ನಾಯ್ಕಲ್ ಗ್ರಾಮದಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪರಿಷ್ಕರಣೆಯನ್ನು ವಡಗೇರಾದ ಸೆಕ್ಷನ್ ಅಧಿಕಾರಿ ಥಾಮಸ್, ಹಿರಿಯ ಸಹಾಯಕ ಮಾರುತೇಶ್ವರ ಚವ್ಹಾಣ್ ಶನಿವಾರ ಪರಿಶೀಲಿಸಿದರು.
- ಜೆಸ್ಕಾಂ ಜೆಇ ಥಾಮಸ್ ಮನವಿ
- ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆಗೆ ಚಾಲನೆ
ಯಾದಗಿರಿ: ಸಮೀಪದ ವಿವಿಧ ಗ್ರಾಮಗಳಲ್ಲಿ ಗೃಹಲಕ್ಷ್ಮಿ ಫಲಾನುಭವಿಗಳ ಪರಿಷ್ಕರಣೆ ಕಾರ್ಯ ನಮ್ಮ ಸಿಬ್ಬಂದಿ ವರ್ಗ ಆರಂಭಿಸಿದ್ದು, ಗ್ರಾಹಕರು ಅವರಿಗೆ ಸಹಕರಿಸಬೇಕು ಎಂದು ವಡಗೇರಾ ಜೆಸ್ಕಾಂ ಅಧಿಕಾರಿ ಜೆಇ ಥಾಮಸ್ ಹೇಳಿದರು.
ನಾಯ್ಕಲ್ ಗ್ರಾಪಂ ಹಾಗೂ ಗುಲಸರಂ ಗ್ರಾಪಂಗಳಲ್ಲಿನ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮನೆಗಳಿಗೆ ಸಿಬ್ಬಂದಿ ವರ್ಗ ಭೇಟಿ ನೀಡಿ ಪರಿಷ್ಕರಣೆ ಮಾಡುತ್ತಿದ್ದು, ಈ ವೇಳೆ ಖುದ್ದು ನಾನೇ ಭೇಟಿ ನೀಡಿ ಪರಿಶೀಲಿಸಿದ್ದೇನೆ ಎಂದರು.
ನಂತರ ಮಾತನಾಡಿದ ಅವರು, ಸರ್ಕಾರದ ಆದೇಶದಂತೆ ಹಾಗೂ ಮೇಲಧಿಕಾರಿಗಳ ಸೂಚನೆ ಮೇರೆಗೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮರು ನೋಂದಣಿ ಕಾರ್ಯ ಆರಂಭಿಸಲಾಗಿದೆ. ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಒಟಿಪಿ ಸಂಖ್ಯೆಗಳು ಬರುತ್ತೆದೆ. ಆ ಸಂಖ್ಯೆ ನೋಂದಾಯಿಸಿಕೊಂಡು ಮರು ಗೃಹಲ್ಮ ಯೋಜನೆಗೆ ಅರ್ಹರಾಗುತ್ತಾರೆ ಎಂದು ಹೇಳಿದರು.
ಈಗಾಗಲೇ ಜುಲೈ 1ನೇ ತಾರಿಕಿನಿಂದ ಪರಿಷ್ಕರಣೆ ಆರಂಭವಾಗಿದ್ದು, ಶುಕ್ರವಾರ ಉಳ್ಳೆಸೂಗೂರ ಗ್ರಾಪಂ ಮತ್ತು ಹಾಲಗೇರಾ ಗ್ರಾಪಂ ವ್ಯಾಪ್ತಿಯಲ್ಲಿನ ಗೃಹಲಕ್ಷ್ಮಿ ಫಲಾನುಭವಿಗಳನ್ನು ಪರಿಷ್ಕರಣೆ ಮಾಡಲಾಗಿದೆ ಈ ವೇಳೆ ಗ್ರಾಹಕರು ನಮ್ಮ ಸಿಬ್ಬಂದಿಗೆ ಸಹಕರಿಸಬೇಕು ಎಂದು ಹೇಳಿದರು. ಹಿರಿಯ ಸಹಾಯಕ ಮಾರುತೇಶ್ವರ ಚವ್ಹಾಣ್, ಗ್ರಾಮ ವಿದ್ಯುತ್ ಪ್ರತಿನಿಧಿ ಮಹ್ಮದ್ ಇಸ್ಮಾಯಿಲ್, ಮರಿಲಿಂಗಪ್ಪ ಇತರರಿದ್ದರು.