Cooperation is essential for the success of the conference
ಗುಬ್ಬಿ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಅಭಿಮಾನೋತ್ಸವಕ್ಕೆ ಗುಬ್ಬಿ ತಾಲೂಕಿನ ಹತ್ತು ಸಾವಿರಕ್ಕೂ ಅಧಿಕ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿಗೆ ನೀರಾವರಿ ಹರಿಕಾರ ಯಡಿಯೂರಪ್ಪ ಅವರ ಸಾಧನೆಗೆ ಎಲ್ಲರೂ ಪಕ್ಷಾತಿತ ಜಾತ್ಯತಿತವಾಗಿ ಸೇರಿ ಸಮಾವೇಶ ಯಶಸ್ವಿಗೆ ಸಹಕರಿಸುವಂತೆ ಮನವಿ ಮಾಡಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಬಲರಾಮಯ್ಯ ಮಾತನಾಡಿ, ರಾಜಕೀಯದಲ್ಲಿ ಬಿಎಸ್ವೈ ಒಂದು ಶಕ್ತಿ ಎಂದರು.
ಬಿಜೆಪಿ ಮುಖಂಡ ಸಾಗರನಹಳ್ಳಿ ವಿಜಯ್ ಕುಮಾರ್ ಮಾತನಾಡಿದರು.
ಜಿಲ್ಲಾ ಮಾಜಿ ಉಪಾಧ್ಯಕ್ಷ ಎಚ್.ಟಿ.ಭೈರಪ್ಪ, ಜಿಲ್ಲಾ ಕಾರ್ಯದರ್ಶಿ ಬಸವರಾಜು, ತಾಲೂಕು ಪ್ರಧಾನ ಕಾರ್ಯದರ್ಶಿ ವಿದ್ಯಾ ಸಾಗರ್, ಮುಖಂಡ ಕೃಷ್ಣಮೂರ್ತಿ ಇದ್ದರು.
ಗುಬ್ಬಿ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್, ಬಿಜೆಪಿ ತಾಲೂಕು ಅಧ್ಯಕ್ಷ ಬಲರಾಮಯ್ಯ, ಗುಬ್ಬಿ ಮಂಡಲ ಉಸ್ತುವಾರಿ ಎಚ್.ಎಂ.ರವೀಶ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸಾಗರನಹಳ್ಳಿ, ನಂಜೇಗೌಡ ಇದ್ದರು.