Cooperate in the construction of the Ambedkar statue.
ಅಂಬೇಡ್ಕರ್ ವೃತ್ತದಲ್ಲಿ ಪುತ್ಥಳಿ ನಿಮಾರ್ಣಕ್ಕೆ ಒಕ್ಕೂಟ ತಾಲೂಕು ಆಡಳಿತಕ್ಕೆ ಸರ್ವಾನುಮತದಿಂದ ಬೆಂಬಲ ನೀಡುತ್ತದೆ ಎಂದು ತಾಲೂಕಿನ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ಆರ್.ಸತ್ಯನಾರಾಯಣ ತಿಳಿಸಿದರು.
ಹೊರವಲಯದ ಸಮಾನತಾ ಸೌಧದಲ್ಲಿ ಒಕ್ಕೂಟದಿಂದ ಹಮ್ಮಿಕೊಂಡಿದ್ದ ತುರ್ತು ಸಭೆಯಲ್ಲಿ ಮಾತನಾಡಿ, ದಲಿತರಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ. ಇದರಲ್ಲಿ ಯಾವುದೇ ರೀತಿಯ ರಾಜಕಾರಣ ಅವಶ್ಯಕತೆ ಇಲ್ಲ. ರಾಜಕೀಯ ಬಂದಾಗ ರಾಜಕಾರಣ ಮಾಡೋಣ. ಆದರೆ ಸಮುದಾಯದ ವಿಷಯದಲ್ಲಿ ಸಹಬಾಳ್ವೆ ನಡೆಸುವ ನಿಟ್ಟಿನಲ್ಲಿ ದಲಿತರ ಅಭಿವೃದ್ಧಿಗೆ ಸಹಕಾರ ನೀಡಬೇಕು. ನಗರದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.
ಹಿರಿಯ ಮುಖಂಡ ಬಿ.ಕೆ.ನರಸಿಂಹಮೂರ್ತಿ ಮಾತನಾಡಿ, ಅಂಬೇಡ್ಕರ್ ವೃತ್ತದಲ್ಲಿರುವ ವಿವಾದಾತ್ಮಕ ಸ್ಥಳ ಭಜನಾ ಮಂದಿರವಲ್ಲ. ಅದು ಕಸಾಯಿಖಾನೆಗೆ ಸಂಬಂಧಿಸಿದ ಜಾಗ. ಆದರೆ ಕಾರಾಣಾಂತರಗಳಿಂದ ವಿಭಾಗೀಯ ಆಯುಕ್ತರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದಲ್ಲಿ ಜಾಗದ ವಿವಾದ ಬಗೆಹರಿದ ನಂತರ ಅದೇ ಸ್ಥಳದಲ್ಲಿ ಅಂಬೇಡ್ಕರ್ ಗ್ರಂಥಾಲಯ ನಿರ್ಮಿಸಿ ವಿದ್ಯಾರ್ಥಿಗಳಿಗೆ ಹಾಗೂ ಓದುಗರಿಗೆ ಅನುಕೂಲ ಕಲ್ಪಿಸಬೇಕು. ತಾಲೂಕಿನಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಹೋರಾಟಕ್ಕೆ ಇತಿಹಾಸವಿದೆ ಎಂದರು.
ಹುಲಿಕುಂಟೆ ಅಶ್ವತಪ್ಪ, ಮಂಜಣ್ಣ, ದಲಿತ ಅಶ್ವತ್ಥ, ಚೆಲುವಾದಿ ನಾರಾಯಣಸ್ವಾಮಿ, ನೆಹರುಜಿ ಕಾಲನಿ ಗೋಪಾಲ, ರಘು, ಮಾದರ ಮಹಾಸಭಾ ತಾಲೂಕು ಅಧ್ಯಕ್ಷ ನಾಗಾರ್ಜುನ, ಶ್ರೀನಿವಾಸ್, ರಾಮು, ಬಾಲಕೃಷ್ಣ, ನರಸಿಂಹಮೂರ್ತಿ, ಬೊಟುಕೃಷ್ಣಪ್ಪ, ಗುಂಡಾಪುರ ಮೂರ್ತಿ, ರಮಾಪುರ ನಾಗರಾಜು, ಎಚ್.ಎಂ.ವೆಂಕಟೇಶ್, ಹಂಪಸಂದ್ರ ಆದೀಶ, ಬೆಳಚಿಕ್ಕನಹಳ್ಳಿ ವೆಂಕಟೇಶ್, ಸೂರ್ನಾಯಕನಹಳ್ಳಿ ನಾರಾಯಣಪ್ಪ, ಯುವ ಮುಖಂಡ ವಿಜಯಕುಮಾರ್, ಕುದುರೆಬ್ಯಾಲೆ ಕಿರಣ್, ರಾಮಚಂದ್ರಪುರ ಶ್ರೀನಿವಾಸ್ ಇದ್ದರು.