- ಕಬ್ಬಿಣದ ಅದಿರು ಅಕ್ರಮ ದಾಸ್ತಾನಿಗೆ ನೆರವು
- ಟ್ರಾೃಕ್ಟರ್ ಮಾಲೀಕರಿಂದ ಹಣ ಪಡೆದ ಆರೋಪ
ಬಳ್ಳಾರಿ: ಕಬ್ಬಿಣದ ಅದಿರು ಅಕ್ರಮ ದಾಸ್ತಾನಿಗೆ ನೆರವಾಗಿದ್ದು, ಕೆರೆಯ ಮಣ್ಣು ಸಾಗಿಸುತ್ತಿದ್ದ ದಂಧೆಕೋರರಿಂದ ಲಂಚ ವಸೂಲಿ ಮಾಡಿದ ಆರೋಪದಡಿ ಬಳ್ಳಾರಿ ಗ್ರಾಮೀಣ ವೃತ್ತ ಸಿಪಿಐ ಉದಯ ರವಿ ಅವರನ್ನು ಅಮಾನತು ಮಾಡಲಾಗಿದೆ. ತಾಲೂಕಿನ ಹಲಕುಂದಿ ಗ್ರಾಮದ ಬಳಿ ಅಕ್ರಮ ಅದಿರು ದಾಸ್ತಾನು ಪ್ರಕರಣವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ ಮುಚ್ಚಿಹಾಕಲು ಉದಯರವಿ ಯತ್ನಿಸಿದ್ದರು.
ಕೊಳಗಲ್ ಗ್ರಾಮದ ಕೆರೆಯ ಮಣ್ಣನ್ನು ಇಟ್ಟಂಗಿ ಭಟ್ಟಿಗಳಿಗೆ ಅಕ್ರಮವಾಗಿ ಸಾಗಿಸಲು ಟ್ರಾೃಕ್ಟರ್ ಮಾಲೀಕರಿಂದ ಹಣ ಪಡೆದ ಆರೋಪಗಳಿದ್ದವು. ಐಜಿಪಿ ಜೂ.6ರಂದು ಹೊರಡಿಸಿದ್ದ ಅಮಾನತು ಆದೇಶವನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಜೂ.7ರಂದು ಅಂಗೀಕರಿಸಿದ್ದಾರೆ.