ಎಐ ಬಳಸಿ ಬಾಂಬ್ ಸ್ಫೋಟದ ದೃಶ್ಯ ಸೃಷ್ಟಿಸಲಾದ ಬೆಂಗಳೂರಿನ ವಿಧಾನಸೌಧ ಕಟ್ಟಡ 
ರಾಜ್ಯ

AI ಬಳಸಿ ವಿಧಾನಸೌಧ ಬ್ಲಾಸ್ಟ್‌ ವಿಡಿಯೋ ಸೃಷ್ಟಿ: ಕಿಡಿಗೇಡಿ ವಿರುದ್ಧ ನೆಟ್ಟಿಗರು ಗರಂ, ಪೊಲೀಸರಿಗೆ ಟ್ಯಾಗ್ ಮಾಡಿ ಆಕ್ರೋಶ! Vidhana Soudha

ಎಐ (AI) ತಂತ್ರಜ್ಞಾನ ಬಳಸಿ ವಿಧಾನಸೌಧ ಬ್ಲಾಸ್ಟ್ ಮಾಡಿದಂತೆ ವಿಡಿಯೋ ಸೃಷ್ಟಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಕಿಡಿಗೇಡಿ. ವಿಡಿಯೋ ವೈರಲ್ ಬೆನ್ನಲ್ಲೇ ಕಠಿಣ ಕ್ರಮಕ್ಕೆ ಸಾರ್ವಜನಿಕರ ಆಗ್ರಹ.

ಬೆಂಗಳೂರು: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿಕೊಂಡು ರಾಜ್ಯದ ಶಕ್ತಿಕೇಂದ್ರವಾದ ವಿಧಾನಸೌಧವನ್ನು ಬ್ಲಾಸ್ಟ್​​ ಮಾಡುವಂತೆ ವಿಡಿಯೋವೊಂದನ್ನು ಕಿಡಿಗೇಡಿಯೊಬ್ಬನು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ.

"Jnx King Hg" ಎಂಬ ಇನ್​ಸ್ಟಾಗ್ರಾಮ್​ ಖಾತೆಯಿಂದ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋವನ್ನು ನೋಡಿರುವ ನೆಟ್ಟಿಗರು, ಈ ವಿವಾದಾತ್ಮಕ ವಿಡಿಯೋ ಹರಿಬಿಟ್ಟವನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ, ಮೊದಲು ಯುವಕನೊಬ್ಬನು ವಿಧಾನಸೌಧದ ಎದುರಿಗೆ ನಿಂತುಕೊಂಡು, ಕೆಲ ಕೈಸನ್ನೆ ಮಾಡಿ ಕಟ್ಟಡವನ್ನು ಬಾಂಬ್​ ಹಾಕಿ ಬ್ಲಾಸ್ಟ್​ ಮಾಡಿದಂತೆ ವಿಡಿಯೋವನ್ನು ಎಡಿಟ್​ ಮಾಡಿದ್ದಾನೆ. ಈ ವಿಡಿಯೋನಲ್ಲಿ ತಾನೊಬ್ಬ ಭಯೋತ್ಪಾದಕ ಎನ್ನವು ರೀತಿಯಲ್ಲಿ ಈ ಯುವಕ ಪೋಸ್​ ನೀಡಿದ್ದಾನೆ.

ವಿಜಯದಶಮಿ ಹಾಗೂ ದಸರಾ ಹಬ್ಬದ ದಿನವೇ ಈ ರೀತಿಯ ಆಘಾತಕಾರಿ ಹಾಗೂ ಅಪಾಯಕಾರಿ ವಿಡಿಯೋವನ್ನು ಹಂಚಿಕೊಂಡಿರುವ ಹಿನ್ನಲೆ, ಸಾರ್ವಜನಿಕರಲ್ಲಿ ಹೆದರಿಕೆಗೆ ಕಾರಣವಾಗಿದ್ದು, ಕೂಡಲೇ ಈ ಯುವಕನನ್ನು ಪೊಲೀಸರು ವಶಕ್ಕೆ ಪಡೆಯಬೇಕೆಂದು ಆಗ್ರಹಿಸಿದ್ದಾರೆ. CyberCrime

ಬೆಂಗಳೂರು ಪೊಲೀಸರಿಗೆ ಟ್ಯಾಗ್​!

ಈ ವಿವಾದಾತ್ಮಕ ವಿಡಿಯೋ ವೈರಲ್​ ಆಗುತ್ತಿದ್ದಂತೆ, ನೆಟ್ಟಿಗರು ಈ ವಿಡಿಯೋ ಕೆಳಗೆ ಬೆಂಗಳೂರು ನಗರ ಪೊಲೀಸರನ್ನು ಟ್ಯಾಗ್​ ಮಾಡುತ್ತಿದ್ದಾರೆ. ಪೊಲೀಸರನ್ನು ಟ್ಯಾಗ್ ಮಾಡಿ, ಹಬ್ಬದ ದಿನ ರಾಜ್ಯದ ಶಕ್ತಿಕೇಂದ್ರವಾದ ವಿಧಾನಸೌಧಕ್ಕೆ ಬಾಂಬ್​ ಬೆದರಿಕೆ ಹಾಕಿರುವ ಈ ಯುವಕನ ವಿರುದ್ಧ ಕೂಡಲೇ ಕಾನೂನು ಕ್ರಮ ಜಾರಿಯಾಗಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ, (ಏಜೆನ್ಸೀಸ್​).