ಚಿತ್ತಾಪುರದ ಸ್ಟೇಷನ್ ರಸ್ತೆಯಲ್ಲಿ ವೀರಶೈವ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯ ಶರಣು ಮೋದಿ ಅಡಿಗಲ್ಲು ನೆರವೇರಿಸಿದರು. ಕಂಬಳೇಶ್ವರ ಶ್ರೀ, ವಿಶ್ವನಾಥ ಪಾಟೀಲ್ ಹೆಬ್ಬಾಳ, ಲಿಂಗಾರೆಡ್ಡಿಗೌಡ ಭಾಸರೆಡ್ಡಿ, ರಮೇಶ ಮರಗೋಳ, ಸೋಮಶೇಖರ ಪಾಟೀಲ್ ಇತರರಿದ್ದರು.
- ಮಹಾಸಭೆ ಜಿಲ್ಲಾಧ್ಯಕ್ಷ ಶರಣು ಮೋದಿ ಹೇಳಿಕೆ
- ಚಿತ್ತಾಪುರದಲ್ಲಿ ಕಾಮಗಾರಿಗೆ ಚಾಲನೆ
ಚಿತ್ತಾಪುರ: ವೀರಶೈವ ಕಲ್ಯಾಣ ಮಂಟಪ ನಿರ್ಮಾಣಕ್ಕೆ ವೈಯಕ್ತಿಕ ಹಾಗೂ ಜಿಲ್ಲಾ ಟಕದಿಂದ ಸಹಾಯ ಮಾಡುವುದಲ್ಲದೆ, ಈ ಕಾರ್ಯಕ್ಕೆ ಬೆನ್ನೆಲುಬಾಗಿ ನಿಲ್ಲುವೆ ಎಂದು ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯ ಶರಣು ಮೋದಿ ಹೇಳಿದರು.
ಸ್ಟೇಷನ್ ರಸ್ತೆಯ ವೀರಶೈವ ಸಮಾಜದ ನಿವೇಶನದಲ್ಲಿ ವೀರಶೈವ ಕಲ್ಯಾಣ ಮಂಟಪ (ಹವಾನಿಯಂತ್ರಿತ) ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲೆ ಚಿತ್ತಾಪುರದಲ್ಲಿ ವೀರಶೈವ ಲಿಂಗಾಯತ ಸಮಾಜ ಸಂಟನೆ ಬಲಿಷ್ಠವಾಗಿದೆ. ಹೀಗಾಗಿ ಇಲ್ಲಿ ವೀರಶೈವ ಕಲ್ಯಾಣ ಮಂಟಪ ಹಾಗೂ ವಿದ್ಯಾರ್ಥಿ ವಸತಿನಿಲಯ ನಿರ್ಮಾಣ ಮಾಡುವುದು ಅವಶ್ಯವಿದೆ ಎಂದರು.
ಬಸವ ಭವನ ನಿರ್ಮಾಣ ಸಮಿತಿ ಅಧ್ಯ ರಮೇಶ ಮರಗೋಳ ಮಾತನಾಡಿ, ಸುಸಜ್ಜಿತ ಕಲ್ಯಾಣ ಮಂಟಪಕ್ಕೆ ಅಂದಾಜು 2 ಕೋಟಿ ರೂ. ವೆಚ್ಚವಾಗಲಿದೆ. ಈ ಹಣವನ್ನು ವೀರಶೈವ ಸಮಾಜದ ಮುಖಂಡರಿಂದ ದೇಣಿಗೆ ರೂಪದಲ್ಲಿ ಸಂಗ್ರಹ ಮಾಡಲಾಗುವುದು. ಈಗಾಗಲೇ ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ 5 ಲ ರೂ. ದೇಣಿಗೆ ನೀಡಿದ್ದಾರೆ. ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಇದೆ ಎಂದು ತಿಳಿಸಿದರು.
ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ಪಟ್ಟಣದ ಹೃದಯ ಭಾಗದಲ್ಲಿ 90*150 ಅಳತೆ ನಿವೇಶನ ವೀರಶೈವ ಸಮಾಜಕ್ಕಾಗಿ ಖರೀದಿಸಿ ಇಟ್ಟಿದ್ದ ಶಿವರಾವ ಪಾಟೀಲ್ ಬೆಳಗುಂಪಾ ಅವರ ಕಾರ್ಯ ಶ್ಲಾನೀಯ. ಕಲ್ಯಾಣ ಮಂಟಪ ನಿರ್ಮಾಣ ನಂತರ ಬಡವರಿಗೆ ಉಪಯೋಗ ಆಗುವಂತೆ ನಿರ್ವಹಣೆ ಮಾಡಬೇಕು ಎಂದು ಸಲಹೆ ನೀಡಿದರು.
ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ, ಮುಖಂಡರಾದ ವೀರಣ್ಣಗೌಡ ಪರಸರೆಡ್ಡಿ, ಶಿವಾನಂದ ಪಾಟೀಲ್ ಮರತೂರ, ಚಂದ್ರಶೇಖರ ಅವಂಟಿ, ಭೀಮಣ್ಣ ಸಾಲಿ ಮಾತನಾಡಿದರು.
ಮಹಾಸಭಾ ತಾಲೂಕು ಗೌರವಾಧ್ಯ ಲಿಂಗಾರೆಡ್ಡಿ ಭಾಸರೆಡ್ಡಿ, ಬಸವ ಜಯಂತಿ ಸಮಿತಿ ಉತ್ಸವ ಸಮಿತಿ ತಾಲೂಕು ಅಧ್ಯ ಬಸವರಾಜ ಪಾಟೀಲ್ ಬೆಳಗುಂಪಾ, ಪ್ರಮುಖರಾದ ಶಿವಶರಣಯ್ಯ ಪುರದಯ್ಯನಮಠ, ಸೋಮಶೇಖರ ಪಾಟೀಲ್ ಬೆಳಗುಂಪಾ, ರಾಜಶೇಖರ ತಿಮ್ಮನಾಯಕ, ಮಲ್ಲಿನಾಥ ಇಂದೂರ, ಜಗಣ್ಣಗೌಡ ರಾಮತೀರ್ಥ, ಆನಂದ ಪಾಟೀಲ್ ನರಿಬೋಳ, ಓಂಕಾರೇಶ್ವರ ರೇಷ್ಮಿ, ಮಹಾಂತಗೌಡ ಪಾಟೀಲ್, ಡಾ.ಪ್ರಭುರಾಜ ಕಾಂತಾ, ಮಲ್ಲಿನಾಥ ಪಾಟೀಲ್ ಸನ್ನತಿ, ರವೀಂದ್ರರೆಡ್ಡಿ ಭಂಕಲಗಿ, ನಾಗುಗೌಡ ಅಲ್ಲೂರ, ರವೀಂದ್ರರೆಡ್ಡಿ ಅನ್ನಪೂರ, ಕೋಟೇಶ್ವರ ರೇಷ್ಮಿ, ಡಿ.ಕೆ.ಪಾಟೀಲ, ರವಿ ಪಡ್ಲಾ, ರಮೇಶ್ ಬೊಮ್ಮನಳ್ಳಿ, ನಾಗಯ್ಯ ಗುತ್ತೇದಾರ, ಹಣಮಂತ ಸಂಕನೂರ, ವಿಶ್ವನಾಥ ಕುಂಬಾರ, ಅಂಬರೀಷ್ ಸುಲೇಗಾಂವ, ಸೂರ್ಯಕಾಂತ ಪಾಟೀಲ್, ಶಾಂತಣ್ಣ ಚಾಳೀಕಾರ ಇತರರಿದ್ದರು.