ಬೆಲೆ ನಿಯಂತ್ರಣಕ್ಕೆ ಕಾನೂನು ರಚಿಸಿ prices 
ರಾಜ್ಯ

ಬೆಲೆ ನಿಯಂತ್ರಣಕ್ಕೆ ಕಾನೂನು ರಚಿಸಿ prices

ಕೋಲಾರ ಡೆಸ್ಕ್
ಮುಳಬಾಗಿಲು: ಕೃಷಿ ಕ್ಷೇತ್ರಕ್ಕೆ ಅವಶ್ಯ ಇರುವ ಪರಿಕರಗಳ ಬೆಲೆ ಹೆಚ್ಚಳ ಮಾಡಿರುವ ಮಾರಾಟಗಾರರ ಮತ್ತು ಖಾಸಗಿ ಕಂಪನಿಗಳ ವಿರುದ್ಧ ಕ್ರಮ ಕೈಗೊಂಡು ಬೆಲೆ ನಿಯಂತ್ರಣಕ್ಕೆ ಕಾನೂನು ರಚಿಸಬೇಕು ಎಂದು ಒತ್ತಾಯಿಸಿ ರೈತ ಸಂಘದಿಂದ ಕೃಷಿ ಪರಿಕರಗಳ ಸಮೇತ ಟಿಎಪಿಎಂಎಸ್​ ಮುಂಭಾಗದ ಹನುಮಾನ್​ ವೃತ್ತದಲ್ಲಿ ಕೃಷಿ ಅಧಿಕಾರಿ ಬಿ.ಎಂ.ಶುಭಾ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. prices
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಇರಾನ್​&ಅಮೇರಿಕ ಯುದ್ಧ ನೆಪದಲ್ಲಿ ಕಚ್ಚಾ ವಸ್ತುಗಳು ಸಿಗುತ್ತಿಲ್ಲ ಎಂಬ ನೆಪದಲ್ಲಿ ಖಾಸಗಿ ಕೃಷಿ ಪರಿಕರಗಳ ಉತ್ಪಾದನ ಕಂಪನಿಗಳು, ವ್ಯಾಪಾರಸ್ಥರು ಏಕಾಏಕಿ ಕೃಷಿ ಕ್ಷೇತ್ರಕ್ಕೆ ಅವಶ್ಯ ಇರುವ ಮಲ್ಟಿಂಗ್​ ಪೇಪರ್​, ಡ್ರಿಪ್​ ಮತ್ತು ಡ್ರಿಪ್​ ಗೊಬ್ಬರಗಳ ಮೇಲೆ ಸಾವಿರಾರು ರೂಪಾಯಿ ಏರಿಕೆ ಮಾಡುವ ಮುಖಾಂತರ ರೈತರ ಜೀವನದ ಜತೆ ಚಲ್ಲಾಟವಾಡುತ್ತಿದ್ದಾರೆ. ಖಾಸಗಿ ಕಂಪನಿಗಳ ಬೆಲೆ ಹಾವಳಿ ನಿಯಂತ್ರಣಕ್ಕೆ ಕಾನೂನು ರಚನೆ ಮಾಡಬೇಕೆಂದು ಹೇಳಿದರು.
ಲಕ್ಷಾಂತರ ರೂ. ಬಂಡವಾಳ ಹಾಕಿ ಬೆಳೆಯುತ್ತಿರುವ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೆ ಖಾಸಗಿ ಸಾಲಕ್ಕೆ ಸಿಲುಕಿರುವ ರೈತರಿಗೆ ಕೃಷಿ, ತೋಟಗಾರಿಕೆ ಅಧಿಕಾರಿಗಳು ರೈತರ ಪಾಲಿಗೆ ಇದ್ದು ಇಲ್ಲದಂತಾಗಿದ್ದಾರೆ. 1 ಎಕರೆ ಕೃಷಿ ಮಾಡಬೇಕಾದರೆ ಉಳುಮೆಯಿಂದ ಹಿಡಿದು ನಾಟಿ ಮಾಡುವವರೆಗೆ ಕನಿಷ್ಟ ಎರಡರಿಂದ ಮೂರು ಲಕ್ಷ ರೂ. ರ್ಖಚಾಗುತ್ತದೆ.
ಕೃಷಿ ಅಧಿಕಾರಿ ಬಿ.ಎಂ.ಶುಭಾ ಮನವಿ ಸ್ವೀಕರಿಸಿ ಮಾತನಾಡಿ, ಮನವಿಯನ್ನು ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ತಲುಪಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.