environmental ಶಿರಾ ನಗರದ ಡಾ.ಎ.ಪಿ.ಜೆ. ಅಬ್ದುಲ್​ ಕಲಾಂ ಬಾಲಕಿಯರ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ ಅರಣ್ಯೀಕರಣ ಗಿಡನಾಟಿ ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ದೇವರಾಜ್​, ಜಿಲ್ಲಾ ಜನಜಾಗೃತಿ ಸಮಿತಿ ನಿಕಟಪೂರ್ವ ಅಧ್ಯಕ್ಷ ರಾಮಚಂದ್ರ ಗುಪ್ತ ಇದ್ದರು.  
ರಾಜ್ಯ

ಜನರಲ್ಲಿ ಪರಿಸರ ಜಾಗೃತಿ ಮೂಡಿಸಿ environmental

ಶಿರಾ:

ನಗರದ ಡಾ.ಎ.ಪಿ.ಜೆ. ಅಬ್ದುಲ್​ ಕಲಾಂ ಬಾಲಕಿಯರ ವಸತಿ ಪದವಿ ಪೂರ್ವ ಕಾಲೇಜ್​ನಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಸಾಮಾಜಿಕ ಅರಣ್ಯೀಕರಣ ಗಿಡನಾಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತುಮಕೂರು ಜಿಲ್ಲಾ -2 ನಿರ್ದೇಶಕ ಪ್ರವಿಣ್​ ಕುಮಾರ್​ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪರಿಸರ ಸಂರಕ್ಷಣೆ, ಹಸಿರು ಪರಿಸರ ನಿಮಾರ್ಣ ಹಾಗೂ ಜನರಲ್ಲಿ ಪರಿಸರ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಈ ಕಾರ್ಯಕ್ರಮದ ಮೂಲಕ ಸಾರ್ವಜನಿಕ ಸ್ಥಳಗಳು, ಶಾಲಾ&-ಕಾಲೇಜುಗಳು, ದೇವಸ್ಥಾನಗಳ ಆವರಣ, ಸರ್ಕಾರಿ ಕಚೇರಿಗಳು, ಗ್ರಾಮಗಳ ರಸ್ತೆ ಬದಿಗಳು ಹಾಗೂ ಖಾಲಿ ಜಾಗಗಳಲ್ಲಿ ವಿವಿಧ ಜಾತಿಯ ನೆರಳು, ಹಣ್ಣು ಮತ್ತು ಔಷಧಿಯ ಗಿಡಗಳನ್ನು ನೆಡಲಾಗುತ್ತದೆ. ಗಿಡಗಳನ್ನು ನೆಡುವುದರ ಜತೆಗೆ ಅವುಗಳ ಪಾಲನೆ- ಪೋಷಣೆಯ ಜವಾಬ್ದಾರಿಯನ್ನೂ ಸ್ಥಳಿಯರು ಮತ್ತು ಸಂಘ&-ಸಂಸ್ಥೆಗಳು ವಹಿಸುವಂತೆ ಪ್ರೇರೇಪಿಸಲಾಗುತ್ತದೆ ಎಂದರು.
ಒಬ್ಬ ವ್ಯಕ್ತಿ ಒಂದು ಗಿಡ ಎಂಬ ಮನೋಭಾವದೊಂದಿಗೆ ಪ್ರತಿಯೊಬ್ಬರೂ ಗಿಡ ನೆಟ್ಟು, ಅದನ್ನು ಮರವಾಗಿ ಬೆಳೆಸುವ ಸಂಕಲ್ಪ ಮಾಡಿದಾಗ ಮಾತ್ರ ಹಸಿರು ಕರ್ನಾಟಕ ಹಾಗೂ ಸುಸ್ಥಿರ ಪರಿಸರ ನಿಮಾರ್ಣ ಸಾಧ್ಯ ಎಂದು ಹೇಳಿದರು.
ನಾಗರಾಜು ಸವಿತಾ ಸಮಾಜದ ನಾಗೇಶ್​ ಬಾಬು, ಕಾಲೇಜಿನ ಪ್ರಾಂಶುಪಾಲ ಇಮಾನ್​ ಉಲ್ಲಾ, ಕೃಷಿ ಮೇಲ್ವಿಚಾರಕ ವೆಂಕಟೇಶ್​, ಸೇವಾಪ್ರತಿನಿಧಿ ಉಮಾ ಇದ್ದರು.