ಅಪಘಾತ ಅಪರಾಧಿಗೆ ಶಿಕ್ಷೆ 
ರಾಜ್ಯ

ಅಪಘಾತಕ್ಕೆ ಕಾರಣವಾದ ಅಪರಾಧಿಗೆ ಶಿಕ್ಷೆ

ಪ್ರಮುಖ ಮುಖ್ಯಾಂಶಗಳು

  • ಅಪಘಾತಕ್ಕೆ ಕಾರಣವಾಗಿದ್ದ ಅಪರಾಧಿಗೆ ಶಿಕ್ಷೆ
  • ಬೆಳಗಾವಿ ನಗರದಲ್ಲಿ ಕಾರು ಹಾಯ್ದು ಮೃತಳಾಗಿದ್ದ ಪ್ರಕರಣ
  • ನ್ಯಾಯಾಲಯದಿಂದ ಇಂದು ತೀರ್ಪು

ಅಪಘಾತಕ್ಕೆ ಕಾರಣವಾದ ಅಪರಾಧಿಗೆ ಶಿಕ್ಷೆ ಪ್ರಕಟ
ಬೆಳಗಾವಿ : ಕಾರ್ ಡಿಕ್ಕಿಯಿಂದ ಬಾಲಕಿಯೊಬ್ಬಳ ಸಾವಿಗೆ ಕಾರಣವಾದ ಅಪರಾಧಿ ಡಾ.ಮೊಹ್ಮದ್ ಸಲ್ಮಾನ್ ಸಲೀಂ ಪಟೇಲ ಎಂಬಾತನಿಗೆ ಸ್ಥಳೀಯ 2ನೇ ಜೆಎಂಎಫ್‌ಸಿ ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ಮತ್ತು 6 ಸಾವಿರ ರೂ.ದಂಡ ವಿಧಿಸಿ ಬುಧವಾರ ತೀರ್ಪು ಪ್ರಕಟಿಸಿದೆ.
ಶಿಕ್ಷೆಗೊಳಗಾದ ಅಪರಾಧಿಯು ೨೦೧೬ರಲ್ಲಿ ನಗರದ ಕೆಪಿಟಿಸಿಎಲ್ ಹಾಲ್ ಕಡೆಯಿಂದ ಆರ್.ಎನ್ ಶೆಟ್ಟಿ ಕಾಲೇಜು ಕಡೆಗೆ ಕಾರಿನಲ್ಲಿ ಬರುತ್ತಿದ್ದಾಗ, ಬೈಕ್ ರಸ್ತೆ ಬದಿಯಲ್ಲಿ ನಿಂತಿದ್ದ ಸೃಷ್ಠಿ ನಾವಲಗಿ(11) ಇವಳಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಮೃತಪಟ್ಟಿದ್ದಾಳೆ. ಉತ್ತರ ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶ ಗುರುಪ್ರಸಾದ ಸಿ ಶಿಕ್ಷೆ ತೀರ್ಪು ನೀಡಿದೆ. ಸರ್ಕಾರದ ಪರವಾಗಿ ಮಹಾಂತೇಶ ಚಳಕೊಪ್ಪ ವಾದ ಮಂಡಿಸಿದ್ದಾರೆ.