ಕಡಗಂಚಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮವನ್ನು ಸಸಿ ನೆಟ್ಟು ನೀರುಣಿಸುವ ಮೂಲಕ ಉದ್ಘಾಟಿಸಲಾಯಿತು. ಧರ್ಮಣ್ಣ ಧನ್ನಿ, ಲಿಂಗರಾಜ ಪಾಟೀಲ್, ಚಂದ್ರಕಲಾ, ಕರಬಸಪ್ಪ ಭುಸನೂರ, ಶರಣಬಸಪ್ಪ ನರೋಣಿ, ಬಾಬುರಾವ ಹೊಸಕುರುಬ ಇತರರಿದ್ದರು.
ಆಳಂದ: ಪರಿಸರ ಸಂರಣೆ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವುದು ಇಂದಿನ ಅವಶ್ಯವಾಗಿದೆ. ಪರಿಸರ ಪ್ರೆ ಶಿಣದ ಅವಿಭಾಜ್ಯ ಅಂಗವಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿ ಧರ್ಮಣ್ಣ ಧನ್ನಿ ಹೇಳಿದರು.
ಕಡಗಂಚಿಯಲ್ಲಿನ ವಿದ್ಯಾವರ್ಧಕ ಸಂಘ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗುರುವಂದನೆ ಸಮಾರಂಭವನ್ನು ಸಸಿ ನೆಟ್ಟು ನೀರುಣಿಸುವ ಮೂಕಲ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಕೇವಲ ಉದ್ಯೋಗಕ್ಕೆ ಸೀಮಿತವಾಗದೆ ಸಾಮಾಜಿಕ ಜವಾಬ್ದಾರಿ, ಪರಿಸರ ಕಾಳಜಿ ಹಾಗೂ ಮಾನವೀಯ ಮೌಲ್ಯ ಬೆಳೆಸುವ ಸಾಧನವಾಗಬೇಕು ಎಂದರು.
ಮುಖ್ಯಗುರು ಲಿಂಗರಾಜ ಎಸ್.ಪಾಟೀಲ್ ಅಧ್ಯಕ್ಷತೆವಹಿಸಿ ಮಾತನಾಡಿ, ವಿದ್ಯೆ ಕಲಿಸಿದ ಗುರುಗಳನ್ನು ಸ್ಮರಿಸಿ, ಗೌರವ ಸಲ್ಲಿಸುವ ಸಂಸತಿ ಉಳಿಯಬೇಕು. ವಿದ್ಯಾರ್ಥಿಗಳು ಶಿಣದ ಜತೆಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಸಂಸ್ಥೆ ಕಾರ್ಯದರ್ಶಿ ಕರಬಸಪ್ಪ ಭೂಸನೂರ ಪ್ರಾಸ್ತಾವಿಕ ಮಾತನಾಡಿದರು. 2005ನೇ ಸಾಲಿನ ಹಳೇ ವಿದ್ಯಾರ್ಥಿಗಳು ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿದರು. ಪ್ರಮುಖರಾದ ಶರಣಬಸಪ್ಪ ನರೋಣಿ, ಬಾಬುರಾವ ಹೊಸಕುರುಬ, ಚಂದ್ರಕಲಾ, ಅಂದಪ್ಪ ಡೋಣಿ, ಮಹಾದೇವಪ್ಪ ಹೊಸಳ್ಳಿ, ರಾಜಕುಮಾರ ಜವಳಿ, ರಾಜೇಶ ಜಮಾದಾರ, ಮಹೇಶ ಅಲ್ದಿ, ಮಲ್ಲಿಕಾರ್ಜುನ ಜವಳಿ, ಶಾಮರಾವ ಹೊಸಕುರುಬ, ಶಾಂತಕುಮಾರ ತಡಕಲ್, ವಿಶ್ವನಾಥ, ಮಲ್ಲು ಸುಂಟನೂರ, ಭೀಮಾ ಗೋಮದ, ಬೀರಣ್ಣ ಅರಬ ಇತರರಿದ್ದರು.