Cooperation, factory, demand, fulfill, Bailhongal 
ರಾಜ್ಯ

ಸಹಕಾರ ಕಾರ್ಖಾನೆ ಬೇಡಿಕೆ ಈಡೇರಿಸಿ

ವಿಜಯವಾಣಿ ಸುದ್ದಿಜಾಲ ಬೈಲಹೊಂಗಲ
ಬೆಳಗಾವಿ ನಗರಕ್ಕೆ ಆಗಮಿಸಿದ್ದ ಡಿ.ಕೆ.ಶಿವಕುಮಾರ ಅವರನ್ನು ಮಲ್ಲಮ್ಮನ ಬೆಳವಡಿ ಸೋಮೇಶ್ವರ ಸಕ್ಕರೆ ಕಾರ್ಖಾನೆ ಅಧ್ಯ ಬಸವರಾಜ ಬಾಳೇಕುಂದರಗಿ ಹಾಗೂ ಆಡಳಿತ ಮಂಡಳಿ ಸದಸ್ಯರು ಈಚೆಗೆ ಸನ್ಮಾನಿಸಿದರು.
ಸಕ್ಕರೆ ಕಾರ್ಖಾನೆಗಳ ಕುರಿತು ನಡೆದ ಸಭೆಯಲ್ಲಿ ಬಸವರಾಜ ಬಾಳೇಕುಂದರಗಿ ಮಾತನಾಡಿ, ಸಹಕಾರ ರಂಗದ ಕಾರ್ಖಾನೆಗಳು ಸಂಕಷ್ಟದಲ್ಲೂ ಖಾಸಗಿ ಕಾರ್ಖಾನೆಗಳ ಪೈಪೋಟಿ ಎದುರಿಸುವ ಮೂಲಕ ರೈತರ ಶ್ರೇಯೋಭಿದ್ಧಿಗಾಗಿ ಶ್ರಮಿಸುತ್ತಿವೆ. ಇವುಗಳ ಉಳಿಗಾಗಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದರು.
ಬೇಡಿಕೆಗಳ ಪಟ್ಟಿಯನ್ನು ರಾಜ್ಯದ 11 ಸಕ್ಕರೆ ಕಾರ್ಖಾನೆಗಳ ಪರವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಸಲ್ಲಿಸಲಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಸರ್ಕಾರ ಮಟ್ಟದಲ್ಲಿ ಸಹಕಾರ ಕಾರ್ಖಾನೆಗಳನ್ನು ಉತ್ತೇಜಿಸಲು ಪರಾಮರ್ಶಿಸಲಾವುದು ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಮಲಪ್ರಭಾ ಮಂಡಳಿ ನಿಯೋಗ ರಾಜ್ಯ ಮಹಾಮಂಡಳ ಅಧ್ಯ ಎಚ್​.ಎಸ್​.ಶಿವಶಂಕರ, ಉಪಾಧ್ಯ ಸಂದೀಪ ಪಾಟಿಲ, ನಿರ್ದೇಶಕರಾದ ಮಲ್ಲಣ್ಣ ಯಾದವಾಡ, ಬಸವರಾಜ ಹೋಳಿ, ಸೋಮೇಶ್ವರ ಸಕ್ಕರೆ ಕಾರ್ಖಾನೆ ಉಪಾಧ್ಯ ರಾಜು ಕುಡಸೋಮಣ್ಣ, ಅಶೋಕ ಬಾಳೇಕುಂದರಗಿ, ಮಹಾಂತೇಶ ಮತ್ತಿಕೊಪ್ಪ, ಶ್ರೀಶೈಲ ಶರಣಪ್ಪನವರ, ಶ್ರೀಶೈಲ ಮೂಗಬಸವ, ರಾಮಚಂದ್ರ ಕಕ್ಕಯ್ಯನವರ, ಅದೃಶ್ಯಪ್ಪ ಕೊಟಬಾಗಿ, ಅಶೋಕ ಯರಗೊಪ್ಪ ಹಾಗೂ ಮಲಪ್ರಭಾ ಸಕ್ಕರೆ ಕಾರ್ಖಾನೆ ನಿರ್ದೇಶಕರು ಇತರರಿದ್ದರು.
x