ವೃತ್ತಿಯಲ್ಲಿ ಪ್ರಾಮಾಣಿಕತೆ ಮೆರೆದ ಸಿಪಿಐ CPI
- ಜಿಪಂ ಮಾಜಿ ಅಧ್ಯಕ್ಷ ತೂಪಲ್ಲಿ ಆರ್. ನಾರಾಯಣಸ್ವಾಮಿ ಅನಿಸಿಕೆ
ಶ್ರೀನಿವಾಸಪುರ: ಸಿಪಿಐ ಮಹಮದ್ ಗೊರವನಕೊಳ್ಳ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಉತ್ತಮ ಸೇವೆ ಮಾಡಿ ವೃತ್ತಿಯಲ್ಲಿ ನೈಪುಣ್ಯ ಹಾಗೂ ಪ್ರಾಮಾಣಿಕತೆ ಮೆರೆದಿದ್ದಾರೆ ಎಂದು ಜಿಪಂ ಮಾಜಿ ಅಧ್ಯಕ್ಷ ತೂಪಲ್ಲಿ ಆರ್. ನಾರಾಯಣಸ್ವಾಮಿ ಹೇಳಿದರು.CPI
ಪಟ್ಟಣದ ಸರ್ಕಾರಿ ಸೌಕರರ ಭವನದಲ್ಲಿ ಶನಿವಾರ ಪೊಲೀಸ್ ಇಲಾಖೆ ಹಾಗೂ ವಿವಿಧ ಸಂ&ಸಂಸ್ಥೆಗಳ ಸಹಯೋಗದಲ್ಲಿ ಲೋಕಾಯುಕ್ತಕ್ಕೆ ವರ್ಗಾವಣೆಗೊಂಡ ಸಿಪಿಐ ಮಹಮದ್ ಗೊರವನಕೊಳ್ಳ ಅವರಿಗೆ ಆಯೋಜಿಸಿದ್ದ ಬೀಳ್ಕೊಡುಗೆಯಲ್ಲಿ ಮಾತನಾಡಿ, ಚಾಣಾಕ್ಷತೆಯಿಂದ ಎಲ್ಲ ಪಕ್ಷಗಳ ಮುಖಂಡರನ್ನು ವ್ಯವಸ್ಥಿತವಾಗಿ ಸರಿದೂಗಿಸಿಕೊಂಡು ಹೋಗುವ ಕೆಲಸ ಮಾಡಿದ್ದಾರೆ ಎಂದರು.
ಮುಖ್ಯಪೇದೆ ಅಪರಾಧ ವಿಭಾಗದ ಆನಂದ್ ಮಾತನಾಡಿ, ಠಾಣೆಯಲ್ಲಿ ಅಧಿಕಾರ ವಹಿಸಿಕೊಂಡ ಆರಂಭದ ದಿನಗಳಲ್ಲೇ ಬಾವಲಿಗಳ ಸಮಸ್ಯೆ ತಪ್ಪಿಸಿದರು. ಠಾಣೆಗೆ ಸುಣ್ಣಬಣ್ಣ ಹಾಕಿಸಿ, ವಿನಾಯಕನ ದೇವಸ್ಥಾನ ಸ್ಥಾಪಿಸಿ, ಠಾಣೆಗೆ ಹೆಬ್ಬಾಗಿಲು ನಿರ್ಮಿಸಿ, ಜನಸ್ನೇಹಿಯಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಸ್ಮರಿಸಿದರು.
ಪುರಸಭೆ ನಾಮಿನಿ ಸದಸ್ಯ ನರಸಿಂಹಮೂರ್ತಿ, ಪೂಲು ಶಿವಾರೆಡ್ಡಿ, ಮಹೇಶ್, ಬುಜ್ಜಿ ರಾಮಕೃಷ್ಣ, ಗುತ್ತಿಗೆದಾರ ಗೌಡಹಳ್ಳಿ ವೆಂಕಟರೆಡ್ಡಿ,ಕಾನ್ಸ್ಟೆಬಲ್ಗಳಾದ ರಾಜು, ಗುಡಿಪಲ್ಲಿ ರಾಮಚಂದ್ರ, ರಮೇಶ್ ಇದ್ದರು.