ಸಿಎಂ ಡಿ.ಕೆ. ಶಿವಕುಮಾರ್ ಬಾಲ್ಯ ಸ್ನೇಹಿತರಾಗಿರುವ ರವಿಚಂದ್ರನ್ 
ರಾಜ್ಯ

ಕ್ರೇಜಿಸ್ಟಾರ್​ಗೆ MLC ಪಟ್ಟ? ಮೇಲ್ಮನೆಗೇರಲು ಸಜ್ಜಾದ ಸಿಎಂ ಡಿಕೆಶಿ ಬಾಲ್ಯ ಸ್ನೇಹಿತ ವಿ. ರವಿಚಂದ್ರನ್​? V. Ravichandran

ಪ್ರಮುಖ ಮುಖ್ಯಾಂಶಗಳು

  • ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರಿಗೆ ಎಂಎಲ್‌ಸಿ (MLC) ಪಟ್ಟ?
  • ಸಿಎಂ ಡಿ.ಕೆ. ಶಿವಕುಮಾರ್ ಬಾಲ್ಯ ಸ್ನೇಹಿತರಾಗಿರುವ ರವಿಚಂದ್ರನ್
  • ಸಾಂಸ್ಕೃತಿಕ ಕೋಟಾದಡಿ ಮೇಲ್ಮನೆಗೆ ಎಂಟ್ರಿಕೊಡಲು ಸಜ್ಜಾದ ಕ್ರೇಜಿಸ್ಟಾರ್
ಬೆಂಗಳೂರು: ಕೆಲ ದಿನಗಳ ಹಿಂದೆಯಷ್ಟೆ ಕರ್ನಾಟಕ ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆಯಾಗಿದ್ದು, ನಿನ್ನೆಯಷ್ಟೇ ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಿದ್ದು ಸಕ್ಕತ್​ ಸುದ್ದಿಯಾಗಿತ್ತು. ಆದರೆ ಈಗ ರಾಜ್ಯ ರಾಜಕಾರಣದಿಂದ ಮತ್ತೊಂದು ಬಿಗ್​ ಅಪ್ಡೇಟ್​ ಬಂದಿದ್ದು, ಸಿನಿಮಾ ನಟ- ನಿರ್ದೇಶಕ- ನಿರ್ಮಾಪಕ ವಿ. ರವಿಚಂದ್ರನ್​ (V. Ravichandran) ವಿಧಾನ ಪರಿಷತ್​ಗೆ ಆಯ್ಕೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.
ಕೆಲ ದಿನಗಳ ಹಿಂದಷ್ಟೆ, ರವಿಚಂದ್ರನ್​ ಅವರು, ಸಿಎಂ ಡಿ.ಕೆ. ಶಿವಕುಮಾರ್​ ಅವರನ್ನು ಸಿನಿಮಾದಲ್ಲಿ ಬೇಟಿಯಾಗಿದ್ದರು. ಆ ಸಮಯದಲ್ಲಿ ಈ ಬೇಟಿ ಏತಕ್ಕಾಗಿ ನಡೆದಿರಬಹುದು? ಎಂಬ ಚರ್ಚೆ ಜೋರಾಗಿತ್ತು. ಈಗ ತಿಳಿದಿರುವ ಮಾಹಿತಿ ಪ್ರಕಾರ, ರವಿಚಂದ್ರನ್​ ಅವರನ್ನು ಮೇಲ್ಮೆನೆಗೆ ಕಳುಹಿಸಲು ಹೈಕಮಾಂಡ್​ ಒಪ್ಪಿಗೆ ಸೂಚಿಸಿದ್ದು, ಇನ್ನೇನು ಕೆಲವೇ ಗಂಟೆ ಅಥವಾ ದಿನಗಳಲ್ಲಿ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.

ಕ್ಲಾಸ್​ಮೇಟ್​ ಟು ಕೌಂನ್ಸಿಲ್​ಮೇಟ್!

ಅಂದಹಾಗೆ ಕನ್ನಡ ಚಿತ್ರರಂಗದಲ್ಲಿ ಸುಮಾರು 40 ಕ್ಕೂ ಹೆಚ್ಚು ವರ್ಷಗಳನ್ನು ಕಳೆದಿರುವ ವಿ. ರವಿಚಂದ್ರನ್​, ಪ್ರಸ್ತುತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಒಂದು ಕಾಲದ ಕ್ಲಾಸ್​ಮೇಟ್​ ಕೂಡ ಆಗಿದ್ದರು. ಶಾಲಾ ದಿನಗಳಲ್ಲಿ ಇಬ್ಬರು ಒಂದೇ ಬೆಂಚ್​ ಮೇಲೆ ಕುಳಿತುಕೊಳ್ಳುತ್ತಿದ್ದ ಬಗ್ಗೆ ಹಿಂದೊಮ್ಮೆ ರವಿಮಾಮ ಹೇಳಿದ್ದು, ಈಗ ಎಲ್ಲಡೆ ಟ್ರೆಂಡ್​ ಆಗುತ್ತಿದ್ದು. ಸಾಂಸ್ಕೃತಿಕ ಕೋಟಾದಡಿ ರವಿಚಂದ್ರನ್​ ಅವರನ್ನು ಎಂಎಲ್​ಸಿ ಮಾಡಲು ಕಾಂಗ್ರೆಸ್​ ಸರ್ಕಾರ ಸಜ್ಜಾಗಿದ್ದು, ಅಧಿಕೃತ ಆದೇಶವೊಂದು ಹೊರಬೀಳುವುದು ಬಾಕಿಯಿದೆ.

ಅಭಿಮಾನಿಗಳಲ್ಲಿ ಸಂಭ್ರಮ!

ಇನ್ನು ರವಿಚಂದ್ರನ್​ ಅವರು ತಮ್ಮ ಬದುಕಿನ ರಾಜಕೀಯ ಇನ್ನಿಂಗ್ಸ್​ ಆರಂಭಿಸುತ್ತಾರೆಂದು ತಿಳಿದ ಕೂಡಲೇ ಅವರ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ. ಸುಮಾರು ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರರಂಗಕ್ಕೆ ಕ್ರೇಜಿಸ್ಟಾರ್​ ಸಲ್ಲಿಸಿರುವ ಕಲಾ ಸೇವೆಗೆ ಇಂದು ತಕ್ಕ ಗೌರವ ಹಾಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ರವಿಚಂದ್ರನ್​ ಅಭಿಮಾನಿಗಳು ಹೇಳುತ್ತಿದ್ದಾರೆ.