ಸುರಪುರ ತಹಸಿಲ್​ನಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಸೋಮವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಅಧಿಕಾರಿಗಳಾದ ಚನ್ನಬಸಪ್ಪ, ಸಿದ್ದಣ್ಣ ಅಣಬಿ ಇತರರಿದ್ದರು. 
ರಾಜ್ಯ

ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ನಿಗಮ ಬದ್ಧ

ಪ್ರಮುಖ ಮುಖ್ಯಾಂಶಗಳು

  • ಅಧ್ಯೆಕ್ಷ ಪಲ್ಲವಿ ಜಿ. ಹೇಳಿಕೆ
  • ಸುರಪುರದಲ್ಲಿ ಕುಂದುಕೊರತೆ ಆಲಿಕೆ, ಪ್ರಗತಿ ಪರಿಶೀಲನಾ ಸಭೆ
ಸುರಪುರ: ಅಲೆಮಾರಿ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ ಬದ್ಧವಾಗಿದ್ದು, ಸರ್ಕಾರದ ವಿವಿಧ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ ಎಂದು ನಿಗಮದ ಅಧ್ಯೆ ಪಲ್ಲವಿ ಜಿ. ಹೇಳಿದರು.
ತಹಸೀಲ್ದಾರ್​ ಕಚೇರಿಯಲ್ಲಿ ಸೋಮವಾರ ಕರೆದಿದ್ದ ಅಲೆಮಾರಿ ಸಮುದಾಯಗಳ ಕುಂದುಕೊರತೆ ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಲೆಮಾರಿಗಳಿಗೆ ಶಾಶ್ವತ ನೆಲೆ ಕಲ್ಪಿಸುವುದು ನಿಗಮದ ಮೊದಲ ಆದ್ಯತೆಯಾಗಿದೆ. ನಿವೇಶನ ಮತ್ತು ವಸತಿರಹಿತ ಅಲೆಮಾರಿಗಳಿಗೆ ನಿವೇಶನ ಒದಗಿಸಲಾಗುತ್ತಿದೆ ಎಂದರು.
ನಿಯಮಾವಳಿಗಳ ಪ್ರಕಾರ ಗ್ರಾಮೀಣ ಮತ್ತು ನಗರ ಭಾಗದಲ್ಲಿ ಅಲೆಮಾರಿಗಳಿಗೆ ನಿವೇಶನ ನೀಡುವ ಅವಕಾಶವಿದೆ. ಭೂಮಿ ಲಭ್ಯವಿಲ್ಲದಿದ್ದರೆ ಖಾಸಗಿ ವ್ಯಕ್ತಿಗಳಿಂದ ನಿಗಮ ಖರೀದಿಸಿ ಅಲೆಮಾರಿಗಳಿಗೆ ನಿವೇಶನ ಹಂಚಿಕೆ ಮಾಡುತ್ತದೆ. ಮನೆ ನಿರ್ಮಾಣಕ್ಕಾಗಿ ತಲಾ ಎರಡು ಲ ರೂ. ನೆರವು ನೀಡಲಿದೆ. ಅಲೆಮಾರಿ ಸಮುದಾಯದ ಮಕ್ಕಳ ಶಿಣಕ್ಕೆ ಮುರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಈ ಹಿಂದೆ ಇದ್ದ ಮೀಸಲಾತಿ ಹೆಚ್ಚಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದರು.
