ಕಲಬುರಗಿ ಎಂಪಿಎಚ್ಎಸ್ ಪಿಯು ಕಾಲೇಜಿನಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಭಾನುವಾರ ಆಯೋಜಿಸಿದ್ದ ತಾಲೂಕು ಸಮಾವೇಶದಲ್ಲಿ ಸಂಜೀವಕುಮಾರ ಸಕ್ಕರಗಿ ಮಾತನಾಡಿದರು. ಚೇಗರಡ್ಡಿ, ಶಿವಶರಣಪ್ಪ ಮುಳೇಗಾಂವ್, ನಾಗೇಂದ್ರಪ್ಪ ಅವರಾದ್, ನರಸಪ್ಪ ರಂಗೋಲಿ ಇತರರಿದ್ದರು.
- ರಾಜ್ಯ ಉಪಾಧ್ಯಕ್ಷ ಚೇಗರೆಡ್ಡಿ ಕರೆ
- ಭಾರತ ಜ್ಞಾನ ವಿಜ್ಞಾನ ಸಮಿತಿ ತಾಲೂಕು ಸಮಾವೇಶ
ಕಲಬುರಗಿ: ಸರ್ಕಾರದ ಜನವಿರೋಧಿ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಹೋರಾಟ ರೂಪಿಸುವ ಕೆಲಸ ಮಾಡಬೇಕು ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯ ಚೇಗರೆಡ್ಡಿ ಹೇಳಿದರು.
ಎಂಪಿಎಚ್ಎಸ್ ಪದವಿಪೂರ್ವ ಕಾಲೇಜಿನಲ್ಲಿ ಭಾರತ ನ ವಿಜ್ಞಾನ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಸಮಾವೇಶ ಉದ್ಘಾಟಿಸಿ ಮಾತನಾಡಿ, ಸಮಿತಿ ಕಾರ್ಯಕರ್ತರು, ಪದಾಧಿಕಾರಿಗಳು ಸರ್ಕಾರದ ಜನವಿರೋಧಿ ಯೋಜನೆ ಧಿಕ್ಕರಿಸಬೇಕು. ಈ ಕುರಿತು ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಬೇಕು. ಜನಾಭಿಪ್ರಾಯ ರೂಪಿಸಬೇಕು ಎಂದು ಕರೆ ನೀಡಿದರು.
ಉಪನ್ಯಾಸಕ ಸಂಜೀವಕುಮಾರ ಸಕ್ಕರಗಿ ಉಪನ್ಯಾಸ ನೀಡಿ, ಸರ್ಕಾರ ಕೆಪಿಎಸ್ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದು, ಇದರಿಂದ ನೆರೆಹೊರೆಯ ಸಮಾನ ಶಾಲೆಗಳ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ. ಇದು ಮಕ್ಕಳ ಶಿಣದ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಈ ಕುರಿತು ಗಂಭೀರ ಚಿಂತನೆ ನಡೆಯಬೇಕು ಎಂದರು.
ರಾಜ್ಯ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂದ ಜಿಲ್ಲಾಧ್ಯ ನರಸಪ್ಪ ರಂಗೋಲಿ ಮಾತನಾಡಿ, ನಾವು ಸರ್ಕಾರಿ ನೌಕರರಾಗಿ ಈ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಾಗುತ್ತದೆ. ಇದರಲ್ಲಿರುವ ಬಾಧಕಗಳ ಬಗ್ಗೆ ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಸಮಿತಿ ಜಿಲ್ಲಾಧ್ಯಕ್ಷ ಶಿವಶರಣಪ್ಪ ಮುಳೇಗಾಂವ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಆಪ್ತ ಕಾರ್ಯದರ್ಶಿ ನಾಗೇಂದ್ರಪ್ಪ ಅವರಾದ, ಜಿಲ್ಲಾ ಕಾರ್ಯದರ್ಶಿ ರವಿಚಂದ್ರ ಅತನೂರ ಇತರರಿದ್ದರು.
ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕ ರಚಿಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಸುಭಾಷಚಂದ್ರ ಆರ್. (ಗೌರವಾಧ್ಯ), ಮಲ್ಲಿಕಾರ್ಜುನ ಶಿರಸಗಿ (ಅಧ್ಯ), ಧನರಾಜ (ಕಾರ್ಯದರ್ಶಿ), ಭಾಗಣ್ಣ ಗುಡ್ಡೊಡಗಿ (ಖಜಾಂಚಿ), ಸುರೇಖಾ ಡೆಂಗೆ (ಉಪಾಧ್ಯಕ್ಷ), ಗೌತಮ ನೂಲೆ (ಉಪಾಧ್ಯ), ರೇಣುಕಾ ಎನ್. (ಸಹ ಕಾರ್ಯದರ್ಶಿ), ಶರಣಬಸಪ್ಪ (ಸಹ ಕಾರ್ಯದರ್ಶಿ), ದಸ್ತಗಿರಸಾಬ್ ಬಾಗವಾನ್ (ಸಂಟನಾ ಕಾರ್ಯದರ್ಶಿ), ಪ್ರಶಾಂತ, ದೌಲತರಾವ್ ದೇಸಾಯಿ (ಜಿಲ್ಲಾ ಸಮಿತಿ ಸದಸ್ಯರು) ಮತ್ತು 10 ಜನ ಸದಸ್ಯರು ಸಮಿತಿಯಲ್ಲಿರುತ್ತಾರೆ ಎಂದು ನಾಗೇಂದ್ರಪ್ಪ ಅವರಾದ ತಿಳಿಸಿದರು.