ಟೇಕಲ್ನ Brahmarathotsava ಶ್ರೀ ಲಕ್ಷಿ ವರದರಾಜಸ್ವಾಮಿ ಬ್ರಹ್ಮರಥೋತ್ಸವಕ್ಕೆ ಶಾಸಕ ಕೆ.ವೈ ನಂಜೇಗೌಡ ಹಾಗೂ ತಹಸೀಲ್ದಾರ್ ಎಂ.ವಿ ರೂಪಾ ಚಾಲನೆ ನೀಡಿದರು.
ಟೇಕಲ್: ಟೇಕಲ್ನ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಶ್ರೀ ಲಕ್ಷಿ ವರದರಾಜಸ್ವಾಮಿ Brahmarathotsava ಬ್ರಹ್ಮರಥೋತ್ಸವವು ಶುಕ್ರವಾರ ಅದ್ದೂರಿಯಾಗಿ ನೆರವೇರಿತು.
ಮಾಲೂರು ತಾಲೂಕು ತಹಸೀಲ್ದಾರ್ ಎಂ.ವಿ.ರೂಪಾ ಹಾಗೂ ಶಾಸಕ ಕೆ.ವೈ. ನಂಜೇಗೌಡರು ರಥೋತ್ಸವಕ್ಕೆ ಚಾಲನೆ ನೀಡಿದರು.
ಉತ್ಸವ ಮೂರ್ತಿಗಳಿಗೆ ಅಭಿಷೇಕ, ಆಸ್ಥಾನ ಸೇವೆ, ತೋಮಲ ಸೇವೆ, ವೇದಪಾರಾಯಣ, ಚಾಮರ ಸೇವೆ ನೆರವೇರಿಸಲಾಯಿತು. ರಥಕ್ಕೆ ಭಕ್ತರು ಬಾಳೆಹಣ್ಣು, ದವನ ಎಸೆದು ಹರಕೆ ತೀರಿಸಿದರು.
ಪುರೋಹಿತ ವರ್ಗದವರಾದ ಟಿ.ಎಸ್. ಸಂಪತ್ ಕುಮಾರ್, ಶ್ರೀಕಾಂತ್, ವಾಸು, ಅಂಬರೀಶ್, ಉಮೇಶ್, ಶಿವ ಸುಬ್ರಮಣ್ಯ ಶರ್ಮ ಅವರು ವೇದೂಷ ಹಾಗೂ ಮಂತ್ರಪಠಣೆ ನಡೆಸಿಕೊಟ್ಟರು.
ಜಿಪಂ ಮಾಜಿ ಅಧ್ಯೆ ರತ್ನಮ್ಮ ಕೆ.ವೈ.ನಂಜೇಗೌಡ, ಮುಖಂಡರಾದ ಕೆ.ಎಸ್. ವೆಂಕಟೇಶ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯ ಎಸ್. ಜಿ. ರಾಮಮೂರ್ತಿ, ಸತೀಶ್ ಬಾಬು, ಗ್ರಾಪಂ ಮಾಜಿ ಅಧ್ಯ ಎಸ್ ಸಂದೀಪ್, ಮಂಜುನಾಥ್, ಖಾದರ್, ತಾಪಂ ಮಾಜಿ ಸದಸ್ಯೆ ನಿರ್ಮಲಾ ಅಂಜಿನಪ್ಪ, ಗ್ರಾಮಸ್ಥರಾದ ರಾಮ್ಶೆಟ್ಟಿ, ಭೀಮಣ್ಣ, ನಂಜುಂಡ ಶೆಟ್ಟಿ, ಪಟೇಲ್ ರಮೇಶ್, ಪ್ರಭಾಕರ್, ವೆಂಕಟಸ್ವಾಮಿ, ಟೇಕಲ್ ಅಂಜಿನಪ್ಪ, ವಜೀರ್, ರೇಣು, ಶಾಮಣ್ಣ ಇದ್ದರು.