Couple dies in road accident
ಮುಳಬಾಗಿಲು: ರಾಷ್ಟ್ರೀಯ ಹೆದ್ದಾರಿ 75ರ ಕೋಲಾರ ಮುಳಬಾಗಿಲು ರಸ್ತೆಯ ವಿ.ಗುಟ್ಟಹಳ್ಳಿ ಬಳಿ ಶನಿವಾರ ಸಂಜೆ ದ್ವಿಚಕ್ರ ವಾಹನ ಹಾಗೂ ಟ್ರಾ$್ಯಕ್ಟರ್ ನಡುವೆ ಅಪಘಾತ ಸಂಭವಿಸಿ ಬೈಕ್ನಲ್ಲಿದ್ದ ದಂಪತಿ ಹಾಗೂ ಬಾಲಕಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ತಾಲೂಕಿನ ಎನ್.ಚಮಕಲಹಳ್ಳಿಯ ಅಬೂಕರ್ (37) ಪತ್ನಿ ಸಾಬೀರಾ (32) ಪುತ್ರಿ ಜೋಯಾ (16) ಮೃತರು. ಹೊಸಕೋಟೆ ತಾಲೂಕಿನ ಬಯಲು ನರಸಾಪುರದಿಂದ ಮುಳಬಾಗಿಲು ತಾಲೂಕಿನ ನಂಗಲಿ ಸಮೀಪದ ಚಮಕಲಹಳ್ಳಿಯ ಸಂಬಂಧಿಕರ ಮನೆಗೆ ಬರುತ್ತಿದ್ದಾಗ ಟನೆ ಸಂಭವಿಸಿದೆ. ಮುಳಬಾಗಿಲು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.