meeting ಗುಬ್ಬಿ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಳೇ ವಿದ್ಯಾರ್ಥಿಗಳ ಸಂಘದ ಸದಸ್ಯರ ಸಭೆ ನಡೆಯಿತು. ಲೋಕೇಶ, ರಂಗಸ್ವಾಮಿ ರಾಮಾಂಜನೇಯ, ಮಧು, ಬಸವರಾಜು,ಉಪನ್ಯಾಸಕ ಗಂಗಾಧರ್​, ಮಲ್ಲಿಕಾರ್ಜುನ ಪ್ರಭು, ಶಿವಪ್ಪ ಇದ್ದರು.  
ರಾಜ್ಯ

ಕಲಿಕೆಗೆ ಉತ್ತಮ ವಾತಾವರಣ ಸೃಷ್ಟಿಸಿ meeting

ತುಮಕೂರು ಡೆಸ್ಕ್
ಗುಬ್ಬಿ: ಶೈಕ್ಷಣಿಕ ಹಾಗೂ ಭೌತಿಕ ಅಭಿವೃದ್ಧಿಯ ಮೂಲಕ ಕಲಿಕೆಗೆ ಉತ್ತಮ ವಾತಾವರಣ ಕಲ್ಪಿಸಲು meeting ಹಳೇ ವಿದ್ಯಾರ್ಥಿಸಂಘ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿ ಕಾಲೇಜು ಅಭಿವೃದ್ಧಿಗೆ ಸಹಕಾರ ನೀಡಲಿ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಒ.ನಾಗರಾಜ್​ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಹಳೇ ವಿದ್ಯಾರ್ಥಿಗಳ ಸಂಘದ ಸದಸ್ಯರ ಸಭೆಯಲ್ಲಿ ಮಾತನಾಡಿ, ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿದ್ದಾರೆ. ಅಂತಹ ವಿದ್ಯಾರ್ಥಿಗಳನ್ನು ಒಗ್ಗೂಡಿಸಿಕೊಂಡು ಸಂಘ ಶೈಕ್ಷಣಿಕ ಪ್ರಗತಿಗೆ ಕೆಲಸ ಮಾಡಲಿ ಎಂದರು.
ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಎಚ್​.ಟಿ ಭೈರಪ್ಪ ಮಾತನಾಡಿ, ಕಾಲೇಜು ದಿನಗಳು ಪ್ರತಿಯೊಬ್ಬರ ಜೀವನದ ಸುವರ್ಣ ಕ್ಷಣ. ತಾವು ಕಲಿತ ಶಿಕ್ಷಣ ಸಂಸ್ಥೆ ಬೆಳವಣಿಗೆಗೆ ಶ್ರಮಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಿದೆ. ಸಂದ ಪದಾಧಿಕಾರಿಗಳು ಕಾಲೇಜಿನಲ್ಲಿ ಓದುತ್ತಿರುವ ಮಕ್ಕಳಿಗೆ ಶೈಕ್ಷಣಿಕ ಅಭಿವೃದ್ಧಿ ಹೊಂದಲು ಉತ್ತಮ ವಾತಾವರಣ ಸೃಷ್ಟಿಸಬೇಕು ಎಂದರು.
ನಿರ್ದೇಶಕ ಡಿ.ಲೋಕೇಶ, ಕೋಟೆರಂಗಸ್ವಾಮಿ, ರಾಮಾಂಜನೇಯ, ಮಧು, ಬಸವರಾಜು, ಗ್ರಂಥ ಪಾಲಕ ಡಾ.ರಾಘವೇಂದ್ರ, ಉಪನ್ಯಾಸಕ ಡಾ.ಗಂಗಾಧರ್​, ಸಂಚಾಲಕ ಮಲ್ಲಿಕಾರ್ಜುನ ಪ್ರಭು, ವ್ಯವಸ್ಥಾಪಕ ಶಿವಪ್ಪ ಇತರು ಇದ್ದರು.