ಬಾಕಿ ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ರೈತರು ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಸಿದರು. ಶ್ರೀಕಾಂತ ಖೂನೆ, ವಿಜಯಕುಮಾರ ಢಗೆ, ಶಿವಪ್ಪ ಂಟೆ, ತಿಪ್ಪಣ್ಣ ಬಂಡೆ, ಕುಮಾರ ಬಂಡೆ ಇತರರಿದ್ದರು. 
ರಾಜ್ಯ

ರೈತರ ಖಾತೆಗ ವಿಮೆ ಪರಿಹಾರ ಜಮೆ ಮಾಡಿ

ಪ್ರಮುಖ ಮುಖ್ಯಾಂಶಗಳು

  • ಖಜೂರಿಯಲ್ಲಿ ರೈತರಿಂದ ಪ್ರತಿಭಟನೆ
  • ಉಪ ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಕೆ
ಆಳಂದ: ಹದಿನೈದು ದಿನದೊಳಗಾಗಿ ಬೆಳೆ ವಿಮೆ ಎರಡನೇ ಕಂತಿನ ಪರಿಹಾರ ಹಣ ರೈತರ ಖಾತೆಗಳಿಗೆ ಜಮೆ ಮಾಡಬೇಕು ಎಂದು ಒತ್ತಾಯಿಸಿ ಖಜೂರಿಯ ವಿವೇಕಾನಂದ ಕ್ರಾಸ್​ ಬಳಿ ಸಂಚಾರ ತಡೆದು ರೈತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಶ್ರೀಕಾಂತ ಖೂನೆ, ವಿಜಯಕುಮಾರ ಢಗೆ, ಶ್ರೀಶೈಲ ಭೀಮಪುರೆ, ತಿಪ್ಪಣ್ಣ ಬಂಡೆ, ಶಿವಪ್ಪ ಘಂಟೆ ಮಾತನಾಡಿ, 2025-26ನೇ ಸಾಲಿನಲ್ಲಿ ಪ್ರಧಾನಮಂತ್ರಿ ಫಸಲ್​ ಬಿಮಾ ಯೋಜನೆಯಡಿ ಖಜೂರಿ ಗ್ರಾಮ ಪಂಚಾಯಿತಿ ಮಟ್ಟದ ಸುಮಾರು 1600ಕ್ಕೂ ಹೆಚ್ಚು ರೈತರು ಬೆಳೆ ವಿಮೆ ನೋಂದಣಿ ಮಾಡಿಸಿದ್ದಾರೆ. ಮೊದಲನೇ ಕಂತು ಎಲ್ಲ ರೈತರಿಗೂ ಬಂದಿದೆ. ಆದರೆ 2ನೇ ಕಂತಿನ ಬೆಳೆ ವಿಮೆ ಹಣ ಯಾವುದೇ ರೈತರಿಗೂ ಬಂದಿಲ್ಲ. ಈ ಕುರಿತು ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ ಎಂದು ಕಿಡಿಕಾರಿದರು.
ಮುಂಗಾರು ಕೈಕೊಟ್ಟಿದ್ದರಿಂದ ಬೆಳೆ ಕಳೆದುಕೊಂಡು ರೈತರು ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ನೆರವಿಗೆ ಬರಬೇಕಿದ್ದ ವಿಮೆ ಕಂಪನಿ ಹಾಗೂ ಸರ್ಕಾರ ಅನ್ನದಾತರದೊಂದಿಗೆ ಚೆಲ್ಲಾಟ ಆಡುತ್ತಿವೆ. ಅಧಿಕಾರಿಗಳು ಗಮನಹಿರಿಸಿ ಅರ್ಹ ರೈತರಿಗೆ ಬಾಕಿ ವಿಮೆ ಮೊತ್ತ ಪಾವತಿಸಬೇಕು. ಸಮಸ್ಯೆ ಬಗೆಹರಿಯದಿದ್ದರೆ ತಹಸಿಲ್​ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಅಲ್ಲದೆ ಜಿಲ್ಲಾಧಿಕಾರಿ ಕಚೇರಿವರೆಗೂ ಪಾದಯಾತ್ರೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬರ ಘೋಷಣೆ ಮಾಡಿ, ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು. ಮಹಾರಾಷ್ಟ್ರದ ಮಾದರಿಯಲ್ಲಿ ರೈತರ ಸಾಲಮನ್ನಾ ಮಾಡಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೋ ಶಾಲೆ ತೆರೆಯಬೇಕು. ದುಡಿವ ಕೈಗಳಿಗೆ ಉದ್ಯೋಗ ನೀಡಲು ವಿಬಿ-ಜಿ ರಾಮ್​ ಜಿ ಕಾಮಗಾರಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಉಪ ತಹಸೀಲ್ದಾರ್​ ಬಸವರಾಜ ಪಾಟೀಲ್​ ಅವರಿಗೆ ಮನವಿಪತ್ರ ಸಲ್ಲಿಸಿಲಾಯಿತು.
ಪ್ರಮುಖರಾದ ಶಿವಪ್ಪ ವಾರೀಕ, ಮಹಾದೇವ ವಾಡೆ, ವಿಶ್ವನಾಥ ಅವರಾದೆ, ನಾಗೇಶ ನಗರೆ, ರೇವಣಪ್ಪ ಪಿ.ಚಂಗಲೆ, ಕರಬಸಪ್ಪ ಹುಳಪಲ್ಲೆ, ಸಂತೋಷ ವಾನೇಗಾಂವ್​, ಶ್ರೀಶೈಲ ಚಂಗಲೆ, ಮಲ್ಲಿನಾಥ ವಾನೇಗಾಂವ್​, ಚಿದಾನಂದ ಧೂಳೆ ಇತರರಿದ್ದರು.