Cow dies after being electrocuted
ಶಿಡ್ಲಘಟ್ಟ: ತಾಲೂಕಿನ ಮಳ್ಳೂರು ಗ್ರಾಮದಲ್ಲಿ ಮಂಗಳವಾರ ವಿದ್ಯುತ್ ಟ್ರಾನ್ಸ್ಫಾರ್ಮರ್ನ ಅರ್ಥಿಂಗ್ ವೈರ್ನಿಂದ ವಿದ್ಯುತ್ ತಗುಲಿ ಹಸುವೊಂದು ಮೃತಪಟ್ಟಿದೆ.
ಮಳ್ಳೂರು ಗ್ರಾಮದ ಗೌರಮ್ಮ ಅವರು ಹಸುವನ್ನು ರಸ್ತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಸಮೀಪದಲ್ಲೆ ಬಿದ್ದಿದ್ದ ಅರ್ಥಿಂಗ್ ತಂತಿ ಸ್ಪರ್ಶವಾಗಿ ಹಸು ಸ್ಥಳದಲ್ಲೇ ಮೃತಪಟ್ಟಿದೆ. ಗೌರಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿದ್ಯುತ್ ಟ್ರಾನ್ಸ್ಫಾರ್ಮರ್ನ ಸಮೀಪದ ಅರ್ಥಿಂಗ್ ತಂತಿಗಳು ನೆಲದಲ್ಲಿ ಬಿದ್ದಿರುವ ಬಗ್ಗೆ ಹಲವಾರು ಬಾರಿ ಬೆಸ್ಕಾಂ ಸಿಬ್ಬಂದಿಗೆ ತಿಳಿಸಿದ್ದರೂ ಅವರು ಸರಿಪಡಿಸದೇ ರ್ನಿಲಕ್ಷ್ಯ ವಹಿಸಿದ್ದರಿಂದ ಬಡ ಕುಟುಂಬಕ್ಕೆ ಆಸರೆಯಾಗಿದ್ದ ಹಸು ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಸ್ಥಳಿಯರು ಬೆಸ್ಕಾಂ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.