ಅಲೆಮಾರಿಗಳ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ವಸತಿ ಸೌಕರ್ಯ ಮತ್ತು ನಿಗಮದ ವಿವಿಧ ಯೋಜನೆಗಳ ಅನುಷ್ಠಾನ ಕುರಿತು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಚನ್ನಬಸಪ್ಪ ಮಾಹಿತಿ ನೀಡಿದರು.
ಜಿಲ್ಲಾ ಪರಿಶಿಷ್ಟ ಪಂಗಡ ಇಲಾಖೆ ಉಪ ನಿದೇರ್ಶಕ ಸಿದ್ದಣ್ಣ ಅಣಬಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ತಿಪ್ಪಣ್ಣ, ಗ್ರೇಡ್​&2 ತಹಸೀಲ್ದಾರ್​ ಮಲ್ಲಯ್ಯ ದಂಡು, ತಾಪಂ ಇಒ ಬಸವರಾಜ ಸಜ್ಜನ್​, ಸಮಾಜ ಕಲ್ಯಾಣ ಎಡಿ ಮಹ್ಮದ್​ ಸಲೀಂ, ಸಿಡಿಪಿಒ ಲಾಲ್​ಸಾಬ್​ ಪೀರಾಪುರ, ನಗರಸಭೆ ಪೌರಾಯುಕ್ತ ಬಸವರಾಜ ಟಣಕೇದಾರ ಇತರರಿದ್ದರು.
ರು.4 ಲಕ್ಷದವರೆಗೆ ಸಹಾಯಧನ
50 ಸಾವಿರ ಸಹಾಯಧನ ಹಾಗೂ 50 ಸಾವಿರ ಸಾಲ ಒಳಗೊಂಡು ಒಂದು ಲಕ್ಷ, ಸ್ವಯಂ ಉದ್ಯೋಗ ಯೋಜನೆಯಡಿ 2 ಲಕ್ಷ ರೂ. ವರೆಗೆ ನೆರವು, ಹಳದಿ ಬೋರ್ಡ್​ ವಾಹನ ಖರೀದಿಗೆ 4 ಲಕ್ಷ ರೂ.ವರೆಗೆ ಸಹಾಯಧನ ನೀಡಲಾಗುವುದು. ಪ್ರಸ್ತುತ ವಿವಿಧ ಯೋಜನೆಗಳಡಿ ಜಿಲ್ಲೆಯಲ್ಲಿ 1854 ಅರ್ಜಿ ಸ್ವೀಕೃತವಾಗಿವೆ. ಸುರಪುರ ತಾಲೂಕಿನ ಅಲೆಮಾರಿ ಸಮುದಾಯಗಳಿಂದ 460 ಅರ್ಜಿ ಬಂದಿವೆ. ಕೇಂದ್ರ ಕಚೇರಿಯಿಂದ ಪ್ರಸಕ್ತ ವರ್ಷ ಎಸ್​ಸಿ ಅಲೆಮಾರಿಗಳಿಗೆ 225 ಮತ್ತು ಎಸ್​ಟಿ ಅಲೆಮಾರಿಗಳಿಗೆ 25 ಮನೆ ನೀಡುವ ಗುರಿ ನಿಗದಿಯಾಗಿದೆ ಎಂದು ಪಲ್ಲವಿ ತಿಳಿಸಿದರು.
ಸುಡುಗಾಡ ಸಿದ್ಧರ ಕಾಲನಿಗೆ ಭೇಟಿ
ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯೆ ಪಲ್ಲವಿ ಜಿ. ಸೋಮವಾರ ನಗರಸಭೆ ವ್ಯಾಪ್ತಿಯ ಸುಡುಗಾಡ ಸಿದ್ಧರ ಕಾಲನಿಗೆ ಭೇಟಿ ನೀಡಿ ನಿವಾಸಿಗಳ ಅಹವಾಲು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಂತರ ಮೇದಾಗಲ್ಲಿ ವಾರ್ಡ್​ಗೆ ತೆರಳಿ ಮಹಿಳೆಯರ ಸಮಸ್ಯೆ ಆಲಿಸಿದರು. ಶೌಚಗೃಹ ನಿರ್ಮಿಸಿಕೊಡಲು ಹೆಣ್ಮಕ್ಕಳು ಬೇಡಿಕೆ ಇಟ್ಟರು. ಸ್ಪಂದಿಸಿದ ಪಲ್ಲವಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.