ಹುಮನಾಬಾದ್ ತಾಲೂಕಿನ ಗಡವಂತಿ ಗ್ರಾಮದಲ್ಲಿ ಬುಧವಾರ ಶ್ರೀ ೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಹುಮನಾಬಾದ್ ವಲಯದ ಮದ್ಯವರ್ಜನ ಶಿಬಿರದ ಅನುಷ್ಠಾನ ಕುರಿತ ಸಭೆಯಲ್ಲಿ ಮುರಳೀಧರ್, ರಾಜೇಶ ಕೆ., ಬಾಬೂರಾವ ಪೂಜಾರಿ ಇತರರಿದ್ದರು.
- ಜಿಲ್ಲಾ ನಿರ್ದೇಶಕ ಮುರಳೀಧರ್ ಅಭಿಮತ
- ಗಡವಂತಿಯಲ್ಲಿ ಸಭೆ
ಹುಮನಾಬಾದ್: ಸಮಾಜದಲ್ಲಿ ವ್ಯಸನಮುಕ್ತ ಬದುಕು ನಿರ್ಮಿಸಲು ಮದ್ಯವರ್ಜನ ಶಿಬಿರ ಸಹಕಾರಿಯಾಗಲಿದೆ ಎಂದು ಯೋಜನೆಯ ಬೀದರ್ ಜಿಲ್ಲಾ ನಿರ್ದೇಶಕ ಮುರಳೀಧರ್ ಹೇಳಿದರು.
ತಾಲೂಕಿನ ಗಡವಂತಿ ಗ್ರಾಮದ ಶಿವಚಂದ್ರ ಸಭಾಭವನದಲ್ಲಿ ಬುಧವಾರ ಶ್ರೀಕ್ಷೆತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಹುಮನಾಬಾದ್ ವಲಯದ ಮದ್ಯವರ್ಜನ ಶಿಬಿರದ ಅನುಷ್ಠಾನ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಶಿಬಿರ ಯಶಸ್ಸಿಯಾಗಲು ಊರಿನ ಗಣ್ಯರು, ಒಕ್ಕೂಟದ ಸದಸ್ಯರು ಹಾಗೂ ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು.
ಕಲಬುರಗಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ರಾಜೇಶ ಕೆ. ಶಿಬಿರದ ರೂಪರೇಷೆ, ನಿಯಮಗಳು ಹಾಗೂ ಶಿಬಿರಾರ್ಥಿಗಳಿಗೆ ನೀಡಲಾಗುವ ಸೌಲಭ್ಯಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.
ಬಾಬೂರಾವ ಪೂಜಾರಿ ಅಧ್ಯತೆ ವಹಿಸಿದ್ದರು. ಮದ್ಯವರ್ಜನ ಶಿಬಿರ ಶ್ರೀದಲ್ಲೆ ಆಯೋಜಿಸಲು ಗಣ್ಯರು ಹಾಗೂ ವಿವಿಧ ಸಂಟನೆಗಳ ಪದಾಧಿಕಾರಿಗಳು ಒಪ್ಪಿಗೆ ಸೂಚಿಸಿದರು.
ತಾಲೂಕು ಯೋಜನಾಧಿಕಾರಿ ವೀರೇಶ, ವಲಯ ಮೇಲ್ವಿಚಾರಕ ಸಿದ್ದಲಿಂಗೇಶ, ಚೈತ್ರಾಂಜಲಿ ಮಾಣಿಕನಗರ, ರಾಜಕುಮಾರ ಧನಶೆಟ್ಟಿ, ಡಾ.ಶ್ರೀಮಂತರಾಯ ಶೀತಾಳಿ, ಪ್ರಭು, ಪಂಚಶೀಲ, ಗುಂಡಪ್ಪ, ಅನಿಲ ಪವಾಡಕಟ್ಟೆ, ಸರೋಜಿನಿ, ಮಹೇಶ ಕನಕಟ್ಟೆ, ವಿಷ್ಣು ದಾದಾ ಚಿಪ್ಟ, ರವೀಂದ್ರ ಆರ್.ಕೆ. ಇತರರಿದ್ದರು.