darshan 
ರಾಜ್ಯ

ದರ್ಶನ್ ಬ್ಯಾರಕ್​​​ನಲ್ಲಿ ಟಿವಿ ಅಳವಡಿಕೆ ಮಾಡಲು ಕೋರ್ಟ್ ಸೂಚನೆ! darshan

ಪ್ರಮುಖ ಮುಖ್ಯಾಂಶಗಳು

  • ದರ್ಶನ್​​ ಡಿಮ್ಯಾಂಡ್​ಗೆ ಅಸ್ತು ಎಂದ ಜಡ್ಜ್ ..
ಬೆಂಗಳೂರು:

ಟಿವಿ ಹಾಕಿಸಿ ಕೊಡಿ ಎಂದು ನಟ ದರ್ಶನ್ ಸೇರಿ ಎಲ್ಲಾ ಆರೋಪಿಗಳು ಟಿವಿಗಾಗಿ ಮನವಿ ಮಾಡಿದ್ದರು. ಇದೀಗ ಇಂದು ಜಡ್ಜ್ ಈ ಸಂಬಂಧ ಸೂಚನೆ ಕೊಟ್ಟಿದ್ದಾರೆ.
ದರ್ಶನ್ ಬ್ಯಾರಕ್​​​ನಲ್ಲಿ ಟಿವಿ ಅಳವಡಿಕೆ ಮಾಡಲು ಕೋರ್ಟ್ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದೆ. ಟಿವಿ ಅಳವಡಿಕೆ ಮಾಡುವ ಸ್ಥಳದಲ್ಲಿ ಸಿಸಿಟಿವಿ ಅಳವಡಿಸುವಂತೆ ಆದೇಶ ನೀಡಲಾಗಿದೆ.
64ನೇ ಸಿಟಿ ಸಿವಿಲ್ ಕೋರ್ಟ್ ಸಾಕ್ಷಿ 7,8 ಹಾಗೂ ರೇಣುಕಾಸ್ವಾಮಿ ತಂದೆ ಮತ್ತು ತಾಯಿಗೆ ಸಮನ್ಸ್ ನೀಡಲು ನಿರ್ಧಾರ ಮಾಡಲಾಗಿತ್ತು. ಪ್ರಾಸಿಕ್ಯೂಷನ್ ನಿರ್ಧಾರಕ್ಕೆ ದರ್ಶನ್ ಪರ ವಕೀಲ ಸುನಿಲ್ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂಬಂಧ ಇಂದು ಕೋರ್ಟ್ ಡಿ.17 ರಂದು ಹಾಜರಾಗುವಂತೆ ಸಾಕ್ಷಿಗಳಿಗೆ ಸಮನ್ಸ್ ಜಾರಿ ಮಾಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಾಸಿಕ್ಯೂಷನ್ ಸಲ್ಲಿಸಿದ ಅರ್ಜಿ ಪುರಸ್ಕರಿಸಿದ 57 ನೇ ಸಿಸಿಹೆಚ್ ಕೋರ್ಟ್‌ CW -7, CW-8, ಗೆ ಸಮನ್ಸ್ ಜಾರಿ ಮಾಡಿ ಆದೇಶ ನೀಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗಳ ವಿಚಾರಣೆಗೆ ದಿನಾಂಕ ನಿಗದಿ ಆಗಿದ್ದು ಡಿಸೆಂಬರ್ 17ರಿಂದ ಸಾಕ್ಷ್ಯ ವಿಚಾರಣೆ ಶುರು ಮಾಡಲು ಕೋರ್ಟ್ ನಿರ್ಧರಿಸಿದೆ. ಡಿಸೆಂಬರ್ 17ರಂದು ವಿಚಾರಣೆ ಶುರು ಆಗಲಿದ್ದು ರೇಣುಕಾಸ್ವಾಮಿ ತಂದೆ, ತಾಯಿಗೂ ಸಮನ್ಸ್ ನೀಡಲಾಗಿದೆ. ಈ ಪ್ರಕರಣದಲ್ಲಿ 260ಕ್ಕೂ ಅಧಿಕ ಸಾಕ್ಷಿಗಳು ಇವೆ. ಎಲ್ಲ ಸಾಕ್ಷಿಗಳ ವಿಚಾರಣೆ ಬಳಿಕ ಕೋರ್ಟ್ ಅಂತಿಮ ತೀರ್ಪು ನೀಡಲಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ ಮುಂತಾದ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ.