ಶಹಾಪುರದ ತಹಸಿಲ್ ಕಚೇರಿಯಲ್ಲಿ ಶನಿವಾರ ನಡೆದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ತಹಸೀಲ್ದಾರ್ ಸಿದ್ಧಾರೂಢ ಬನ್ನಿಕೊಪ್ಪ ಮಾತನಾಡಿದರು. ಇಆರ್‌ಒ ವೀರೇಶ್ ಬಿರಾದಾರ ಇತರರಿದ್ದರು.
- ತಹಸೀಲ್ದಾರ್ ಸಿದ್ಧಾರೂಢ ಬನ್ನಿಕೊಪ್ಪ ಹೇಳಿಕೆ
- ವಿವಿಧ ಪಕ್ಷಗಳ ಮುಖಂಡರ ಸಭೆ
ಶಹಾಪುರ: ಎಸ್‌ಐಆರ್ ಕೆಲಸ ಯಶಸ್ಸಿನಿಂದ ಪೂರ್ಣಗೊಳಿಸಲು ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಹಕಾರ ಮತ್ತು ಸಮನ್ವಯ ಅಗತ್ಯವಾಗಿದೆ ಎಂದು ತಹಸೀಲ್ದಾರ್ ಸಿದ್ಧಾರೂಢ ಬನ್ನಿಕೊಪ್ಪ ಹೇಳಿದರು.
ನಗರದ ತಹಸಿಲ್ ಕಚೇರಿಯಲ್ಲಿ ಶನಿವಾರ ನಡೆದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆಯ ಮಹತ್ವ ವಿವರಿಸಿ, ಸಾರ್ವಜನಿಕರಿಗೆ ಸರಿಯಾದ ಮಾಹಿತಿ ತಲುಪಿಸುವಲ್ಲಿ ರಾಜಕೀಯ ಮುಖಂಡರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ, ಅಽಕಾರಿಗಳು ಹಾಗೂ ರಾಜಕೀಯ ಮುಖಂಡರು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಿದರೆ ಎಸ್‌ಐಆರ್ ಕಾರ್ಯ ಸುಗಮವಾಗಿ ನಡೆಯಲಿದೆ ಎಂದು ಅವರು ತಿಳಿಸಿದರು.
ಈ ಸಭೆಯಲ್ಲಿ ಕೆಲ ರಾಜಕೀಯ ಮುಖಂಡರು ಬಿಎಲïಒ ಸರಿಯಾಗಿ ಸ್ಪಂದಿಸುತ್ತಿಲ್ಲ. ಮಾಹಿತಿ ಕೇಳಲು -ೆÇÃನ್ ಮಾಡಿದರೆ ರಿಸೀವ್ ಮಾಡುತ್ತಿಲ್ಲ. ಬಹುತೇಕ ಜನರು ಅವಿದ್ಯಾವಂತರಿರಿದ್ದು, ಅವರು ಆತಂಕದಲ್ಲಿz್ದÁರೆ. ಅಲ್ಲವೇ ಮನೆಯಲ್ಲಿ ಅಣ್ಣ-ತಮ್ಮಂದಿರು ಬೇರೆಯಾಗಿ ಬೇರೆ ಕಡೆ ವಾಸಿಸುತ್ತಾರೆ ಅವರಿಗೆ ಎನ್ಯುಮರೇಷನ್ -Áರಂಗಳು ಸಿಗೋದಿಲ್ಲ. ಅಂತವರು ಏನು ಮಾಡಬೇಕು ಎಂಬ ಪ್ರಶ್ನೆಗೆ ಪ್ರತಿ ಬಿ ಎಲïಒ ಅವರು ಅವರ ಏರಿಯಾದಲ್ಲಿ ಪ್ರತಿ ಮನೆಗೆ ಎನ್ಯುಮರೇಷನ್ -Áರಂಗಳನ್ನು ಕೊಟ್ಟು ಸಹಿ ತೆಗೆದುಕೊಂಡಿದ್ದಾರೆ. ಇದರಿಂದ ಯಾರು ವಂಚಿತರಾಗುವುದಿಲ್ಲ ಎಂದರು. ಈ ವೇಳೆ ಇಆರ್‌ಒ ವೀರೇಶ್ ಬಿರಾದಾರ ಸೇರಿ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.