ಕೊರಟಗೆರೆಯ ಸುವರ್ಣ ಲಕ್ಷಿ$್ಮ ನರಸಿಂಹಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಡ್ರಗ್ಸ್​ಮುಕ್ತ ಕರ್ನಾಟಕ ಜನಜಾಗೃತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್​ ಮಂಜುನಾಥ್​, ತಾಲೂಕು ಆರೋಗ್ಯಾಧಿಕಾರಿ ಡಾ.ಫೈರೋಜ್​ ಬೇಗಂ, ಸಿಪಿಐ ಪುರುಷೋತ್ತಮ, ಪಿಎಸ್​ಐ ತೀರ್ಥೇಶ್​, ಅಭಿಷೇಕ್​, ತಾರಾ ಇದ್ದರು. 
ರಾಜ್ಯ

ಅಪರಾಧ ಚಟುವಟಿಕೆಗಳ ಅರಿವು ಮೂಡಿಸಿ

ತುಮಕೂರು ಡೆಸ್ಕ್
ಕೊರಟಗೆರೆ:ಡ್ರಗ್ಸ್​, ಪೋಕ್ಸೊ ಕಾಯ್ದೆ, ಬಾಲ್ಯವಿವಾಹ, ಅಪ್ರಾಪ್ತರಿಂದ ವಾಹನ ಚಾಲನೆ ಸೇರಿ ಅಪರಾಧ ಚಟುವಟಿಕೆಗಳ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ಮಧುಗಿರಿ ಉಪವಿಭಾಗದ ಡಿವೈಎಸ್​ಪಿ ಮಂಜುನಾಥ್​ ಹೇಳಿದರು
.
ಪಟ್ಟಣದ ಸುವರ್ಣಮುಖಿ ಲಕ್ಷಿ$್ಮನರಸಿಂಹಸ್ವಾಮಿ ಕಲ್ಯಾಣ ಮಂಟಪದಲ್ಲಿ ಪೊಲೀಸ್​ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಪ್ರಿಯದರ್ಶಿನಿ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಡ್ರಗ್ಸ್​ಮುಕ್ತ ಕರ್ನಾಟಕ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಯುವಜನತೆ ದೇಶದ ಅಮೂಲ್ಯ ಶಕ್ತಿಯಾಗಿದ್ದು, ಅವರನ್ನು ಮಾದಕ ವ್ಯಸನ, ಅಪರಾಧ ಚಟುವಟಿಕೆ ಹಾಗೂ ಸಮಾಜಘಾತಕ ಕೃತ್ಯಗಳಿಂದ ದೂರವಿಡುವುದು ಪಾಲಕರ ಮತ್ತು ಸಮಾಜದ ಜವಾಬ್ದಾರಿ ಎಂದರು.
ತಹಸೀಲ್ದಾರ್​ ಮಂಜುನಾಥ್​ ಮಾತನಾಡಿ, ಭಾರತವು ವಿಶ್ವದ ದೊಡ್ಡ ಯುವಶಕ್ತಿ ಹೊಂದಿರುವ ದೇಶವಾಗಿದೆ. ಯುವಜನತೆಯನ್ನು ಮಾದಕ ವ್ಯಸನದಿಂದ ರಕ್ಷಿಸುವುದು ಪೊಲೀಸ್​ ಇಲಾಖೆಯೊಂದರ ಕರ್ತವ್ಯವಲ್ಲ, ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ. ಶಿಕ್ಷಣ ಮತ್ತು ಜಾಗೃತಿಯ ಮೂಲಕವೇ ಡ್ರಗ್ಸ್​ ಹಾವಳಿ ನಿಯಂತ್ರಿಸಲು ಸಾಧ್ಯ ಎಂದರು.
"ಡ್ರಗ್ಸ್​ ಮತ್ತು ಮಾದಕ ವ್ಯಸನವು ಯುವಜನತೆಯ ಜೀವನವನ್ನೇ ನಾಶಗೊಳಿಸುವ ಮಹಾಮಾರಿ. ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಡ್ರಗ್ಸ್​ ಜಾಲ ವಿಸ್ತರಿಸುತ್ತಿದೆ. ದೇಶದ ಭವಿಷ್ಯವಾದ ಯುವಜನತೆಯನ್ನು ರಕ್ಷಿಸಲು ಶಿಕ್ಷಣ, ಜಾಗೃತಿ ಮತ್ತು ಪಾಲಕರ ಕಾಳಜಿಯೇ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಪ್ರಿಯದರ್ಶಿನಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರುದ್ರೇಶ್​ ಹೇಳಿದರು.
ವಿದ್ಯಾರ್ಥಿಗಳಿಗೆ ಡ್ರಗ್ಸ್​ ಮುಕ್ತ ಕರ್ನಾಟಕ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು.