ಬಸವಕಲ್ಯಾಣದಲ್ಲಿ ಆಯೋಜಿಸಿದ್ದ ನ್ಯಾಷನಲ್​ ಆ್ಯಂಟಿ ಕರಪ್ಷನ್​ ಮತ್ತು ಆಪರೇಷನ್​ ಕಮಿಟಿ ಆಫ್​ಇಂಡಿಯಾದ ಸಮಾರಂಭದಲ್ಲಿ ಎ.ಎಸ್​.ಭದ್ರಶೆಟ್ಟಿ, ಅನಂತ ರಡ್ಡಿ, ಸಂತೋಷ ಬಿರಾದಾರ ಇತರರಿದ್ದರು. 
ರಾಜ್ಯ

ಎನ್​ಎಸಿಒ ಕಮಿಟಿಯಿಂದ ಭ್ರಷ್ಟಾಚಾರ ನಿಮೂರ್ಲನೆ

ಬಸವಕಲ್ಯಾಣ: ಸಾರ್ವಜನಿಕ ಸಮಸ್ಯೆಗಳ ಪರಿಹಾರ ಹಾಗೂ ಭ್ರಷ್ಟಾಚಾರ ನಿಮೂರ್ಲನೆ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ನ್ಯಾಷನಲ್​ ಆ್ಯಂಟಿ ಕರಪ್ಷನ್​ ಮತ್ತು ಆಪರೇಷನ್​ ಕಮಿಟಿ ಆಫ್​ ಇಂಡಿಯಾದ ತಾಲೂಕು ಮಟ್ಟದ ಸಮಿತಿ ರಚಿಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಕಮಿಟಿಯ ದಣ ಭಾರತದ ಅಧ್ಯಕ್ಷ ಎ.ಎಸ್​.ಭದ್ರಶೆಟ್ಟಿ ಹೇಳಿದರು.
ನಗರದ ಕಮಿಟಿ ಕಚೇರಿಯಲ್ಲಿ ಇತ್ತೀಚೆಗೆ ತಾಲೂಕು ಟಕ ರಚನೆ ಹಾಗೂ ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಮಿಟಿ ಸದಸ್ಯರು ಕಾಳಜಿಯಿಂದ ಜನಪರ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಬೀದರ್​ ಜಿಲ್ಲಾಧ್ಯಕ್ಷ ಅನಂತ ರಡ್ಡಿ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿ, ಸಂಟನೆಯ ಬೆಳವಣಿಗೆಗೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಜನಸೇವೆಗೆ ಮುಂದಾಗಬೇಕು ಎಂದು ಹೇಳಿದರು.
ತಾಲೂಕು ಅಧ್ಯಕ್ಷ ಸಂತೋಷ ಬಿರಾದಾರ ಮಾತನಾಡಿ, ಸಾರ್ವಜನಿಕರಿಂದ ಬರುವ ದೂರುಗಳನ್ನು ಪರಿಶೀಲಿಸಿ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತಂದು ನ್ಯಾಯ ದೊರಕಿಸಲು ಸಂಟನೆ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ಪದಾಧಿಕಾರಿಗಳು: ಸಂತೋಷ ಬಿರಾದಾರ (ಅಧ್ಯಕ್ಷ). ವೀರೇಶ ಹೊದಲೂರೆ(ಉಪಾಧ್ಯಕ್ಷ), ಪ್ರದಿಪ ಕುದಮುಡ (ಪ್ರಧಾನ ಕಾರ್ಯದರ್ಶಿ), ಈಶ್ವರ ವಾಗಮಾರೆ (ಕಾನೂನು ಸಲಹೆಗಾರ), ಪ್ರದಿಪ ವಿಸಾಜಿ (ಮಾಧ್ಯಮ ಸಲಹೆಗಾರ), ಮಲ್ಲಿಕಾರ್ಜುನ ಹಾರಕುಡ, ಆನಂದ ಬಾಳಿ, ಪ್ರಕಾಶ ದಂಡೆ, ಸಾಗರ ಬುಕ್ಕಿಗಾರ ಅವರನ್ನು ಸದಸ್ಯರಾಗಿ ನೇಮಕ ಮಾಡಲಾಯಿತು.