆ ಉತ್ಸಾಹದಿಂದ ಕ್ರಿಕೆಟ್ ಆಡುತ್ತ ಉತ್ತಮ ಪ್ರದರ್ಶನ ನೀಡಬೇಕು ಎಂದು ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ದೈಹಿಕ ಶಿಣ ನಿರ್ದೇಶಕ ಡಾ.ಎಂ.ಎಸ್.ಪಾಸೋಡಿ ಮಾತನಾಡಿ, ಸಿಬ್ಬಂದಿ ಚೈತನ್ಯದಿಂದ ಕ್ರಿಕೆಟ್ ಆಡುತ್ತಿರುವುದು ಸಂತಸದ ಸಂಗತಿ. ಉತ್ತಮ ಆಟವಾಡಿ ಅಂತಿಮ ಪಂದ್ಯಕ್ಕೆ ತಲುಪುವಂತೆ ಪ್ರೋತ್ಸಾಹಿಸಿದರು.
ಬೆಂಗಳೂರಿನ ಎಡಿಬಿ ಸಮಿತಿ ಅಧಿಕಾರಿ ಪ್ರೊ.ರಮೇಶ್ ರೆಡ್ಡಿ ಮತ್ತು ಸ್ಯಾನ್ ಫ್ರಾನ್ಸಿಸ್ ಮಾರಿಯ ಆನಂದ ಇದ್ದರು. ಪ್ರಾಂಶುಪಾಲ ಡಾ.ಸವಿತಾ ತಿವಾರಿ ಅಧ್ಯಕ್ಷತೆ ವಹಿಸಿದ್ದರು. ಡಾ.ಮಲ್ಲೆಶಪ್ಪ ಕುಂಬಾರ, ಡಾ.ರಾಜಕುಮಾರ ಸಲಗರ, ಡಾ.ದವಲಪ್ಪ ಬಿ.ಎಚ್, ಡಾ.ರಾಜಶೇಖರ ಮಡಿವಾಳ, ಡಾ.ರವೀಂದ್ರಕುಮಾರ ಭಂಡಾರಿ, ಡಾ.ಅಂಬೇಡ್ಕರ್ ವಿಚಾರ ವೇದಿಕೆಯ ಸಂಯೋಜಕ ಡಾ. ರಮೇಶ ಪೋತೆ, ಸಹ ಸಂಯೋಜಕ ಡಾ.ಬಸಂತ ಸಾಗರ, ಸಾಂಸತಿಕ ಸಂಚಾಲಕ ಡಾ.ಬಲಭೀಮ ಸಾಂಗ್ಲಿ, ಕಾಲೇಜಿನ ದೈಹಿಕ ನಿರ್ದೇಶಕ ಡಾ.ಬೆಣ್ಣೂರು ವಿಶ್ವನಾಥ, ಪ್ರೊ.ಚೆನ್ನಕ್ಕಿ ನಾಗಪ್ಪ, ಡಾ.ನಾಗಪ್ಪ ಗೋಗಿ, ಡಾ.ಮಲ್ಲಿಕಾರ್ಜುನ ಶೆಟ್ಟಿ, ಡಾ.ಅರುಣಕುಮಾರ ಸಲಗರ, ಡಾ. ರಾಜೇಶ ಅಜಬಸಿಂಗ್, ಡಾ.ಚಂದ್ರಕಾಂತ ಜಮಾದಾರ, ಡಾ.ರಾಮಕೃಷ್ಣ, ಡಾ.ಶಂಕರ ರಾಠೋಡ, ಡಾ.ರಮೇಶ, ಡಾ.ಮೊಹ್ಮದ್ ಯುನೂಸ್, ಡಾ.ಮಹಾಂತೇಶ ಪಾಟೀಲ, ಡಾ.ಉತ್ತಮ, ಡಾ.ರಬಿಯಾ ಇಫತ್, ಡಾ.ಅಜ್ರಾ ಪರ್ವಿನ್ ಇತರರಿದ್ದರು.
ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕರಾದ ಅಜಯಸಿಂಗ್ ತಿವಾರಿ, ವಿಜಯಲಕ್ಷಿ$್ಮ ಹಾಗೂ ಕಚೇರಿ ಅಧೀಕ ಶಿವಾನಂದ ಸ್ವಾಮಿ ಉಪಸ್ಥಿತರಿದ್ದರು. ಐದು ವಿಶ್ವವಿದ್ಯಾಲಯಗಳಿಂದ ಆಗಮಿಸಿದ 20 ಕ್ರಿಕೆಟ್ ತಂಡಗಳು ಈ ಟೂರ್ನಮೆಂಟ್ನಲ್ಲಿ ಭಾಗವಹಿಸಿದ್ದವು. ಡಾ. ಬಲಭೀಮ ಸಾಂಗ್ಲಿ ನಿರೂಪಿಸಿದರು.