Corruption by the Vatadahosahalli Powerman?
ವಾಟದಹೊಸಹಳ್ಳಿ ವಿದ್ಯುತ್ ಸರಬರಾಜು ಕೇಂದ್ರದ ಪವರ್ಮನ್ ಯಲ್ಲಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ.
ರೈತರಿಂದ ಲಂಚಕ್ಕೆ ಬೇಡಿಕೆ, ಅಕ್ರಮವಾಗಿ ವಿದ್ಯುತ್ ಸಂಪರ್ಕ ಕೊಡುವುದು ಹಾಗೂ ಕರ್ತವ್ಯ ಲೋಪದ ಗಂಭೀರ ಆರೋಪಗಳು ಕೇಳಿಬಂದಿವೆ. ಇಲಾಖೆಯ ಹಿರಿಯ ಅಧಿಕಾರಿಗಳು ತಣ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಪವರ್ಮನ್ ಯಲ್ಲಪ್ಪ ವಿರುದ್ಧದ ಲಂಚದ ಆರೋಪ ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲಿಸಲು ಜೆಇ ಅವರಿಗೆ ಸೂಚಿಸಲಾಗಿದೆ. ದಾಖಲೆ ಹಾಗೂ ಸಾ್ಯಾಧಾರ ಸಂಗ್ರಹಿಸಿದ ನಂತರ ಶಿಸ್ತುಕ್ರಮ ಕೈಗೊಳ್ಳಲಾಗುವುದು.
— ವಿಶ್ವಾಸ್, ಎಇಇ, ಗುಡಿಬಂಡೆ
ಅಕ್ರಮ ಸಂಪರ್ಕ: ವಿದ್ಯುತ್ ಸಂಬಂಧಿತ ಕೆಲಸಗಳಿಗೆ ರೈತರು ಸಂಪರ್ಕಿಸಿದಾಗ ಯಲ್ಲಪ್ಪ ಹಣಕ್ಕೆ ಬೇಡಿಕೆ ಇಡುತ್ತಿದ್ದು, ಹಣ ನೀಡದಿದ್ದರೆ ಕೆಲಸ ವಿಳಂಬಗೊಳಿಸಿ, ಪ್ರಶ್ನಿಸಿದ ರೈತರನ್ನು ಅವಾಚ್ಯವಾಗಿ ನಿಂದಿಸಲಾಗುತ್ತಿದೆ.
ಪವರ್ಮನ್ ಕಂಬ ಏರಿ ದುರಸ್ತಿ ಮಾಡುವ ಬದಲು, ನಿಯಮಬಾಹಿರವಾಗಿ ತರಬೇತಿ ಇಲ್ಲದ ಖಾಸಗಿ ವ್ಯಕ್ತಿಯನ್ನು ಬಳಸಿ ಅಪಾಯಕಾರಿ ಕೆಲಸ ಮಾಡಿಸುತ್ತಿದ್ದಾರೆ. ಚನ್ನರಾಯನಹಳ್ಳಿ ಎಫ್&8 ಟಿಸಿ ವ್ಯಾಪ್ತಿಯಲ್ಲಿ 7 ಬೋರ್ವೆಲ್ಗಳಿದ್ದರೂ, ಹಣ ಪಡೆದು ಮತ್ತೊಂದು ಬೋರ್ವೆಲ್ಗೆ ನಿಯಮಬಾಹಿರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ಲಂಚದ ಆರೋಪಕ್ಕೆ ಸಂಬಂಧಿಸಿದ ಅರ್ಜಿ ಮತ್ತು ದಾಖಲೆಗಳನ್ನು ಮೇಲಧಿಕಾರಿಗಳ (ಎಇ) ಗಮನಕ್ಕೆ ತರಲಾಗಿದೆ. ಮುಂದಿನ 3&4 ದಿನಗಳಲ್ಲಿ ಇಲಾಖೆಯ ಕ್ರಮದ ಕುರಿತು ಸ್ಪಷ್ಟತೆ ಸಿಗಲಿದೆ.
— ರವಣಪ್ಪ, ಜೆಇ, ವಾಟದಹೊಸಹಳ್ಳಿ
ಬಡವರಿಗೆ ಭಾಗ್ಯಜ್ಯೋತಿ ಯೋಜನೆಯಡಿ ಹೊಸ ಸಂಪರ್ಕ ನೀಡಲು <15,000 ದಿಂದ <20,000 ವರೆಗೆ ಲಂಚ ಪಡೆದು, ಹೊಸ ಮೀಟರ್ ಬದಲಿಗೆ ಹಳೆಯ ಮೀಟರ್ಗಳನ್ನು ಅಳವಡಿಸಲಾಗುತ್ತಿದೆ ಎಂದು ರೈತರು, ಗ್ರಾಹಕರು ದೂರಿದ್ದಾರೆ.
ಇಲಾಖೆಯು ರೈತರ ದೂರುಗಳು ಹಾಗೂ ಸಾ್ಯಾಧಾರಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರಾದ ಮಂಜುನಾಥ್, ಸೋಮು, ಕದಿರಪ್ಪ, ಲಕ್ಷಿ$್ಮನಾರಾಯಣ, ಸಕ್ಕರೆ ನಾಯಕ್ ಒತ್ತಾಯಿಸಿದ್ದಾರೆ.