ಶಾಲೆ ಅಭಿವೃದ್ಧಿಗೆ ಹಳೇ ವಿದ್ಯಾರ್ಥಿಗಳ ಸಹಕಾರ ಮುಖ್ಯ school development 
ರಾಜ್ಯ

ಶಾಲೆ ಅಭಿವೃದ್ಧಿಗೆ ಹಳೇ ವಿದ್ಯಾರ್ಥಿಗಳ ಸಹಕಾರ ಮುಖ್ಯ school development

ಮುಳಬಾಗಿಲು: ವ್ಯಕ್ತಿ ಸಮಾಜಕ್ಕೆ ಆದರ್ಶವಾಗಿರಬೇಕು. ತಾವು ಓದಿದ ಹಳೇ ಶಾಲೆ ಮರೆಯದೆ ಅಭಿವೃದ್ಧಿಗೆ ಮುಂದಾಗಿರುವುದು ಸ್ವಾಗತಾರ್ಹ. ಕನ್ನಡ ಶಾಲೆ ಉಳಿಸಿಕೊಳ್ಳಲು ಹಳೆಯ ವಿದ್ಯಾರ್ಥಿಗಳ ಪಾತ್ರ ಅಪಾರವಾಗಿರುತ್ತದೆ ಎಂದು ಕ್ಷೇತ್ರ ಸಂಪನ್ಮೂಲ ಅಧಿಕಾರಿ ಸುಬ್ರಹ್ಮಣ್ಯರೆಡ್ಡಿ ಹೇಳಿದರು.school development
ತಾಲೂಕಿನ ಆಚಂಪಲ್ಲಿ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳು 30 ಸಾವಿರ ರೂ.ವೆಚ್ಚದಲ್ಲಿ ಬ್ಯಾಂಡ್​ ಸೆಟ್​ ಮತ್ತು ಅಡುಗೆ ಮನೆ ದಿನಬಳಕೆಯ ವಸ್ತು, ಲೇಖನ ಸಾಮಾಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಆಚಂಪಲ್ಲಿ ಗ್ರಾಮದ ವಿದ್ಯಾರ್ಥಿಗಳು ಶಾಲೆಯ ಉಳಿವಿಗೆ ಪ್ರಯತ್ನ ಮಾಡುತ್ತಿರುವುದು ಮಾದರಿಯಾಗಿದೆ ಎಂದರು.
ಮುಖ್ಯಶಿಕ್ಷಕಿ ಮಂಜುಳಮ್ಮ ಮಾತನಾಡಿ, ಇಲ್ಲಿನ ಸರ್ಕಾರಿ ಶಾಲೆ ತುಂಬ ದೂರದಲ್ಲಿದೆ. ಬಸ್​ ಸೌಕರ್ಯವೂ ಇಲ್ಲ. ಶಾಲೆಗೆ ಸೇವೆ ಸಲ್ಲಿಸಲು ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳು ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ತಾಲೂಕು ಅಧ್ಯಕ್ಷ ಕೆ.ಎನ್​.ತಾಯಲೂರಪ್ಪ, ಎಸ್​ಡಿಎಂಸಿ ಅಧ್ಯೆ ಕವಿತಾ ಶ್ರೀನಿವಾಸ್​, ಎ.ವಿ.ಮಂಜುನಾಥ್​, ನವೀನ್​ ಕುಮಾರ್​, ದೇವರಾಜ್​, ಮುನಿರತ್ನಂ ಇತರರು ಇದ್ದರು.