ಹುಮನಾಬಾದ್ ತಾಲೂಕಿನ ಹುಡಗಿ ಗ್ರಾಮದಲ್ಲಿ ಮಂಗಳವಾರ ಬಿಜೆಪಿ ಮಂಡಲ ವತಿಯಿಂದ ಬಿಎಲ್ಎ&2 ಹಾಗೂ ಪದ ಕಾರ್ಯಕರ್ತರ ಕಾರ್ಯಾಗಾರವನ್ನು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಉದ್ಘಾಟಿಸಿದರು. ಬಿಜೆಪಿ ಜಿಲ್ಲಾಧ್ಯ ಸೋಮನಾಥ ಪಾಟೀಲ, ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ಪ್ರಮುಖರಾದ ಶಿವಾನಂದ ಮಂಠಾಳಕರ, ಬಸವರಾಜ ಆರ್ಯ, ಮಾಧವ ಹೊಸೂರೆ, ಬಾಬು ವಾಲಿ, ಬಸವರಾಜ ಮಹೇಶ್ವರ ಸ್ವಾಮಿ ಇತರರಿದ್ದರು.
- ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಅಭಿಮತ
- ಹುಡಗಿ ಗ್ರಾಮದಲ್ಲಿ ಕಾರ್ಯಕರ್ತರ ಸಭೆ
ಹುಮನಾಬಾದ್: ಮತದಾರ ಪಟ್ಟಿಯ ತೀವ್ರ ವಿಶೇಷ ಪರಿಷ್ಕರಣೆಯು (ಎಸ್ಐಆರ್) ನಕಲಿ ಮತದಾರರ ಹೆಸರನ್ನು ತೆಗೆದು ಹಾಕಲು ಹಾಗೂ ಹೊಸ ಮತದಾರರನ್ನು ಸೇರ್ಪಡೆಗೊಳಿಸಲು ಉತ್ತಮ ಅವಕಾಶ ಕಲ್ಪಿಸಿದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.
ತಾಲೂಕಿನ ಹುಡಗಿ ಗ್ರಾಮದಲ್ಲಿ ಮಂಗಳವಾರ ಬಿಜೆಪಿ ಹುಮನಾಬಾದ್ ಮಂಡಲ ವತಿಯಿಂದ ಬಿಎಲ್ಎ&2 ಹಾಗೂ ಪದ ಕಾರ್ಯಕರ್ತರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಕುರಿತು ವಿವರವಾದ ಮಾಹಿತಿ ನೀಡಿ, ಬೂತ್ ಮಟ್ಟದ ಏಜೆಂಟ್ಗಳಾದ ಬಿಎಲ್ಎ&2 ಪದಾಧಿಕಾರಿಗಳು ನಿರ್ವಹಿಸಬೇಕಾದ ಕರ್ತವ್ಯ, ಜವಾಬ್ದಾರಿಗಳು ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅವರ ಪಾತ್ರದ ಕುರಿತು ಸಮಗ್ರವಾಗಿ ವಿವರಿಸಿದರು.
ಭಾರತೀಯ ಜನತಾ ಪದ ಸಂಟನೆಯ ಜೀವಾಳವೇ ಕಾರ್ಯಕರ್ತರು. ವಿಶೇಷವಾಗಿ ಮತಗಟ್ಟೆ ಮಟ್ಟದಲ್ಲಿ ಪ ಸಂಟನೆಯ ಜವಾಬ್ದಾರಿ ಹೊತ್ತ ಕಾರ್ಯಕರ್ತರ ಪರಿಶ್ರಮವೇ ಚುನಾವಣಾ ಗೆಲುವಿನ ಮೂಲವಾಗಿದೆ. ಬೂತ್ ಮಟ್ಟದಲ್ಲಿ ಪದ ಸಂಟನೆಯನ್ನು ಇನ್ನಷ್ಟು ಬಲಪಡಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಬಿಜೆಪಿ ಜಿಲ್ಲಾಧ್ಯ ಸೋಮನಾಥ ಪಾಟೀಲ, ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧವ ಹೊಸೂರೆ, ಜಿಲ್ಲಾ ಎಸ್ಐಆರ್ ಸಂಯೋಜಕ ಬಾಬು ವಾಲಿ, ಮಂಡಲ ಪ್ರಭಾರಿ ಮಹೇಶ್ವರ ಸ್ವಾಮಿ, ಹುಮನಾಬಾದ್ ಮಂಡಲದ ಎಸ್ಐಆರ್ (ಬಿಎಲ್ಒ&1) ನಾಗಭೂಷಣ ಸಂಗಮ, ಅಂಬೇಡ್ಕರ್ ನಿಗಮದ ಮಾಜಿ ನಿರ್ದೇಶಕ ಬಸವರಾಜ ಆರ್ಯ, ಜಿಲ್ಲಾ ನಿಕಟಪೂರ್ವ ಅಧ್ಯ ಶಿವಾನಂದ ಮಂಠಳಕರ, ಜಿಲ್ಲಾ ಉಪಾಧ್ಯ ಮಲ್ಲಿಕಾರ್ಜುನ ಪಾಟೀಲ ಬೆಳಕೇರಾ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರವಿ, ಗೋಪಾಲಕೃಷ್ಣ ಮೋಹಳೆ ಇತರರು ಉಪಸ್ಥಿತರಿದ್ದರು.