ಕಾಪರ್ ಮಕ್ಕಳ ಸಂರಕ್ಷಣೆ ಕೇಂದ್ರ 
ರಾಜ್ಯ

ಕಾಪರ್ ಸಂಸ್ಥೆಯ 10ನೇ ವಾರ್ಷಿಕೋತ್ಸವ ಸಂಭ್ರಮ

ಎನ್.ಎಲ್. ಶಿವಮಾದು

ಪ್ರಮುಖ ಮುಖ್ಯಾಂಶಗಳು

  • ಮಕ್ಕಳ ಬೆಳವಣಿಗೆ, ಪುನರ್ವಸತಿ ಮತ್ತು ಸಮಗ್ರ ಆರೋಗ್ಯ ರಕ್ಷಣೆಯಲ್ಲಿ ಒಂದು ದಶಕದ ಸೇವೆಯನ್ನು ಸ್ಮರಿಸಿಕೊಳ್ಳುವ ಸಂದರ್ಭ
  • ದೇಶದ ಪ್ರಮುಖ ಚಿಕಿತ್ಸಕರು, ವೈದ್ಯರು ಮತ್ತು ಮಕ್ಕಳ ಬೆಳವಣಿಗೆ ತಜ್ಞರನ್ನು ಒಂದುಗೂಡಿಸಿದ ಒಂದು ವೃತ್ತಿಪರ ಜ್ಞಾನದ ವೇದಿಕೆ
  • 2016ರಲ್ಲಿ ಸ್ಥಾಪಿತವಾದ ಕಾಪರ್ ಅಭಿವೃದ್ಧಿ, ನರವೈಜ್ಞಾನಿಕ ಮತ್ತು ಪುನರ್ವಸತಿ ಸವಾಲುಗಳನ್ನು ಎದುರಿಸುತ್ತಿರುವ ಮಕ್ಕಳಿಗೆ ನೈತಿಕ, ಪ್ರಮಾಣ-ಆಧಾರಿತ ಮತ್ತು ಬಹುಶಿಸ್ತೀಯ ಚಿಕಿತ್ಸಾ ಸೇವೆ
ಬೆಂಗಳೂರು: ಕಾಪರ್ ಮಕ್ಕಳ ಸಂರಕ್ಷಣೆ ಕೇಂದ್ರವು ‘ಹತ್ತು ವರ್ಷಗಳ ಅರ್ಪಣೆ’ ಎಂಬ ಪರಿಕಲ್ಪನೆಯಲ್ಲಿ ತನ್ನ ಹತ್ತನೇ ವಾರ್ಷಿಕೋತ್ಸವವನ್ನು ಆಚರಿಸಿತು.
ಮಕ್ಕಳ ಬೆಳವಣಿಗೆ, ಪುನರ್ವಸತಿ ಮತ್ತು ಸಮಗ್ರ ಆರೋಗ್ಯ ರಕ್ಷಣೆಯಲ್ಲಿ ಒಂದು ದಶಕದ ಸೇವೆಯನ್ನು ಸ್ಮರಿಸಿಕೊಳ್ಳುವ ಸಂದರ್ಭ ಇದಾಗಿತ್ತು. ದೇಶದ ಪ್ರಮುಖ ಚಿಕಿತ್ಸಕರು, ವೈದ್ಯರು ಮತ್ತು ಮಕ್ಕಳ ಬೆಳವಣಿಗೆ ತಜ್ಞರನ್ನು ಒಂದುಗೂಡಿಸಿದ ಒಂದು ವೃತ್ತಿಪರ ಜ್ಞಾನದ ವೇದಿಕೆಯಾಗಿತ್ತು.
2016ರಲ್ಲಿ ಸ್ಥಾಪಿತವಾದ ಕಾಪರ್ ಅಭಿವೃದ್ಧಿ, ನರವೈಜ್ಞಾನಿಕ ಮತ್ತು ಪುನರ್ವಸತಿ ಸವಾಲುಗಳನ್ನು ಎದುರಿಸುತ್ತಿರುವ ಮಕ್ಕಳಿಗೆ ನೈತಿಕ, ಪ್ರಮಾಣ-ಆಧಾರಿತ ಮತ್ತು ಬಹುಶಿಸ್ತೀಯ ಚಿಕಿತ್ಸಾ ಸೇವೆಗಳನ್ನು ಒದಗಿಸುವ ದೃಷ್ಟಿಯೊಂದಿಗೆ ಕಾರ್ಯಾರಂಭಿಸಿತು. ಕಳೆದ ಹತ್ತು ವರ್ಷಗಳಲ್ಲಿ, ಕಾಪರ್ ಎರಡು ಪೂರ್ಣ ಪ್ರಮಾಣದ ಕೇಂದ್ರಗಳನ್ನು ಆರಂಭಿಸಿದೆ. 100ಕ್ಕೂ ಹೆಚ್ಚು ತರಬೇತಿ ಪಡೆದ ವೃತ್ತಿಪರರ ತಂಡದ ಬೆಂಬಲ ಹೊಂದಿದೆ. ಇದು 1,000ಕ್ಕೂ ಅಧಿಕ ಮಕ್ಕಳ ಜೀವನದ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದೆ.
ವಾರ್ಷಿಕೋತ್ಸವದ ಸಮಾರಂಭವು ಚಿಕಿತ್ಸಕರು ಮತ್ತು ಸಂಬಂಧಿತ ಆರೋಗ್ಯ ವೃತ್ತಿಪರರ ಪ್ಯಾನೆಲ್ ಚರ್ಚೆಗಳು ಮತ್ತು ಶೈಕ್ಷಣಿಕ ವಿಚಾರ ಮಂಥನಗಳನ್ನು ಒಳಗೊಂಡಿತ್ತು.
ಇಂಡಿಯನ್ ಅಸೋಸಿಯೇಷನ್ ಆ್ ಫಿಸಿಯೋಥೆರಪಿಸ್ಟ್ ಮಹಿಳಾ ಕೋಶದ ಅಧ್ಯಕ್ಷೆ ಡಾ. ರುಚಿ ವರ್ಷ (ಪಿಟಿ), ಕಾಂಡೀಲ್ ಟ್ರಸ್ಟ್‌ನ ಸ್ಥಾಪಕಿ ಡಾ. ಪ್ರತಿಭಾ ಕಾರಂತ್, ರಾಷ್ಟ್ರೀಯ ಉಪಾಧ್ಯಕ್ಷ ಡಾ. ಎ. ಸುರೇಶ್ ಬಾಬು ರೆಡ್ಡಿ ಉಪಸ್ಥಿತರಿದ್ದರು.